ಸುದ್ದಿಮೂಲ ವಾರ್ತೆ ಬೆಂಗಳೂರು, ಜ.27:
ನಮ್ಮ ದೇಶದಲ್ಲಿ ಯಾರೂ ಕೂಡ ಸಂವಿಧಾನಕ್ಕಿಿಂತ ದೊಡ್ಡವರಲ್ಲ. ಸಂವಿಧಾನ ಎಲ್ಲರಿಗಿಂತ ದೊಡ್ಡದು. ಹಾಗಾಗಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡು ಸಿದ್ಧಪಡಿಸಿದ್ದ ಜಂಟಿ ಅಧಿವೇಶನದ ಭಾಷಣವನ್ನು ಓದಬೇಕಾಗಿದ್ದು ರಾಜ್ಯಪಾಲರ ಸಂವಿಧಾನಬದ್ಧ ಆದ್ಯ ಕರ್ತವ್ಯವಾಗಿತ್ತು ಎಂದು ಶಾಸಕ ಎ.ಎಸ್.ಪೊನ್ನಣ್ಣ ಅವರು ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಮಧ್ಯಾಾಹ್ನ ಪ್ರಾಾರಂಭವಾದ ವಿಧಾನಸಭೆಯ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ನಾನು ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡುವ ಭಾಷಣವನ್ನು ಕೇಳಲು ತುಂಬಾ ಕಾತುರನಾಗಿದ್ದೆ. ಆದರೆ ಅದು ನಿರಾಸೆಯಾಯಿತು. ರಾಜ್ಯಪಾಲರ ಹುದ್ದೆಯು ತುಂಬಾ ಜವಾಬ್ದಾಾರಿಯುತವಾದುದು. ಎರಡು ಸದನಗಳನ್ನು ಹೊಂದಿರುವ ರಾಜ್ಯಗಳಲ್ಲಿ ವರ್ಷದ ಮೊದಲ ಜಂಟಿ ಅಧಿವೇಶನವನ್ನು ರಾಜ್ಯಪಾಲರು ಕಡ್ಡಾಾಯವಾಗಿ ಓದಲೇಬೇಕು ಎಂದು ಹೇಳಿದ ಅವರು ಈ ವಿಚಾರವಾಗಿ ಕೆಲವು ರಾಜ್ಯಗಳಲ್ಲಿ ನಡೆದ ಘಟನೆಗಳಿಗೆ ನೀಡಲಾಗಿರುವ ತೀರ್ಪುಗಳನ್ನು ಉಲ್ಲೇಖಿಸಿ, ರಾಜ್ಯಪಾಲರ ಕರ್ತವ್ಯವೇನು ಎಂಬುದನ್ನು ತಿಳಿಸಿದರು.
ನಮ್ಮ ರಾಜ್ಯ ಸರ್ಕಾರದಿಂದ 4.5 ಲಕ್ಷ ಕೋಟಿ ತೆರಿಗೆ ಹಣ ಕೇಂದ್ರ ಸರ್ಕಾರಕ್ಕೆೆ ಹೋಗುತ್ತಿಿದೆ. ಆದರೆ ಕೇಂದ್ರದಿಂದ ರಾಜ್ಯಕ್ಕೆೆ ಕೇವಲ 60 ಸಾವಿರ ಕೋಟಿ ಹಣ ಬರುತ್ತಿಿರುವುದು ವಿಷಾದನೀಯ. ಕೇಂದ್ರ ಬಜೆಟ್ ನಲ್ಲಿ ಘೋಷಣೆಯಾಗಿರುವಂತಹ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ಬರುತ್ತಿಿಲ್ಲ. ಹೀಗಾದರೆ ರಾಜ್ಯ ಸರ್ಕಾರಕ್ಕೆೆ ಅನ್ಯಾಾಯವಾದಂತೆ ಅಲ್ಲವೆ.. ಇದು ಸಂವಿಧಾನಕ್ಕೆೆ ಆಗುತ್ತಿಿರುವ ಅಪಚಾರ ಎಂದರು.
ಮಹಾತ್ಮಾಾಗಾಂಧಿ ಅವರು ಕಂಡ ಗ್ರಾಾಮೀಣ ಅಭಿವೃದ್ಧಿಿಯ ಕನಸನ್ನು ನನಸು ಮಾಡುವ ಸಲುವಾಗಿ ಇಟ್ಟಂತಹ ಮನ್ರೇೇಗಾ ಯೋಜನೆಯ ಹೆಸರನ್ನು ಕೇಂದ್ರ ಸರ್ಕಾರ ಬದಲಿಸಿರುವುದು ಸರಿಯಲ್ಲ. ಈ ಯೋಜನೆಗೆ ಕೇಂದ್ರ ಸರ್ಕಾರ ದಿಂದ ಶೇಕಡ 90 ಭಾಗವನ್ನು ಹಾಗೂ ರಾಜ್ಯ ಸರ್ಕಾರದಿಂದ ಶೇಕಡ 10 ರಷ್ಟು ಅನುದಾನವನ್ನು ಭರಿಸಲಾಗುತ್ತಿಿತ್ತು. ಆದರೆ ಈಗ ಕೇಂದ್ರ ಸರ್ಕಾರ ಈ ಯೋಜನೆಗೆ ತಿದ್ದುಪಡಿ ತಂದು ಯೋಜನಾ ವೆಚ್ಚವನ್ನು ಶೇಕಡ 60 ಮತ್ತು 40 ರ ಅನುಪಾತಕ್ಕೆೆ ಏರಿಸಿರುವುದು ಸರಿಯಲ್ಲ. ರಾಜ್ಯ ಸರ್ಕಾರಕ್ಕೆೆ ಹೊರೆಯಾಗುವಂತಹ ಯಾವುದೇ ಕಾನೂನುಗಳನ್ನು ರಾಜ್ಯ ಸರ್ಕಾರಗಳೊಂದಿಗೆ ಚರ್ಚೆ ಮಾಡದೇ ಯೋಜನೆಗಳ ಕಾಯಿದೆ-ಕಾನೂನುಗಳಿಗೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರಗಳ ಮೇಲೆ ಹೊರೆಯನ್ನು ಹೊರಿಸುವುದು ಸರಿಯಾದ ಕ್ರಮವಲ್ಲ ಎಂದರು.
ನಮ್ಮ ಸರ್ಕಾರವು ಸಾಮಾಜಿಕ ಭದ್ರತೆಯಡಿ ಗ್ಯಾಾರಂಟಿ ಯೋಜನೆಗಳ ಮೂಲಕ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿರುವ ಜೊತೆಗೆ ಆಹಾರ ಭದ್ರತೆ, ಬಡತನ ನಿರ್ಮೂಲನೆ ಹಾಗೂ ಮಹಿಳಾ ಸಬಲೀಕರಣವನ್ನು ಮಾಡುತ್ತಿಿದೆ. ಜೊತೆಗೆ ಕಬ್ಬು, ಮಾವು, ಮೆಕ್ಕೆೆಜೋಳ, ತೊಗರಿ ಬೆಳೆದು ನಷ್ಟ ಅನುಭವಿಸಿರುವ ರೈತರಿಗೆ ಬೆಂಬಲ ಬೆಲೆಯನ್ನು ನೀಡಿ ಪರಿಹಾರವನ್ನು ಒದಗಿಸಿದೆ ಎಂದರು. ಅದೇ ರೀತಿ ಇತರೆ ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧನೆಗಳ ಬಗ್ಗೆೆ ಅಂಕಿ- ಅಂಶಗಳ ಸಹಿತ ಮಾಹಿತಿ ನೀಡಿದರು.
ಕಾನೂನು ಸುವ್ಯವಸ್ಥೆೆಯನ್ನು ರಾಜ್ಯ ಸರ್ಕಾರವು ಕಾಪಾಡುತ್ತಿಿರುವ ಜೊತೆಗೆ ಡ್ರಗ್ಸ್, ಸೈರ್ಬ ಪ್ರಕರಣ ತಡೆಗೆ ಅತ್ಯುತ್ತಮ ಕ್ರಮವನ್ನು ಜರುಗಿಸುತ್ತಿಿದೆ. ಹಾಗಾಗಿ ನಮ್ಮ ಬೆಂಗಳೂರು ನಗರ ಹೆಚ್ಚು ಸುರಕ್ಷಿತ ನಗರ ಎಂಬ ಹೆಸರನ್ನು ಪಡೆದಿದೆ ಎಂದರು.
ಭಾಷಣದ ಕೊನೆಯಲ್ಲಿ ಸಭಾಧ್ಯಕ್ಷರಲ್ಲಿ ಒಂದು ಮನವಿ ಮಾಡಿದ ಪೊನ್ನಣ್ಣ ಅವರು ಸದನದ ಕಲಾಪದ ವೇಳೆ ಬಹಳಷ್ಟು ಕಾಗದಗಳನ್ನು ಬಳಸಲಾಗುತ್ತಿಿದೆ. ಕೆಲವರಂತೂ ಅದನ್ನು ತಿರುವಿ ಕೂಡ ಹಾಕುವುದಿಲ್ಲ. ಶಾಸಕರುಗಳ ಟ್ಯಾಾಬ್ ಗಳಿಗೆ ಸದನದ ಎಲ್ಲಾ ಮಾಹಿತಿಗಳನ್ನು ಕಳುಹಿಸುವ ವ್ಯವಸ್ಥೆೆ ಮಾಡಿದರೆ ಒಳ್ಳೆೆಯದು ಎಂದರು.
ಇವರ ನಂತರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ , ರಾಜ್ಯಪಾಲರು ರಾಷ್ಟ್ರ ಗೀತೆಗೆ ಅಪಮಾನ ಮಾಡಿದ್ದು ಸರಿಯಲ್ಲ. ಮೊದಲ ಬಾರಿಗೆ ಆಯ್ಕೆೆಯಾಗಿ ಬಂದಿರುವ ಶಾಸಕರೆಲ್ಲರೂ ರಾಜ್ಯಪಾಲರ ಭಾಷಣ ಕೇಳಲು ಉತ್ಸುಕರಾಗಿದ್ದೆವು. ಮನ್ರೇೇಗಾ ಯೋಜನೆಯ ಹೆಸರನ್ನು ಬದಲಿಸಿರುವ ಬಗ್ಗೆೆ ಪ್ರಸ್ತಾಾಪಿಸಿ, ನೆಲ್ಸನ್ ಮಂಡೆಲಾ, ಬರಾಕ್ ಒಬಾಮಾ ಮುಂತಾದವರಿಗೆ ಸ್ಪೂರ್ತಿಯಾಗಿದ್ದ ಗಾಂಧೀಜಿಯವರು ನಮ್ಮವರಿಗೆ ಬೇಡವಾಗಿರುವುದು ಶೋಚನೀಯ ಸಂಗತಿ ಎಂದರು.
ಯಾರೂ ಕೂಡ ಸಂವಿಧಾನಕ್ಕಿಿಂತ ದೊಡ್ಡವರಲ್ಲ – ಎ.ಎಸ್. ಪೊನ್ನಣ್ಣ

