ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.30:
ಭಾರತೀಯ ಸಂಸ್ಕೃತಿಯಲ್ಲಿ ಭೂಮಿ, ನದಿ, ಪ್ರಕೃತಿಗೆ ನಾವು ಪವಿತ್ರ ಸ್ಥಾಾನಮಾನ ನೀಡಿದ್ದೇವೆ. ನಾಗರಿಕತೆ ತೊಟ್ಟಿಿಲುಗಳಾಗಿರುವ ನದಿಗಳನ್ನು ಆಧುನಿಕತೆ ನೆಪದಲ್ಲಿ ಮಲಿನಗೊಳಿಸುತ್ತಿಿದ್ದೇವೆ ಎಂದು ತುಮಕೂರಿನ ಸಿದ್ದಗಂಗಾ ಮಠದ ಶಿವಸಿದ್ದ ಮಹಾಸ್ವಾಾಮಿಗಳು ಬೇಸರ ವ್ಯಕ್ತಪಡಿಸಿದರು.
ನಗರದ ಸತ್ಯಗಾರ್ಡನ್ನಲ್ಲಿ ರಾಷ್ಟ್ರೀಯ ಸ್ವಾಾಭಿಮಾನ ಆಂದೋಲನ, ನಿರ್ಮಲ ತುಂಗಭದ್ರಾಾ ಅಭಿಯಾನ ಸಮಿತಿ, ಪರ್ಯಾವರಣ ಟ್ರಸ್ಟ್ ಸಂಯುಕ್ತಾಾಶ್ರಯದಲ್ಲಿ ನಿರ್ಮಲ ತುಂಗಭದ್ರಾಾ ಅಭಿಯಾನ 3ನೇ ಹಂತದ ಜಾನಜಾಗೃತಿ ಪಾದಯಾತ್ರೆೆಯ ಸಾರ್ವಜನಿಕ ಜಾಗೃತಿ ಕಾರ್ಯಕ್ರಮದಲ್ಲಿ ಸಾನಿಧ್ಯ ಅವರು ಮಾತನಾಡಿದರು. ಹಿಂದೆ ಪ್ರಕೃತಿ ಮನೋಧರ್ಮಕ್ಕೆೆ ಅನುಗುಣವಾಗಿ ಜೀವಿಸುತ್ತಿಿದ್ದರು. ಆದರೆ ಇಂದು ಆಧುನಿಕತೆಯ ನೆಪದಲ್ಲಿ ಪ್ರಕೃತಿ ಮನೋಧರ್ಮದ ವಿರುದ್ದವಾಗಿ ನಡೆಯುತ್ತಿಿದ್ದೇವೆ. ಕೈಗಾರಿಕೆಗಳು, ವೈಭವದ ಜೀವನದಿಂದ ನದಿಗಳಿಗೆ ತ್ಯಾಾಜ್ಯಗಳನ್ನು ಉಣಬಡಿಸುತ್ತಿಿದ್ದೇವೆ. ನದಿಗಳನ್ನು, ಪರಿಸರವನ್ನು ಹೀಗೆ ಮಲಿನ ಮಾಡುತ್ತಾಾ ಹೋದರೆ ಮುಂದಿನ ಪೀಳಿಗೆಗೆ ಏನು ಕೊಡಲು ಸಾಧ್ಯ? ಜಾಗೃತಿ ಆಂದೋಲನದ ಮೂಲಕ ಸರಕಾರದ ಕಣ್ತೆೆರೆಸುವ ಪ್ರಯತ್ನ ಮಾಡಬಹುದು. ಆದರೆ ನಮ್ಮ ಜವಾಬ್ದಾಾರಿ ಏನು ಎನ್ನುವದನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕಿದೆ. ಪರಿಸರ ಸಂರಕ್ಷಣೆ ಮಾಡಲು ಜಲ ಜಾಗೃತಿ.. ಜನ ಜಾಗೃತಿ ಉದ್ದೇಶವಿದ್ದರೂ ಆತ್ಮ ಜಾಗೃತಿಯಾಗಬೇಕಿದೆ. ವ್ಯವಸ್ಥೆೆ ಬದಲಾವಣೆಗಿಂತ ನನ್ನಿಿಂದ ಬದಲಾವಣೆ ಎನ್ನುವ ಕಲ್ಪನೆ ಮೂಡಬೇಕಿದೆ. ಪರಿಸರ ಸಂರಕ್ಷಣೆ ಸಂಕಲ್ಪವಾಗಬೇಕಿದೆ. ನಿರ್ಮಲ ತುಂಗಭದ್ರಾಾ ಅಭಿಯಾನದ ಮೂಲಕ ಸಿದ್ದವಾಗುವ ವೈಜ್ಞಾಾನಿಕ ವರದಿಯನ್ನು ವಿದ್ಯಾಾರ್ಥಿಗಳಿಗೆ ತಿಳಿಸುವ ಮೂಲಕ ಜನಾಂದೋಲನ ರೂಪಿಸಬೇಕು ಎಂದರು.
ಆರ್ಥಿಕ ತಜ್ಞ, ಪರಿಸರ ಕಾರ್ಯಕರ್ತ ಬಿ.ಎಂ.ಕುಮಾರಸ್ವಾಾಮಿ ಮಾತನಾಡಿ, ಪಶ್ಚಿಿಮ ಘಟ್ಟಗಳು ದಕ್ಷಿಣ ಭಾರತದ ನದಿಗಳ ನೀರಿನ ತೊಟ್ಟಿಿಲಾಗಿದೆ. ಆ ಭಾಗದಲ್ಲಿ ದಟ್ಟವಾದ ಅರಣ್ಯ ಇರುವದರಿಂದಲೇ ಹೆಚ್ಚು ಮಳೆಯಾಗುತ್ತಿಿದೆ. ಆ ಮಳೆ ನೀರೇ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಜನತೆಗೆ ಜೀವ ನದಿಗಳಾಗಿವೆ. ನದಿಗಳು ಸಂಸ್ಕೃತಿಯ ತಳಪಾಯ. ಆರ್ಥಿಕತೆಯ ತಳಪಾಲಾಗಿದೆ. ಅಭಿವೃದ್ದಿ ನೆಪದಲ್ಲಿ ಅರಣ್ಯ ನಾಶ ನಡೆದಿದೆ. ಪಶ್ಚಿಿಮ ಘಟ್ಟಗಳನ್ನು ಉಳಿಸಲು ಗಂಭೀರ ಪ್ರಯತ್ನಗಳಾಗಬೇಕಿದೆ. ನದಿಗಳಲ್ಲಿ ನಿರಂತರವಾಗಿ ಸ್ವಚ್ಛವಾದ ನೀರು ಹರಿಬೇಕಿದೆ ಎಂದರು.
ರಾಷ್ಟ್ರೀಯ ಸ್ವಾಾಭಿಮಾನ ಆಂದೋಲನದ ಅಧ್ಯಕ್ಷ ಬಸವರಾಜ ಪಾಟೀಲ್ ವೀರಾಪುರ ಮಾತನಾಡಿ, ಮಲಿನದಿಂದ ತುಂಗಭದ್ರೆೆ ಆಕ್ರಂದನ ಮಾಡುತ್ತಿಿದ್ದಾಾರೆ. ನದಿ ಸಂಸ್ಕೃತಿಯ ಮೂಲ. ಇಂದು ಅನೇಕ ನದಿಗಳ ಬತ್ತಿಿ ಹೋಗಿವೆ. ಇನ್ನೂ ಕೆಲವು ನದಿಗಳು ಅವಸಾನದ ಅಂಚಿನಲ್ಲಿವೆ. ನಿರ್ಮಲ ತುಂಗಭದ್ರಾಾ ಅಭಿಯಾನ ತಾರ್ಕಿಕ ಅಂತ್ಯ ಕಾಣುವವರೆಗೂ ನಿರಂತರವಾಗಿ ನಡೆಯಲಿದೆ. ನಿರ್ಮಲ ನದಿಗಳನ್ನು ನಮ್ಮ ಮಿಷನ್ ಆಗಬೇಕಿದೆ. ಇಲ್ಲಿದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವದಿಲ್ಲ. ಬದುಕು ಕಟ್ಟಿಿಕೊಟ್ಟಿಿರುವ ತುಂಗಭದ್ರಾಾ ಉಳಿಸಲು ಸಂವೇದನೆ ಇಟ್ಟುಕೊಳ್ಳಬೇಕಿದೆ. ವೈಜ್ಞಾಾನಿಕ ವರದಿ ಸಿದ್ದಪಡಿಸಿ ಸರಕಾರಕ್ಕೆೆ ಸಲ್ಲಿಸಿ ಮುಖ್ಯಮಂತ್ರಿಿ, ಉಪಮುಖ್ಯಮಂತ್ರಿಿಗಳೊಂದಿಗೆ ಚರ್ಚಿಸುತ್ತೇವೆ ಎಂದರು.
ನರಗುಂದಾದ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು, ಯದ್ದಲದೊಡ್ಡಿಿಯ ಮಹಾಲಿಂಗ ಮಹಾಸ್ವಾಾಮಿಗಳು, ಬಂಗಾರಿ ಕ್ಯಾಾಂಪಿನ ಸದಾನಂದ ಶರಣರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಶಾಸಕ ಹಂಪನಗೌಡ ಬಾದರ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವೆಂಕಟರಾವ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಮಾಜಿ ಶಾಸಕ ಮಹಿಮಾ ಪಾಟೀಲ್, ಲಲಿತರಾಣಿ ಶ್ರೀರಂಗದೇವರಾಯಲು, ವರದಾ ೌಂಡೇಶನ್ನ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡಿಿ, ಮುಖಂಡರಾದ ಸೋಮನಗೌಡ ಬಾದರ್ಲಿ, ಸಿದ್ರಾಾಮೇಶ ಮನ್ನಾಾಪುರ, ಕೆ.ಭೀಮನಗೌಡ ಸೇರಿದಂತೆ ಇತರರು ಇದ್ದರು.
ನಿರ್ಮಲ ತುಂಗಭದ್ರಾ ಅಭಿಯಾನ: 3ನೇ ಹಂತದ ಜನಜಾಗೃತಿ ಪಾದಯಾತ್ರೆ ನದಿಗಳು ನಾಗರಿಕತೆಯ ತೊಟ್ಟಿಲು – ಸಿದ್ದಗಂಗಾ ಶ್ರೀಗಳು

