ಸುದ್ದಿಮೂಲ ವಾರ್ತೆ ಹೊಸಪೇಟೆ, ಜ.15:
ಪತ್ರಿಿಕೆಗಳು ಸಮಾಜದ ಪ್ರತಿಬಿಂಬವಿದ್ದಂತೆ. ಸಂವಿಧಾನ ಮೂರು ಅಂಗಗಳ ಅಂಕುಡೊಂಕುಗಳನ್ನು ತಿದ್ದುವ ಕೆಲಸಮಾಡಬೇಕು. ಹೊಸದಾಗಿ ಮೂಡುತ್ತಿಿರುವ ‘ಹೊಂಬೆಳಕು’ ಪತ್ರಿಿಕೆ ಕನ್ನಡ ಪತ್ರಿಿಕೋದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಿಕೇರಿ ಹೇಳಿ ದರು.
ನಗರದ ಪತ್ರಿಿಕಾ ಭವನದಲ್ಲಿ ನೂತನ ‘ಹೊಂಬೆಳಕು’ ಕನ್ನಡ ದಿನ ಪತ್ರಿಿಕೆ ಲೋಕಾರ್ಪಣೆ ಗೊಳಿಸಿ ಮಾತನಾಡಿದ ಅವರು, ಕನ್ನಡ ಪತ್ರಿಿಕೋದ್ಯಮ ದಲ್ಲಿ ‘ಹೊಂಬೆಳಕು’ ಎಲ್ಲ ಪತ್ರಿಿಕೆಗಳ ರೆಕಾರ್ಡ್ ಬ್ರೇೇಕ್ ಮಾಡುವಂತಾಗಬೇಕು. ಪತ್ರಿಿಕೆಯುವ ಉಜ್ವಲವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಜಿ.ಪಂ.ಸಿಇಓ ನೋಂಗ್ಜಾಾಯಿ ಮೊಹಮ್ಮದ್ ಅಕ್ರಂ ಅಲಿ ಷಾ ಮಾತನಾಡಿ, ಸ್ಥ ಳೀಯರ ಕಷ್ಠ ಕಾರ್ಪಣ್ಯಗಳಿಗೆ ಧ್ವನಿಯಾಗುವ ‘ಹೊಂಬೆಳಕು’ ಪತ್ರಿಿಕೆಗೆ ಸಕ್ಸ ಸ್ ಸಿಗಲಿ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ ಮಾತ ನಾಡಿ, ಈಗಾಗಲೇ ಪತ್ರಿಿಕೆಗಳು ಸಾಕಷ್ಟು ಸಮಸ್ಯೆೆಗಳನ್ನು ಎದುರಿಸುತ್ತಿಿವೆ. ಸೋಷಿಯಲ್ ಮೀಡಿಯಾ ಹಾವಳಿಮಧ್ಯೆೆ ದಿನಪತ್ರಿಿಕೆ ನಡೆಸುವುದು ಸವಾಲಿ ನ ಕೆಲಸವಾಗಿದೆ. ಹೊಂಬಳಕು ಪತ್ರಿಿಕೆ ಪ್ರಾಾದೇಶಿಕ ಹಾಗೂ ರಾಜ್ಯ ಮಟ್ಟದ ಪತ್ರಿಿಕೆಯಾಗಲಿ. ಸರ್ಕಾರ ಹಾಗೂ ಸಂಘಸಂಸ್ಥೆೆಗಳು ಸಹಕಾರ ನೀಡಬೇಕು.
ಹುಡಾ ಮಾಜಿ ಅಧ್ಯಕ್ಷ ರ್ಆ.ಕೊಟ್ರೇೇಶ, ಕುರಬ ಸಮಾಜದ ಹಿರಿಯ ಮುಖಂಡ ಎಲ್.ಸಿದ್ದನಗೌಡರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ, ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬ ನಾಯಕ, ಜಿಲ್ಲಾ ಉಪಾಧ್ಯಕ್ಷ ಉಜ್ಜಿಿನಿ ರುದ್ರಪ್ಪ ಉಪ ಸ್ಥಿಿತರಿದ್ದರು.
ಪತ್ರಿಕೆಗಳು ಸಮಾಜದ ಪ್ರತಿಬಿಂಬವಿದ್ದಂತೆ : ಕವಿತಾ

