Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಾತ್ರಾ ಮಹೋತ್ಸವಕ್ಕೆ ಹರಿದು ಬಂದ ಜನಸಾಗರ ಅದ್ದೂರಿಯಾಗಿ ನಡೆದ ವಳಬಳ್ಳಾರಿ ಚನ್ನಬಸವ ತಾತನವರ ರಥೋತ್ಸವ

ಸುದ್ದಿಮೂಲ ವಾರ್ತೆ ಸಿಂಧನೂರು, ಜ.25:
ತಾಲೂಕಿನ ವಳಬಳ್ಳಾಾರಿ ಸುವರ್ಣಗಿರಿ ವಿರಕ್ತಮಠದ ಲಿಂ. ಚನ್ನಬಸವ ಶಿವಯೋಗಿಗಳವರ 43ನೇ ಜಾತ್ರಾಾಮೋತ್ಸವದ ಅಂಗವಾಗಿ ಭಕ್ತ ಸಾಗರದ ನಡುವೆ ರವಿವಾರ ಸಂಜೆ ಜನಸಾಗರ ಮಧ್ಯೆೆ ಅದ್ದೂರಿ ರಥೋತ್ಸವ ನಡೆಯಿತು.
ಬೆಳಿಗ್ಗೆೆ ಲಿಂ.ಚನ್ನಬಸವ ಶಿವಯೋಗಿಯ ಕತೃ ಗದ್ದುಗೆ ರುದ್ರಾಾಭಿಷೇಕ, ಸಹಸ್ರ ಬಿಲ್ವಾಾರ್ಚನೆ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಬೆಳಗ್ಗೆೆ ಸ್ವರಪ್ರವಚನ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕಲ್ಯಾಾಣ ಕರ್ನಾಟಕ ಭಾಗದ ನಾನಾ ಕಡೆಯಿಂದ ಭಕ್ತರು ಜಾತ್ರೆೆಗೆ ಆಗಮಿಸಿದ್ದರು. ರಥ ಮುಂದಕ್ಕುರುಳಿತ್ತಿಿದ್ದಂತೆ ಸಾವಿರಾರು ಸಂಖ್ಯೆೆಯಲ್ಲಿ ಸೇರಿದ ಭಕ್ತರ ಜಯಘೋಷ ಮುಗಿಲು ಮುಟ್ಟಿಿತು. ರಥಕ್ಕೆೆ ಉತ್ತತ್ತಿಿ, ಬಾಳೆಹಣ್ಣು ಎಸೆದು ಭಕ್ತಿಿ ಸಮರ್ಪಿಸಿದರು. ಮಹಾರಥೋತ್ಸವದ ಬಳಿಕ ಮುಖ್ಯವೇದಿಕೆಯಲ್ಲಿ ಧರ್ಮಸಭೆ ನಡೆಯಿತು.
ಶ್ರೀಮಠದ ಪೀಠಾಧಿಪತಿ ಡಾ.ಸಿದ್ಧಲಿಂಗ ಮಹಾಸ್ವಾಾಮೀಜಿ ನೇತೃತ್ವದಲ್ಲಿ ಬಳ್ಳಾಾರಿ, ಹೊಸಪೇಟೆ, ಹಾಲಕೇರಿಯ ಕೊಟ್ಟೂರೇಶ್ವರ ಸಂಸ್ಥಾಾನಮಠದ ಜಗದ್ಗುರು ಬಸವಲಿಂಗ ಮಹಾಸ್ವಾಾಮಿಗಳು ಸನ್ನಿಿಧಾನವಹಿಸಿದ್ದರು. ಹಾಲ್ವಿಿಯ ಚರಣಗಿರಿ ಸಂಸ್ಥಾಾನಮಠದ ಅಭಿನವ ಮಹಾಂತ ಮಹಾಸ್ವಾಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಡಗಲಿ ನಿಡಗುಂದಿಯ ಶ್ರೀ ರುದ್ರಮುನಿ ಶಿವಾಚಾರ್ಯ, ಮಸ್ಕಿಿ ಗಚ್ಚಿಿನ ಮಠ ವರರುದ್ರಮುನಿ ಶಿವಾಚಾರ್ಯರು, ಯದ್ದಲದೊಡ್ಡಿಿ ವಿರಕ್ತಮಠದ ಶ್ರೀ ಮಹಾಲಿಂಗ ಮಹಾಸ್ವಾಾಮೀಜಿ, ಘನಮಠ ಸಂತೆಕಲ್ಲೂರಿನ ಶ್ರೀ ಸಿರಗುಪ್ಪಾಾದ ಬಸವ ಭೂಷಣ ಮಹಾಸ್ವಾಾಮಿಗಳು, ಗುರುಬಸವ ಮಹಾಸ್ವಾಾಮಿ, ಕರೇಗುಡ್ಡ ಮಹಾಂತಲಿಂಗ ಸ್ವಾಾಮೀಜಿ, ದೇವರು ಕೆಂಪಿನಮಠ, ಶ್ರೀಮಠದ ಕಿರಿಯ ಸ್ವಾಾಮೀಜಿ ಬಸವಲಿಂಗ ಮಹಾಸ್ವಾಾಮಿ, ಅಡವಿ ಅಮರೇಶ್ವರ ಮಠದ ತೋಂಟದಾರ್ಯ ಮಹಾಸ್ವಾಾಮಿಗಳು, ಶಾಸಕ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯ ಸ್ವಾಾಮಿ, ರಾಜ್ಯ ಕೃಷಿ ಬೆಲೆ ಅಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಸುವರ್ಣಗಿರಿ ಪ್ರಶಸ್ತಿಿ ಪುರಸ್ಕೃತ ಡಾ.ಚಿದಾನಂದಗೌಡ ಬೆಳಗುರ್ಕಿ,ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್, ಜಿ.ಪಂ.ಮಾಜಿ ಸದಸ್ಯ ಅಮರೇಗೌಡ ವಿರುಪಾಪುರ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ್, ಆರ್‌ಡಿಸಿಸಿ ಬ್ಯಾಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಜೆಡಿಎಸ್ ತಾಲೂಕಾಧ್ಯಕ್ಷ ಬಸವರಾಜ ನಾಡಗೌಡ, ಗ್ರಾಾಮೀಣ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಲಿಂಗಪ್ಪ ದಡೇಸ್ಗೂರು, ರಾಜುಗೌಡ ಬಾದರ್ಲಿ, ರಂಗನಗೌಡ ಗೊರೇಬಾಳ, ಕ್ರಿಿಬ್ಕೋೋ ನಿರ್ದೇಶಕ ಸಂಜಯ್ ಪಾಟೀಲ್, ಸುಗೂರಯ್ಯ ಸ್ವಾಾಮಿ ಮಠ, ಅಮರೇಗೌಡ ಕಾರ್ಲಕುಂಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಬೆಳಿಗ್ಗೆೆ ಜಂಗಮ ವಟುಗಳಿಗೆ ಅಯ್ಯಾಾಚಾರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ