ಸುದ್ದಿಮೂಲ ವಾರ್ತೆ ರಾಯಚೂರು, ಜ.07:
ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶಿವಯೋಗಿ ಸಿದ್ಧರಾಮ ಜಯಂತಿ ಜನವರಿ 14ರಂದು ವಿಜೃಂಭಣೆಯಿಅದ ಆಚರಿಸಲು ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾಾರ್ ಜಗದೀಶ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನವರಿ 07ರ ಬುಧವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಿಕೊಂಡಿದ್ದ ಶಿವಯೋಗಿ ಸಿದ್ಧರಾಮ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನವರಿ 14ರಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿಿ ಜಿಲ್ಲಾ ರಂಗಮಅದಿರದಲ್ಲಿ ನಡೆಯುವ ಶಿವಯೋಗಿ ಸಿದ್ಧರಾಮ ಜಯಂತಿಯ ವೇದಿಕೆಯ ಕಾರ್ಯಕ್ರಮಕ್ಕೆೆ ಸಮಾಜದ ಮುಖಂಡರು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು. ಅಂದು ಎಲ್ಲಾ ಇಲಾಖೆಗಳ ರಾಯಚೂರು ಜಿಲ್ಲಾ ಹಾಗೂ ರಾಯಚೂರು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಾಯ ಹಾಜರಿರಬೇಕು ಎಂದು ತಿಳಿಸಿದರು.
ಅಂದು ಬೆಳಗ್ಗೆೆ 9 ಗಂಟೆಗೆ ನಗರದ ಆಶಾಪೂರು ವೃತ್ತದಿಂದ ನಡೆಯುವ ಮೆರವಣಿಗೆಯ ಮಾರ್ಗದಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು. ನಗರದ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡಬೇಕು. ಎಲ್ಲ ಸರಕಾರಿ ಕಚೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಕಡ್ಡಾಾಯವಾಗಿ ಜಯಂತಿ ಆಚರಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉತ್ತರಾದೇವಿ, ಸಮಾಜದ ಮುಖಂಡರಾದ ಶಿವರಾಜ, ಹೊನ್ನಪ್ಪ, ಆಂಜೀನಯ್ಯ, ಶಶಿಕಲಾ ಭೀಮರಾಯ, ಯಲ್ಲಪ್ಪ, ದೇವೇಂದ್ರ ಬಿಚ್ಚಾಾಲಿ, ಲಕ್ಷಣ ಗಾಣಧಾಳ, ಶಿವರಾಜ, ಕೆ.ತಿಮ್ಮಪ್ಪ, ಜಂಬಣ್ಣ, ಈರೇಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿಿತರಿದ್ದರು.
ಶಿವಯೋಗಿ ಸಿದ್ಧರಾಮ ಜಯಂತಿ ಆಚರಣೆ ; ಸಿದ್ಧತೆಗೆ ಸೂಚನೆ

