Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.

ಆರಾಮದಾಯಕವಾದ ಆಕರ್ಷಕ ಡಿಯೊ 125 ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ

ಜು.27; ಮೋಟೋ-ಸ್ಕೂಟರ್ ಇನ್ ಇಂಡಿಯಾ ಸಂಸ್ಥೆಯು ಸ್ಕೂಟರ್ ವಿಭಾಗದಲ್ಲಿ ನಿರ್ವಿವಾದ ನಾಯಕನಾಗಿದ್ದು, ಇದೀಗ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ)ದಿಂದ ಎಲ್ಲಾ ರೀತಿಯಲ್ಲೂ ಅನುಕೂಲಕವಾದ ಹೊಸ, ಸ್ಪೋರ್ಟಿ, ಸುಧಾರಿತ ತಂತ್ರಜ್ಞಾನ ಮತ್ತು ಆರಾಮದಾಯಕ ಡಿಯೊ 125 ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಕರ್ನಾಟಕದ ಸಫೈರ್ ಹೋಂಡದ ಮಾರುಕಟ್ಟೆಯ ನಿರ್ದೇಶಕ ಯೋಗೇಶ್ ಮಾಥುರ್ ಮತ್ತು ಸಪೈರ್ ಹೋಂಡಾ ನಿರ್ದೇಶಕ ಮೊಹಮ್ಮದ್ ಹಫೀಜ್ ಹೊಸ ಆವೃತ್ತಿ ಸ್ಕೂಟರ್ ಗಳನ್ನು ಬಿಡುಗಡೆ ಮಾಡಿದರು.ಯೋಗೇಶ್ ಮಾಥುರ್ ಮಾತನಾಡಿ, ಹೊಸ ಡಿಯೋ 125 ಆಕರ್ಷಕವಾಗಿದ್ದು, ದಕ್ಷಿಣ ಭಾರತದಲ್ಲಿ ಮುಂಚೂಣಿಯಲ್ಲಿದೆ. ವಿಶೇಷವಾಗಿ ದ್ವಿಚಕ್ರ ವಾಹನಗಳು ಬ್ರ್ಯಾಂಡ್ ಆಗಿದ್ದು, ಜನರ ಪ್ರೀತಿ ಮತ್ತು ವಿಶ್ವಾಸವನ್ನು ಪಡೆದುಕೊಂಡಿವೆ. ಡಿಯೊ ಈ ಪ್ರದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎರಡನೇ ದ್ವಿಚಕ್ರ ವಾಹನವಾಗಿ ಹೊರಹೊಮ್ಮಿದೆ. . ಅದರ ಎಲ್ಲಾ ಹೊಸ 125ಸಿಸಿ ಆವೃತ್ತಿಯಲ್ಲಿ ಡಿಯೋ 125 ಸ್ಪೋರ್ಟಿ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ಬಲವಾದ ಅನುಕೂಲತೆಯ ಸಂಯೋಜನೆಯಾಗಿದೆ. ಡಿಯೋ 125 ನೊಂದಿಗೆ, ರೈಡಿಂಗ್‌ನಿಂದ ತಮ್ಮ ಉತ್ಸಾಹವನ್ನು ಹೆಚ್ಚಿಸಲು ಮತ್ತು ಹಿಂದೆಂದಿಗಿಂತಲೂ ರೋಮಾಂಚಕ ಪ್ರಯಾಣವನ್ನು ಅನುಭವಿಸಲು ಸವಾರರನ್ನು ಆಹ್ವಾನಿಸುತ್ತಿದ್ದೇವೆ" ಎಂದರು.

ಇದೇ ಸಂರ್ಭದಲ್ಲಿ 500 ಹೋಂಡಾ ಆಕ್ಟಿವ್ ಸ್ಕೂಟರ್ ವಾಹನಗಳನ್ನು ಬೆಂಗಳೂರಿನ ರಾಯಲ್ ಬ್ರದರ್ಸ್, ರೆಂಟೆಲೋ, ಸೆಲ್ಫ್ ಸ್ಪಿನ್‌ನಲ್ಲಿನ 3 ಪ್ರಮುಖ ಬಾಡಿಗೆ ಪಾಲುದಾರರಿಗೆ ವಿತರಿಸಲಾಗಿದೆ. ಸಫೈರ್ ಹೋಂಡಾ ಎಂ.ಬಿ.ಎಸ್.ಐ ಅಂದರೆ ಮೋಟೋ ಬ್ಯುಸಿನೆಸ್ ಸರ್ವೀಸ್ ಇಂಡಿಯಾ ಪಾಲುದಾರ ಡೀಲರ್ ಆಗಿ ಕಾರ್ಯನಿರ್ವಹಿಸುತ್ತಿದೆ.

2006 ರಲ್ಲಿ ಸ್ಥಾಪನೆಯಾದ ಸಫೈರ್ ಹೋಂಡಾ, ಅದರ ಯುವ ನಿರ್ದೇಶಕ ಮೊಹಮ್ಮದ್ ಹಫೀಜ್ ನೇತೃತ್ವದಲ್ಲಿ ಬೆಂಗಳೂರಿನ ಆರು ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ಕಳೆದ ನಾಲ್ಕು ವರ್ಷಗಳಲ್ಲಿ 45000 ಹೋಂಡಾ ದ್ವಿಚಕ್ರ ವಾಹನಗಳನ್ನು ಸರಬರಾಜು ಮಾಡಿ, ದ್ವಿಚಕ್ರ ವಾಹನಗಳ ಬೃಹತ್ ಪೂರೈಕೆಗಾಗಿ ಪ್ರಮುಖ ಸಂಸ್ಥೆಗಳಿಂದ ಆದ್ಯತೆಯ ಮತ್ತು ವಿಶ್ವಾಸಾರ್ಹ ಡೀಲರ್ ಆಗಿ ಹೊರ ಹೊಮ್ಮಿದೆ ಎಂದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ