ಸುದ್ದಿಮೂಲ ವಾರ್ತೆ ಬೀದರ್, ಡಿ.29:
ಸಮುದಾಯಗಳ ಅಭಿವೃದ್ಧಿಿಗೆ ಸರ್ಕಾರಗಳು ಅನೇಕ ಯೋಜನೆಗಳ ಮೂಲಕ ಪ್ರಯತ್ನಿಿಸುತ್ತಲೇ ಇದೆ. ಆದರೆ, ಕೆಲ ಕಡೆಗಳಲ್ಲಿ ಸಮುದಾಯದ ಪ್ರಮುಖರೇ ಹಣ ದುರುಪಯೋಗದಂಥ ಪ್ರಕರಣಗಳಲ್ಲಿ ಭಾಗಿಯಾಗುವುದರಿಂದ ಸಮುದಾಯದ ಅಭಿವೃದ್ಧಿಿಗಳೇ ಕುಂಠಿತಗೊಳ್ಳುತ್ತವೆ.
ಈಗ ಇಂಥದ್ದೇ ಘಟನೆ ಬೆಳಕಿಗೆ ಬಂದಿದೆ.
ಕಮಲನಗರ ತಾಲೂಕಿನ ಚಾಂದೋರಿ ಗ್ರಾಾಮದಲ್ಲಿ ಅಲ್ಪಸಂಖ್ಯಾಾತ ಕಲ್ಯಾಾಣ ಇಲಾಖೆ ವತಿಯಿಂದ ಗ್ರಾಾಮದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ ಚರ್ಚ್ ಕಾಮಗಾರಿ ಆರಂಭವಾಗದೇ ಹಣ ಗುಳುಂ ಮಾಡಿದ ಸಂಗತಿ ಬಯಲಾಗಿದೆ.
ಅಲ್ಪಸಂಖ್ಯಾಾತ ನಿರ್ದೇಶನಾಲಯ ಬೆಂಗಳೂರು ಸೂಚನೆ ಮೇರೆಗೆ ಕ್ರಿಿಶ್ಚಿಿಯನ್ ಅಭಿವೃದ್ಧಿಿ ಯೋಜನೆ ಅಡಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆೆ 25 ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಈ ಪೈಕಿ ಚರ್ಚ್ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಬ್ಯಾಾಂಕ್ ಖಾತೆಗೆ ಮೊದಲ ಕಂತಿನ 18.75 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಆದರೆ, ಹಣ ಬಿಡುಗಡೆ ಮಾಡಿ ಒಂದುವರೆ ವರ್ಷ ಮುಗಿದರೂ ಕಾಮಗಾರಿ ಆರಂಭವಾಗಿಲ್ಲ. ಬೋರವೆಲ್ ಹಾಗೂ ಚಿಕ್ಕ ಪುಟ್ಟ ಕೆಲಸಗಳು ನಡೆದದ್ದು ಬಿಟ್ಟರೆ ಯಾವ ಕಾಮಗಾರಿಯೂ ಆರಂಭಿಸಿಲ್ಲ. ಈ ಬಗ್ಗೆೆ ಅಲ್ಪಸಂಖ್ಯಾಾತ ಕಲ್ಯಾಾಣ ಇಲಾಖೆ ಉಪ ನಿರ್ದೇಶಕರು ಚಾಂದೋರಿ ಮೆಥೋಡಿಸ್ಪ್ ಚರ್ಚ್ ಅಧ್ಯಕ್ಷ ದಯಾನಂದ ಧೂಳಪ್ಪರಿಗೆ ಪತ್ರ ಬರೆದು ಕಾಮಗಾರಿ ಆರಂಭಿಸದೇ ಇರುವ ಬಗ್ಗೆೆ ಪ್ರಸ್ತಾಾಪಿಸಿದ್ದಾರೆ. ಹಣ ದುರುಪಯೋಗವಾಗಿದೆ ಎಂದು ಪರಿಗಣಿಸಿ ಕಾನೂನು ಕ್ರಮಕ್ಕೆೆ ಮುಂದಾಗುವ ಬಗ್ಗೆೆ ಎಚ್ಚರಿಕೆ ನೀಡಿದ್ದಾರೆ.
ಮೊದಲ ಕಂತಿನ ಹಣದ ಕಾಮಗಾರಿ ಮುಗಿಸಿದರೆ ಉಳಿದ ಹಣ ಬಿಡುಗಡೆಯಾಗಿ ಸಮುದಾಯ ಭವನ ನಿರ್ಮಾಣವಾಗುತ್ತಿಿತ್ತು. ಆದರೆ, ಕಾಮಗಾರಿ ಅಪೂರ್ಣ ಹಿನ್ನಲೆ ಹಣ ಬಿಡುಗಡೆಯಾಗುತ್ತಿಿಲ್ಲ. ಗ್ರಾಾಮದಲ್ಲಿ ಸಮುದಾಯ ಭವನ ಸಂಬಂಧ ಯಾವ ಕಾಮಗಾರಿಯೂ ನಡೆದಿಲ್ಲ ಎಂದು ಗ್ರಾಾಮದ ಪ್ರಮುಖರು ತಿಳಿಸಿದ್ದಾರೆ.
ಈ ಬಗ್ಗೆೆ ಸುದ್ದಿಮೂಲದೊಂದಿಗೆ ಮಾತನಾಡಿದ ಇಲಾಖೆ ಜಿಲ್ಲಾ ಅಧಿಕಾರಿ ಬಳಿರಾಮ, ಚಾಂದೋರಿ ಸೇರಿ ಇನ್ನು ಹಲವೆಡೆ ಇಂಥ ಪ್ರಕರಣಗಳು ನಡೆದಿವೆ. ಈ ಬಗ್ಗೆೆ ಕಾನೂನು ಕ್ರಮಕ್ಕೆೆ ಮುಂದಾಗುತ್ತಿಿದ್ದು, ಸಂಬಂಧಿಸಿದವರಿಗೆ ಪತ್ರದ ಮೂಲಕ ಎಚ್ಚರಿಕೆ ನೀಡಿ ಬಳಿಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಪಸಂಖ್ಯಾಾತ ಇಲಾಖೆಯಿಂದ ನೋಟಿಸ್ ಚಾಂದೋರಿಯಲ್ಲಿ ಚರ್ಚ್ ಸಮುದಾಯ ಭವನ ಹಣ ಗುಳುಂ !

