ಸುದ್ದಿಮೂಲ ವಾರ್ತೆ ನವದೆಹಲಿ, ಡಿ.11:
ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಮಾಲಿನ್ಯ ವಿಷಯ ಲೋಕಸಭೆ ಕಲಾಪದಲ್ಲಿ ಗುರುವಾರ ಗಂಭೀರವಾಗಿ ಪ್ರತಿಧ್ವನಿಸಿತು. ಬಿಜೆಪಿ, ಕಾಂಗ್ರೆೆಸ್ ಸೇರಿದಂತೆ ಬಹುತೇಕ ಸಂಸದರು ಮಾಲಿನ್ಯದ ಬಗ್ಗೆೆ ಚರ್ಚೆಯಲ್ಲಿ ಪಾಲ್ಗೊೊಂಡರು.
ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಾಪಿಸಿದ ಒಡಿಶಾದ ಸಂಸದರಿಗೆ ಎಲ್ಲಾಾ ಸದಸ್ಯರು ಕೈಜೋಡಿಸಿದರು. ಪಕ್ಷಾತೀತವಾಗಿ ಸಂಸದರು ವಾಯು ಮಾಲಿನ್ಯದ ಬಗ್ಗೆೆ ಚರ್ಚೆಯಲ್ಲಿ ತೊಡಗಿಸಿಕೊಂಡರು.
ಒಬ್ಬ ಸದಸ್ಯ ದೆಹಲಿಯಿಂದ ಹೊರಗೆ ಅಧಿವೇಶನ ನಡೆಸುವಂತೆ ಮನವಿ ಮಾಡಿದರೆ, ಮತ್ತೊೊಬ್ಬರು ಚೀನಾ ಮಾದರಿ ಗಾಳಿ ಶುದ್ಧೀಕರಣ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಾಯಿಸಿದರು.
ಬಿಜೆಡಿ ರಾಜ್ಯಸಭಾ ಸದಸ್ಯ ಮಾನಸ್ ರಂಜನ್ ಮಂಗರಾಜ್ ಅವರು ಗಾಳಿಯ ಗುಣಮಟ್ಟ ಸುಧಾರಿಸುವವರೆಗೆ ಸಂಸತ್ತಿಿನ ಚಳಿಗಾಲ ಮತ್ತು ಬಜೆಟ್ ಅಧಿವೇಶನಗಳನ್ನು ದೆಹಲಿಯಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಸರ್ಕಾರಕ್ಕೆೆ ಮನವಿ ಮಾಡಿದರು. ರಾಷ್ಟ್ರ ರಾಜಧಾನಿಯ ಮಾಲಿನ್ಯ ಬಿಕ್ಕಟ್ಟನ್ನು ಮಾನವ ನಿರ್ಮಿತ ವಿಪತ್ತು ಎಂದು ಆಪಾದಿಸಿದರು.
ದೆಹಲಿ ವಾಯು ಮಾಲಿನ್ಯವನ್ನು ಪರಿಹರಿಸುವಲ್ಲಿ ಒಡಿಶಾ ಕೈಗೊಂಡ ಕ್ರಮಗಳನ್ನು ಅನುಸರಿಸುವಂತೆಯೂ ಅವರು ಸಲಹೆ ನೀಡಿದರು. ಒಡಿಶಾದಲ್ಲಿ ಚಂಡಮಾರುತಗಳು, ಪ್ರವಾಹಗಳು ಮತ್ತು ನೈಸರ್ಗಿಕ ವಿಕೋಪಗಳನ್ನು ಶಿಸ್ತುಬದ್ಧವಾಗಿ ಎದುರಿಸಲಾಗಿದೆ. ಈ ಹೋರಾಟ ಹೇಗಿರುತ್ತದೆ ಎಂದು ನನಗೆ ತಿಳಿದಿದೆ ಎಂದರು.
ಸದನ ಸುಗಮವಾಗಿ ನಡೆಯಲು ಸಂಸದೀಯ ಅಧಿಕಾರಿಗಳು, ಚಾಲಕರು, ನೈರ್ಮಲ್ಯ ಕಾರ್ಮಿಕರು ಮತ್ತು ಭದ್ರತಾ ಸಿಬ್ಬಂದಿ ತಮ್ಮನ್ನು ವಿಷಗಾಳಿಗೆ ಒಡ್ಡಿಿಕೊಳ್ಳುತ್ತಿಿದ್ದಾರೆ. ನಾವು ಅವರ ನೋವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದು ಸಾಮಾನ್ಯ ಎಂದು ನಾವು ನುಣುಚಿಕೊಳ್ಳಲು ಸಾಧ್ಯವಿಲ್ಲ. ಗರಿಷ್ಠ ಮಾಲಿನ್ಯದ ದಿನಗಳಲ್ಲಿ ಸಂಸತ್ತಿಿನ ಅಧಿವೇಶನಗಳನ್ನು ದೆಹಲಿಯಲ್ಲಿ ನಡೆಸುವುದು ಅನಗತ್ಯವಾಗಿ ಅಪಾಯಕ್ಕೆೆ ಎಡೆಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.
ಭುವನೇಶ್ವರ, ಹೈದರಾಬಾದ್, ಗಾಂಧಿನಗರ, ಬೆಂಗಳೂರು, ಗೋವಾ ಮತ್ತು ಡೆಹ್ರಾಾಡೂನ್ ಸೇರಿದಂತೆ ಶುದ್ಧ ಗಾಳಿ ಮತ್ತು ಮೂಲಸೌಕರ್ಯ ಹೊಂದಿರುವ ನಗರಗಳನ್ನು ಅಧಿವೇಶನಗಳಿಗೆ ಆಯ್ಕೆೆ ಮಾಡಿಕೊಳ್ಳಬೇಕು ಎಂದು ಇದೇ ವೇಳೆ ಸಲಹೆ ನೀಡಿದರು.
ಚೀನಾ ಮಾದರಿ ಅನುಸರಿಸಿ ಕಾಂಗ್ರೆೆಸ್ ಸಂಸದ:
ದೆಹಲಿಯಲ್ಲಿನ ವಾಯು ಮಾಲಿನ್ಯವು ಮಾನವ ನಿರ್ಮಿತ ಬಿಕ್ಕಟ್ಟು ಎಂದು ಕಾಂಗ್ರೆೆಸ್ ಸಂಸದ ಮಾಣಿಕ್ಕಂ ಟ್ಯಾಾಗೋರ್ ಹೇಳಿದರು. ಮಾಲಿನ್ಯವನ್ನು ನಿಭಾಯಿಸಲು ಸರ್ಕಾರವು ಬೀಜಿಂಗ್ (ಚೀನಾ) ಮಾದರಿಯನ್ನು ಅನುಸರಿಸಬೇಕು ಎಂದು ಒತ್ತಾಾಯಿಸಿದರು.
ಜನರು ವಿಷಕಾರಿ ಗಾಳಿಯನ್ನು ಉಸಿರಾಡುತ್ತಿಿದ್ದರೂ, ಸರ್ಕಾರ ಮಾತ್ರ ವಾಯು ಮಾಲಿನ್ಯ ಕಡಿಮೆ ಮಾಡಲು ಯಾವುದೇ ಮಹತ್ವದ ಹೆಜ್ಜೆೆ ಇಟ್ಟಿಿಲ್ಲ ಎಂದು ಆರೋಪಿಸಿದರು.
ಚೀನಾದ ರಾಜಧಾನಿ ಬೀಜಿಂಗ್ ಕೆಲವು ವರ್ಷಗಳ ಹಿಂದೆ ದೆಹಲಿಗಿಂತ ಹೆಚ್ಚು ಕಲುಷಿತವಾಗಿತ್ತು. ಆದರೆ, ಅಲ್ಲಿ ಕಟ್ಟುನಿಟ್ಟಾಾದ ನಿಯಮ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸುವ ಮೂಲಕ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಸಾರಿಗೆ ವ್ಯವಸ್ಥೆೆಯನ್ನು ಬದಲಿಸಿತು. ಹೀಗಾಗಿ, ಅಲ್ಲಿನ ಮಾದರಿಯನ್ನು ದೆಹಲಿಯಲ್ಲಿ ಜಾರಿ ಮಾಡಿ ಮಾಲಿನ್ಯ ನಿಯಂತ್ರಿಿಸಬೇಕು ಎಂದು ಸಲಹೆ ನೀಡಿದರು.
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸಾಮಾನ್ಯವಾಗಿ ಅಕ್ಟೋೋಬರ್ಮತ್ತು ಜನವರಿ ನಡುವೆ ತೀವ್ರವಾಗಿ ಹದಗೆಡುತ್ತದೆ. ಏಕೆಂದರೆ ಕೂಳೆ (ತ್ಯಾಾಜ್ಯ) ಸುಡುವುದು, ವಾಹನಗಳಿಂದ ಹೊರಸೂಸುವ ಹೊಗೆ, ಕಟ್ಟಡ ನಿರ್ಮಾಣದ ಧೂಳು ಸೇರಿದಂತೆ ಹಲವು ಕಾರಣಗಳಿವೆ.

