ಸುದ್ದಿಮೂಲ ವಾರ್ತೆ ಕಲಬುರಗಿ, ೆ.12:
ಜಿಲ್ಲೆಯಲ್ಲಿ ಮುಂಬರುವ ಬೇಸಿಗೆ ಸಮಯದಲ್ಲಿ ಕುಡಿಯುವ ನೀರು, ಜಾನುವಾರಗಳ ಮೇವು ಹಾಗೂ ಬಿಸಿಗಾಳಿ ಬೀಸಿದಲ್ಲಿ ಅಗತ್ಯ ಮುಂಜಾಗ್ರತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಾಧಿಕಾರದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಕುರಿತಂತೆ ಜಿಲ್ಲಾ ಮತ್ತು ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲು ಹಮ್ಮಿಿಕೊಳ್ಳಲಾಗಿದ್ದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ಸಂಬಂಧಿಸಿದ ಅಧಿಕಾರಿಗಳಿಂದ ಕಲಬುರಗಿ ಜಿಲ್ಲೆಯ ಕುಡಿಯುವ ನೀರಿನ ಮೂಲಗಳಾದ ಬೆಣ್ಣಿಿತೊರ, ಭೀಮಾ, ಚಂದ್ರಂಪಳ್ಳಿಿ, ಗಂಡೋರಿನಾಲ ಸೇರಿದಂತೆ ಇತರೆ ಸ್ಥಳಗಳಲ್ಲಿ ಹಾಗೂ ಕೆರೆಗಳಲ್ಲಿ ಪ್ರಸ್ತುತವಾಗಿ ಲಭ್ಯವಿರುವ ನೀರಿನ ಮಾಹಿತಿ ಪಡೆದ ಅವರು ಭವಿಷ್ಯದಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆೆ ನಿವಾರಣೆಗೆ ಕೈಗೊಳ್ಳಬಹುದಾದ ಅಂಶಗಳ ಕುರಿತು ಚರ್ಚಿಸಿದರು.
ಮುಂಬರುವ ಬೇಸಿಗೆ ಸಮಯದಲ್ಲಿ ಕಲಬುರಗಿ ಜಿಲ್ಲೆಯ ಗ್ರಾಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನ-ಜಾನುವಾರಗಳಿಗೆ ಸೇರಿದಂತೆ ಕುಡಿಯುವ ನೀರಿನ ಸಲುವಾಗಿ ಒಟ್ಟು 4 ಟಿಎಂಸಿ ನೀರಿನ ಅಗತ್ಯವಿದ್ದು ಸದರಿ 4 ಟಿಎಂಸಿ ನೀರಿನ ಪ್ರಮಾಣ ಕಾಯ್ದಿಿರಿಸುವಂತೆ ನೀರಾವರಿ ಸಲಹಾ ಸಮಿತಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಬೇಸಿಗೆಯ ಸಂದರ್ಭದಲ್ಲಿ ಕುಡಿಯುವ ನೀರಿನ ಅಭಾವಕ್ಕೆೆ ಒಳಗಾಗುವ 170 ಕ್ಕೂ ಹೆಚ್ಚು ಗ್ರಾಾಮಗಳಿಗೆ ಲಭ್ಯವಿರುವ ನೀರಿನ ಮೂಲಗಳಾದ ಕೊಳವೆ/ತೆರೆದ ಭಾವಿ, ಹೊಸ ಬೋರವೆಲ್, ಟ್ಯಾಾಂಕರ್ ಸೇರಿದಂತೆ ಖಾಸಗಿ ಮಾಲೀಕರ ಕೊಳವೆ/ತೆರೆದ ಭಾವಿಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ನೀರು ಒದಗಿಸಲು ಈಗಲೇ ಸೂಕ್ತ ಮುಂಜಾಗ್ರತ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಈ ವರ್ಷ ಅಂತರ್ಜಲ ಮಟ್ಟವು ಸುಧಾರಣೆಯಾಗಿರುವುದರಿಂದ ಅವಶ್ಯಕತೆ ಇದ್ದಲ್ಲಿ ಮಾತ್ರ ಹೊಸ ಕೊಳವೆ ಭಾವಿಗಳನ್ನು ಕೊರೆಯಿಸುವ ಕುರಿತು ಸ್ಥಳಗಳನ್ನು ಗುರುತಿಸಿಟ್ಟುಕೊಳ್ಳುವುದು. ಕೆರೆ/ಶೇಖರಣಾ ಜಲಾಶಯಗಳ ಗೇಟ್ಗಳಿಂದ ನೀರು ಸೋರಿಕೆಯನ್ನು ತಡೆಗಟ್ಟುವ ಕುರಿತು ಅವಶ್ಯಕ ಕ್ರಮ ತೆಗೆದುಕೊಳ್ಳುವುದು. ಕಾರ್ಯನಿರ್ವಾಹಕ ಅಭಿಯಂತರರು ಕುಡಿಯುವ ನೀರು ಅವಶ್ಯಕತೆ ಇರುವ ಕಡೆಗೆ ವಿವಿಧ ಪ್ರಸ್ತಾಾವನೆಗಳಿಗೆ ಶೀಘ್ರ ಅನುಮೋದನೆ ಪಡೆದುಕೊಳ್ಳುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ತೀವ್ರ ಉಷ್ಣಾಾಂಶದ ಹೆಚ್ಚಳ ಹಾಗೂ ಬಿಸಿಗಾಳಿ ಪರಿಸ್ಥಿಿತಿ ನಿಭಾಯಿಸಲು ಸಂಬಂಧಪಟ್ಟ ಇಲಾಖೆಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಾಧಿಕಾರದ ಮಾರ್ಗ ಸೂಚಿಯಲ್ಲಿ ತಿಳಿಸಿರುವ ಮಾನದಂಡಗಳನ್ನು ಅನುಸರಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರ ಸಿಂಗ್ ಮೀನಾ, ಉಪಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆೆ ಸಾಹಿತ್ಯ ಆಲದ್ಕಟ್ಟಿಿ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿಿತರಿದ್ದರು.
ಬೇಸಿಗೆ: ಕುಡಿಯುವ ನೀರಿನ ಬಗ್ಗೆ ಮುಂಜಾಗ್ರತೆ ವಹಿಸಲು ಸೂಚನೆ

