Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಬಿ ಜಿ ರಾಮ್ ಜಿ ಯೋಜನೆಗೆ ಶೇ.40ರಷ್ಟು ಅನುದಾನ ಕೊಡಲು ಹಣವೇ ಇಲ್ಲ ರಾಜ್ಯ ಸರ್ಕಾರದ ಖಜಾನೆ ಖಾಲಿ: ಆರ್. ಅಶೋಕ್

 ಸುದ್ದಿಮೂಲ ವಾರ್ತೆ ಬೆಂಗಳೂರು, ಜ.10:
ವಿಬಿ ಜಿ ರಾಮ್ ಜಿ ಯೋಜನೆಗೆ ಹಣ ನೀಡಲು ಕೂಡ ಕಾಂಗ್ರೆೆಸ್ ಬಳಿ ಅನುದಾನವಿಲ್ಲ. ಆ ಮಟ್ಟಿಿಗೆ ಖಜಾನೆ ಖಾಲಿಯಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆೆಸ್ ಇಷ್ಟು ದಿನ ಮನರೇಗಾ ಅಡಿಯಲ್ಲಿ ಹಣ ಕಳ್ಳತನ ಮಾಡುತ್ತಿಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ವಿಬಿ ಜಿ ರಾಮ್ ಜಿ ಯೋಜನೆ ಜಾರಿ ಮಾಡಿ ಪಾರದರ್ಶಕತೆ ಹೆಚ್ಚಿಿಸಿದ್ದಾರೆ. ಈ ಹಿಂದೆ ಪೂರ್ಣ ಅನುದಾನ ಬರುತ್ತಿಿದ್ದರೆ, ಈಗ 60-40 ರಂತೆ ಅನುದಾನ ಹಂಚಿಕೆ ಮಾಡಬೇಕಿದೆ. ಆದರೆ ಶೇ.40 ಹಣ ನೀಡಲು ಕೂಡ ಕಾಂಗ್ರೆೆಸ್ ಬಳಿ ಅನುದಾನವಿಲ್ಲ. ಆ ಮಟ್ಟಿಿಗೆ ಕಾಂಗ್ರೆೆಸ್ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಟೀಕಿಸಿದರು.
ರೈಲು, ಮೆಟ್ರೋೋ ಸೇರಿದಂತೆ ಅನೇಕ ಯೋಜನೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು ಇದೆ. ಅದೇ ರೀತಿ ಈಗ ಉದ್ಯೋೋಗ ಖಾತ್ರಿಿ ಯೋಜನೆಯಡಿಯಲ್ಲಿಯೂ ರಾಜ್ಯ ಸರ್ಕಾರದ ಪಾಲುದಾರಿಕೆ ಮಾಡಬಹುದು ಎಂದು ಹೇಳಿದರು.
ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಈ ಯೋಜನೆಗೆ 2 ಲಕ್ಷ ಕೋಟಿ ರೂ. ನೀಡಿದ್ದರೆ, ಮೋದಿ ಸರ್ಕಾರದ ಅವಧಿಯಲ್ಲಿ 8 ಲಕ್ಷ ಕೋಟಿ ರೂ. ನೀಡಲಾಗಿದೆ. ಗೃಹ ಲಕ್ಷ್ಮಿಿ ಯೋಜನೆಗೆ ನೀಡಲು ಹಣ ಇಲ್ಲದಿರುವ ಸನ್ನಿಿವೇಶದಲ್ಲಿ ಶೇ.40 ಹಣ ನೀಡಬೇಕೆಂದಾಗ ಕಾಂಗ್ರೆೆಸ್ ನಾಯಕರಿಗೆ ಹಸಿ ಮೆಣಸಿನಕಾಯಿ ತಿಂದಂತಾಗಿದೆ. ಅದಕ್ಕಾಾಗಿ ಅಧಿವೇಶನ ಕರೆದು ಅನವಶ್ಯಕ ಚರ್ಚೆ ಮಾಡಲಿದ್ದಾರೆ. ಬೇಕಿದ್ದರೆ ಕಾಂಗ್ರೆೆಸ್ ಸರ್ಕಾರವೇ ಸಂಪೂರ್ಣ ಅನುದಾನ ನೀಡಲಿ. ಇಲ್ಲವಾದರೆ ಹೊಸ ಯೋಜನೆ ಒಪ್ಪಿಿಕೊಳ್ಳಲಿ. ಗ್ಯಾಾರಂಟಿ ತಂದಾಗ ಇದು ಸಮಸ್ಯೆೆಯಾಗಲಿದೆ ಎಂದು ತಜ್ಞರು ಹೇಳಿದ್ದರೂ, ಅವುಗಳನ್ನು ಸರ್ಕಾರ ಜಾರಿ ಮಾಡಿತ್ತು ಎಂದರು.
ಹಿಂದಿನ ಬಿಜೆಪಿ ವಿದ್ಯಾಾನಿಧಿ ಯೋಜನೆ ತಂದಾಗ ನಂತರ ಕಾಂಗ್ರೆೆಸ್ ಅದನ್ನು ರದ್ದು ಮಾಡಿತ್ತು. ಮಕ್ಕಳಿಗೆ ಸೈಕಲ್ ಕೊಡುವ ಯೋಜನೆ ರದ್ದು ಮಾಡಿದ್ದರು. ಈಗ ಕೇಂದ್ರ ಸರ್ಕಾರ ಒಳ್ಳೆೆಯ ಯೋಜನೆ ತಂದರೆ ಅದನ್ನು ವಿರೋಧಿಸಲು ಜನರ ಹಣದಲ್ಲಿ ಅಧಿವೇಶನ ಮಾಡುತ್ತಿಿದ್ದಾರೆ ಎಂದರು.
ಕಾಂಗ್ರೆೆಸ್ ಸರ್ಕಾರ ಲೀಸ್ ಆಧಾರದಲ್ಲಿ ಕೆಲಸ ಮಾಡುತ್ತಿಿದೆ. ವೇಣುಗೋಪಾಲ್ ಅವರು ಸೂಪರ್ ಸಿಎಂ ಆಗಿದ್ದಾರೆ. ಅವರು ಹೇಳಿದಂತೆ ಈ ಸರ್ಕಾರ ಕೆಲಸ ಮಾಡುತ್ತಿಿದೆ. ಈ ಸರ್ಕಾರಕ್ಕೆೆ ಯಾವುದೇ ಅಧಿಕಾರ ಇಲ್ಲ. ಕೋಗಿಲು ಕ್ರಾಾಸ್ ವಿಚಾರ ಬಂದಾಗ ಕಾಂಗ್ರೆೆಸ್‌ನ ಕೋಗಿಲೆ ಕೂಗಿತ್ತು. ಆದರೆ ಕೇರಳದಲ್ಲಿ ಕನ್ನಡ ಉಳಿಸುವ ವಿಚಾರ ಬಂದಾಗ ಕೋಗಿಲೆ ಮೌನವಾಗಿದೆ. ಆದ್ದರಿಂದ ವೇಣುಗೋಪಾಲ್ ಅವರು ಕಾಗೆಯೇ ಹೊರತು ಕೋಗಿಲೆಯಲ್ಲ. ಇವರಿಗೆ ಎಲ್ಲ ಚುನಾವಣೆಗೆ ಕರ್ನಾಟಕದ ಹಣ ಬೇಕಿದೆ. ಕನ್ನಡದ ವಿಚಾರ ಬಂದಾಗ ಇವರು ಬೆಂಬಲಿಸುವುದಿಲ್ಲ ಎಂದು ಟೀಕಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ