ಸುದ್ದಿಮೂಲ ವಾರ್ತೆ
ಬೆಂಗಳೂರು, ನ. 10 : ರಾಮಮೂರ್ತಿ ನಗರಲ್ಲಿ ಸಿಸಿಬಿ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ರಾ ಮೆಟೀರಿಯಲ್ ಬಳಸಿ ಎಂಡಿಎಂಎ ಕ್ರಿಸ್ಟಲ್ ತಯಾರು ಮಾಡ್ತಿದ್ದವನನ್ನು ಬಲೆಗೆ ಬೀಳಿಸಿ 10 ಕೋಟಿ ಮೌಲ್ಯದ ಎಂಡಿಎಂಎ ಡ್ರಗ್ ಸೀಜ್ ಮಾಡಿದ್ದಾರೆ.
ನೈಜೀರಿಯಾದಿಂದ ಬ್ಯುಸಿನೆಸ್ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದ ಖತರ್ನಾಕ್ ಪ್ರಜೆ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಬೆಂಜಮಿನ್ ಬಂಧಿತ ನೈಜೀರಿಯಾ ಪ್ರಜೆ.
ಈತ ಅಡುಗೆ ಮನೆಯಲ್ಲಿಯೇ ಡ್ರಗ್ ಕಿಚನ್ ಫ್ಯಾಕ್ಟರಿ ಬೆಳಕಿಗೆ ಬಂದಿದ್ದು. ಆವಲಹಳ್ಳಿಯ ತನ್ನ ಮನೆಯ ಕಿಚನ್ ನಲ್ಲಿ ಕಚ್ಚಾ ಪದಾರ್ಥ ಬಳಸಿಕೊಂಡು ಸ್ಟೌ ಮೇಲೆ ಪಾತ್ರೆ ಇಟ್ಟು ಅದ್ರ ಮೇಲೆ ಅಸಿಟೋನ್, ಮೀಥೇನ್, ಸೋಡಿಯಂ ಹೈಡ್ರಾಕ್ಸೈಡ್ ನಂತ ಕಚ್ಚಾ ವಸ್ತು ಬಳಸಿ ಬಿಸಿ ಮಾಡ್ತಿದ್ದ. ಆ ಬಳಿಕ ಪ್ರೆಶರ್ ಕುಕ್ಕರ್ ಗೆ ಪೈಪ್ ಅಳವಡಿಸಿ ದೋಸೆಯ ರೀತಿಯ ವಸ್ತುವನ್ನ ಕುಕ್ಕುರ್ ಗೆ ಹಾಕಿ ಹಾವಿಯಿಂದ ಕ್ರಿಸ್ಟಲ್ ಬರುವಂತೆ ಮಾಡಿ ಫೈನಲ್ ಆಗಿ ಎಂಡಿಎಂಎ ಕ್ರಿಸ್ಟಲ್ ತಯಾರು ಮಾಡ್ತಿದ್ದನಂತೆ.
ಈತನ ಮನೆಯಲ್ಲಿ ರೆಡಿಯಾಗಿದ್ದ 5 ಕೆಜಿ ಎಂಡಿಎಂಎ ಹಾಗೂ 5 ಕೆಜಿ ಕಚ್ಚಾ ಪದಾರ್ಥ ಸೀಜ್ ಮಾಡಲಾಗಿದ್ದು, ಇದರ ಮೌಲ್ಯ 10 ಕೋಟಿ ಎಂದು ಅಂದಾಜಿಸಲಾಗಿದೆ. ಸದ್ಯ ಆರೋಪಿಯನ್ನು ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ 7 ದಿನಗಳು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆಫ್ರಿಕಾ ಪ್ರಜೆಗಳಲ್ಲದೆ, ಇಲ್ಲಿನವರನ್ನೂ ಕಸ್ಟಮರ್ ಮಾಡಿಕೊಂಡಿರೋದು ಬೆಳಕಿಗೆ ಬಂದಿದ್ದು, ತನಿಖೆ ಮುಂದುವರಿದಿದೆ.