Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಿ : ಡಾ.ಶರಣಪ್ರಕಾಶ್ ಪಾಟೀಲ್

ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.25:
ಮಾಧ್ಯಮ ರಂಗವೂ ಅಭಿಪ್ರಾಾಯ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಜನಾಭಿಪ್ರಾಾಯದ ಮುಂದೆ ಸರ್ಕಾರಗಳು ತಲೆ ಬಾಗುತ್ತವೆ. ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಿ, ನಕಾರಾತ್ಮಕ ಸುದ್ದಿ ಕಡಿಮೆ ಮಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ಪತ್ರಿಿಕಾ ಭವನದಲ್ಲಿ ಆಯೋಜಿಸಿದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ, ಅಭಿನಂದನೆ, ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿ, ಮುಂದಿನ ಸಮಾಜಕ್ಕೆೆ ಉತ್ತಮ ಸಂದೇಶಗಳನ್ನು ಹೊತ್ತೊೊಯ್ಯಲು, ನಕಾರಾತ್ಮಕ ಸುದ್ದಿಗಳಿಗೆ ಕಡಿವಾಣ ಹಾಕಬೇಕು. ನಿರಂತರ ನಕರಾತ್ಮಕತೆಯಿಂದ ಜನರಲ್ಲಿ ವ್ಯವಸ್ಥೆೆ ಬಗ್ಗೆೆ ಜಿಗುಪ್ಸೆೆ ಬಂದರೆ ಅಪಾಯ. ಸುಧಾರಣೆಗೆ ಸುದ್ದಿ ಆಗಲಿ ಎಂದು ಹೇಳಿದರು.
ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಮಾತನಾಡಿ, ಅಭಿವೃದ್ಧ ಪಥದಲ್ಲಿ ಸಾಗಲು ಎಲ್ಲ ಮಾಧ್ಯಮ ಮಿತ್ರರ ಸಹಕಾರ ಅಪಾರ. ಪತ್ರಕರ್ತರು ತೋರುವ ಕಾಳಜಿ, ಆಶಯವು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಅಪರಾಧ ನಿಯಂತ್ರಣ, ಜನರಲ್ಲಿ ಜಾಗೃತಿ ಮೂಡಿಸಲು ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತಿಿದೆ. ಪೊಲೀಸ್ ಮತ್ತು ಪತ್ರಕರ್ತರು ಎತ್ತಿಿನ ಬಂಡಿ ಇದ್ದಂತೆ, ಅಪರಾಧಗಳನ್ನು ಕಡಿವಾಣ ಹಾಕಲು ಸಹಕಾರಿ ಆಗಿದೆ ಎಂದರು.
ಪತ್ರಕರ್ತರ ಸಂದ ರಾಜ್ಯಾಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಪತ್ರಕರ್ತರ ಸಂಘ 94 ರ ವಸಂತದಲ್ಲಿದ್ದು, ಇಡೀ ದೇಶದಲ್ಲಿ ಅತ್ಯಂತ ಸುಭದ್ರ ಸಂಘಟನೆಯಾಗಿದೆ. ಡಿವಿಜಿ ಭದ್ರ ಬುನಾದಿ ಹಾಕಿದ್ದು, ಇದು ಪ್ರಜಾಪ್ರಭುತ್ವದ ಅಡಿ ಚುನಾವಣೆ ನಡೆಸಿ, ಆಯ್ಕೆೆ ಮಾಡಲಾಗುತ್ತದೆ. ಪತ್ರಕರ್ತ ಎಂಬ ಪವಿತ್ರ ಪದವನ್ನು ಯಾರ್ಯಾರೋ ದುರ್ಬಳಕೆ ಮಾಡಿಕೊಳ್ಳುತ್ತಿಿದ್ದು, ಅಂತವರನ್ನು ಹೊರಕಳಿಸಬೇಕಿದೆ ಎಂದು ಹೇಳಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಾಮಿ ಮಾತನಾಡಿ, ನಿರೀಕ್ಷೆ ಮೀರಿ ಜಿಲ್ಲೆಯ ಪತ್ರಕರ್ತರು ಬೆಂಬಲಿಸಿ, ಗೆಲ್ಲಿಸಿದ್ದು, ಚುನಾವಣೆ ಸ್ಪರ್ಧೆಗೆ ಮಾತ್ರ ಆರೋಪ, ಪ್ರತ್ಯಾಾರೋಪಗಳನ್ನು ಬಿಟ್ಟು, ಒಟ್ಟಾಾಗಿ ಸಾಗೋಣ. ಕಳೆದ ಮೂರು ವರ್ಷದಿಂದ ಸಂಘದ ಪ್ರಗತಿಗೆ ಶ್ರಮಿಸಿದ್ದು, ಭವಿಷ್ಯದಲ್ಲಿ ಗ್ರಂಥಾಲಯ ಮಾಡುವ, ಗ್ರಾಾಮೀಣ ಪತ್ರಕರ್ತರಿಗೆ ವೃತ್ತಿಿ ನೈಪುಣ್ಯತೆ ಕಾರ್ಯಾಗಾರ ನಡೆಸುವ ಯೋಜನೆ ಇದೆ. ಪತ್ರಿಿಕಾ ಭವನದಲ್ಲಿರುವ ಎರಡು ಕೋಣೆಗಳಲ್ಲಿ ವಸತಿ ವ್ಯವಸ್ಥೆೆ ಕಲ್ಪಿಿಸಲಾಗುವುದು. ಭವನದ ಪಕ್ಕದಲ್ಲಿರುವ ಸರ್ಕಾರಿ ಕಟ್ಟಡ ಪಡೆದು, ಕ್ರೀೆಡಾಂಗಣ ಮಾಡುವ ಯೋಜನೆ ಇದೆ ಎಂದು ಹೇಳಿದರು.
ಸಂದ ರಾಜ್ಯ ಕಾರ್ಯದರ್ಶಿ ಪಿ.ಲೋಕೇಶ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಪತ್ರಕರ್ತರಾದ ಟಿ.ವಿ.ಶಿವಾನಂದನ್, ದೇವಯ್ಯ ಗುತ್ತೇದಾರ್, ಪ್ರಭಾಕರ ಜೋಶಿ, ಜಯತೀರ್ಥ ಪಾಟೀಲ್, ಪ್ರವಿಣ ರೆಡ್ಡಿಿ, ಶರಣಯ್ಯ ಹಿರೇಮಠ, ಅಶೋಕ ಕಪನೂರ, ಸತೀಶ ಜೇವರ್ಗಿ, ಸಂಗಮನಾಥ ರೇವತಗಾಂವ, ಭವಾನಿಸಿಂಗ್ ಠಾಕೂರ ಇತರರಿದ್ದರು. ರಾಜ್ಯ ಕಾರ್ಯಕಾರಿ ಸದಸ್ಯ ರಾಜಕುಮಾರ ಉದನೂರ ನಿರೂಪಣೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಸ್ವಾಾಗತಿಸಿದರು. ಉಪಾಧ್ಯಕ್ಷ ಅರುಣಕುಮಾರ ಕದಂ ವಂದಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ