Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಚನ ದರ್ಶನ ಪ್ರವಚನ ಉದ್ಘಾಟನೆ ವಚನಗಳ ಅಧ್ಯಯನದಿಂದ ಬದುಕು ಉನ್ನತಿ - ಗುರುಬಸವ ಪಟ್ಟದ್ದೇವರು ಹೇಳಿಕೆ

ಸುದ್ದಿಮೂಲ ವಾರ್ತೆ ಭಾಲ್ಕಿ, ಡಿ.15
ಶರಣರ ವಚನಗಳು ನಮ್ಮ ಬದುಕಿಗೆ ಹಿಡಿದ ಕೈಗನ್ನಡಿ. ಅವರ ಜೀವನ ಮತ್ತು ವಚನಗಳ ಅಧ್ಯಯನ ಮಾಡಿದರೆ, ನಮ್ಮ ಬದುಕನ್ನು ಹೇಗೆ ಉನ್ನತೀಕರಿಸಿಕೊಳ್ಳಬೇಕು ಎಂಬುದು ತಿಳಿಯುತ್ತದೆ ಎಂದು ಹಿರೇಮಠ ಸಂಸ್ಥಾಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾಾನದ ವತಿಯಿಂದ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ 136ನೇ ಜಯಂತ್ಯುತ್ಸವ ನಿಮಿತ್ತ ಭಾನುವಾರ ಆಯೋಜಿಸಿದ್ದ ವಚನ ದರ್ಶನ ಪ್ರವಚನ ಉದ್ಘಾಾಟನಾ ಸಮಾರಂಭದ ಸಾನ್ನಿಿಧ್ಯ ವಹಿಸಿ ಅವರು ಮಾತನಾಡಿದರು.
ಮುಂಜಾನೆಯ ಮಂಜಿನಲ್ಲಿ ಮುಂದಿನ ದಾರಿ ಕಾಣುವುದಿಲ್ಲ ಸೂರ್ಯನ ಕಿರಣಗಳು ಬಂದಾಗ ಮಂಜು ಸರಿದು ದಾರಿ ಸ್ಪಷ್ಟವಾಗಿ ಕಾಣುತ್ತದೆ. ಬದುಕಿನಲ್ಲಿ ಅನೇಕ ಜಂಜಡ ತೊಂದರೆಗಳು ಅಶಾಂತಿ ನೆಲೆ ಮಾಡಿ ಮುಂದಿನ ದಾರಿ ಕಾಣದಿದ್ದಾಗ, ಪ್ರವಚನಗಳ ಮೂಲಕ ಜ್ಞಾನ ಸೂರ್ಯನ ಕಿರಣಗಳಿಂದ ಬದುಕಿನ ಮುಂದಿನ ದಾರಿ ಕಾಣುತ್ತದೆ. ಹಾಗಾಗಿ ಇಂತಹ ಪ್ರವಚನಗಳು ನಮ್ಮ ಬದುಕಿಗೆ ಅತ್ಯವಶ್ಯ ಎಂದು ತಿಳಿಸಿದರು.
ಪ್ರವಚನಕಾರರಾದ ಪ್ರಭುಲಿಂಗ ದೇವರು ಮಾತನಾಡಿ ಮನೆಯಲ್ಲಿ ಕಸ ಬಿದ್ದಾಗ ಪ್ರತಿದಿನ ಸ್ವಚ್ಛಪಡಿಸಿಕೊಳ್ಳುವಂತೆ, ಮನದ ಮೈಲಿಗೆ ತೊಳೆಯಲು ಇಂತಹ ಪ್ರವಚನಗಳು ಪರಿಣಾಮಕಾರಿ ಕೆಲಸ ಮಾಡುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಾಟಿಸಿದ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಂಗಮೇಶ ಗಾಮಾ ಮಾತನಾಡಿ, ಶರಣರ ಮಹಾತ್ಮರ ಬದುಕು ಅವರ ನಡೆ-ನುಡಿಗಳು ನಮ್ಮ ಬದುಕಿನ ಅನೇಕ ಸಮಸ್ಯೆೆಗಳಿಗೆ ಪರಿಹಾರ ನೀಡುತ್ತವೆ. ಆದ್ದರಿಂದ ಜನತೆ ಹೆಚ್ಚು ಇಂತಹ ಪ್ರವಚನಗಳನ್ನು ಆಲಿಸಬೇಕು ಎಂದರು.
ಚನ್ನಬಸವಾಶ್ರಮ ಪರಿಸರದ ಸಂಚಾಲಕ ವಿಶ್ವನಾಥಪ್ಪ ಬಿರಾದರ್‌ಬಸವಗುರುವಿನ ಪೂಜೆ ನೆರವೇರಿಸಿದರು. ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸವರಾಜ ಮರೆ ಅವರು ಧರ್ಮ ಗ್ರಂಥ ಪಠಣ ಮಾಡಿದರು. ಪ್ರವಚನ ಸೇವಾ ಸಮಿತಿಯ ಅಧ್ಯಕ್ಷ ಶಿವಕುಮಾರ ಕಮಠಾಣೆ ಸ್ವಾಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ