ಸುದ್ದಿಮೂಲ ವಾರ್ತೆ ನವದೆಹಲಿ, ಡಿ.29:
ಅರಾವಳಿ ಬೆಟ್ಟ ಮತ್ತು ಶ್ರೇೇಣಿಗಳ ಕುರಿತು ಡಿಸೆಂಬರ್ 20ರಂದು ನೀಡಿದ ತೀರ್ಪನ್ನು ಸುಪ್ರೀೀಂಕೋರ್ಟ್ ಸೋಮವಾರ ತಡೆ ಹಿಡಿದಿದೆ.
ಸುಪ್ರೀೀಂ ಕೋರ್ಟ್ ಮುಖ್ಯ ನ್ಯಾಾಯಮೂರ್ತಿ ಸೂರ್ಯಕಾಂತ್, ನ್ಯಾಾಯಮೂರ್ತಿಗಳಾದ ಜಿ.ಕೆ.ಮಾಹೇಶ್ವರಿ ಹಾಗೂ ಅಗಸ್ಟೀನ್ ಜಾರ್ಜ್ ಮಸೀಹ್ ಅವರನ್ನು ಒಳಗೊಂಡ ರಜಾ ಪೀಠವು ಹಿಂದಿನ ತೀರ್ಪು ತಡೆಹಿಡಿದು ಈ ವಿಷಯ ಕುರಿತು ಸಮಗ್ರವಾಗಿ ಪರಿಶೀಲಿಸಲು ತಜ್ಞರನ್ನು ಒಳಗೊಂಡ ಉನ್ನತ ಸಮಿತಿಯನ್ನು ರಚಿಸಲು ಸೂಚಿಸಿತು.
ಅರಾವಳಿ ಬೆಟ್ಟ ಶ್ರೇೇಣಿಗಳ ಬಗೆಗಿನ ಮರು ವ್ಯಾಾಖ್ಯಾಾನ ಕುರಿತು ಆಕ್ಷೇಪ ತೀವ್ರವಾಗಿರುವ ಹಿನ್ನೆೆಲೆಯಲ್ಲಿ ಸ್ವಯಂ ಪ್ರೇೇರಿತ ಪ್ರಕರಣ ದಾಖಲಿಸಿಕೊಂಡಿರುವ ಸುಪ್ರೀೀಂ ಕೋರ್ಟ್ ವಿಚಾರಣೆ ನಡೆಸಿತು.
ಈ ವಿಷಯದಲ್ಲಿ ಹೆಚ್ಚಿಿನ ಸ್ಪಷ್ಟೀಕರಣದ ಅಗತ್ಯ ಇದೆ ಎಂದು ಹೇಳಿರುವ ಸುಪ್ರೀೀಂ ಕೋರ್ಟ್ ಕೇಂದ್ರ ಹಾಗೂ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜನವರಿ 21ಕ್ಕೆೆ ಮುಂದೂಡಿತು.
ಅರಾವಳಿಮಬೆಟ್ಟ ಮತ್ತು ಶ್ರೇೇಣಿಗಳ ಸಂರಕ್ಷಣೆಗಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಮಿತಿ ನೀಡಿದ್ದ ಏಕರೂಪದ ವ್ಯಾಾಖ್ಯಾಾನವವನ್ನು ಸುಪ್ರೀೀಂ ಕೋರ್ಟ್ ಡಿಸೆಂಬರ್ 20ರಂದು ಅನುಮೋದಿಸಿತ್ತು. ತಜ್ಞರು ವರದಿ ಸಲ್ಲಿಸಿದ ನಂತರ ಹರಿಯಾಣ, ರಾಜಸ್ಥಾಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಹೊಸದಾಗಿ ಗಣಿಗಾರಿಕೆ ಕೈಗೊಳ್ಳಲು ಅನುಮತಿ ನೀಡುವುದನ್ನು ಇದೇ ವೇಳೆ ನಿರ್ಬಂಧಿಸಿತ್ತು.
ರಾಜಸ್ಥಾಾನ, ಗುಜರಾತ್, ಹರಿಯಾ ರಾಜ್ಯಗಳಲ್ಲಿ ಹ್ರಡಿರುವ ಹರವಳಿ ಪರ್ವತಗಳು ನೂರು ಮೀಟರ್ ಅಂತರದಲ್ಲಿರುವ ಎರಡು ಅಥವಾ ಅದಕ್ಕಿಿಂತ ಹೆಚ್ಚಿಿನ ಬೆಟ್ಟಗಳನ್ನು ಅರಾವಳಿ ಶ್ರೇೇಣಿಗಳೆಂದು ಪರಿಗಣಿಸಬೇಕು ಎಂದು ಸಮಿತಿ ಶಿಪಾರಸ್ಸು ಮಾಡಿತ್ತು.
ಈ ಮರು ವ್ಯಾಾಖ್ಯಾಾನದಿಂದ ಅರಾವಳಿ ವ್ಯಾಾಪ್ತಿಿಯ ನೂರು ಮೀಟರ್ಗಿಂತ ಕಡಿಮೆ ಎತ್ತರದ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಮಾನವ ಹಸ್ತಕ್ಷೇಪ ನಡೆದು ಪರಿಸರಕ್ಕೆೆ ಹಾನಿಯಾಗುತ್ತದೆ ಎಂದು ಆಕ್ಷೇಪಿಸಿ ರಾಜಸ್ಥಾಾನ, ಹರಿಯಾಣ ಮತ್ತು ಗುಜರಾಜ್ನಲ್ಲಿ ವ್ಯಾಾಪಕ ಪ್ರತಿಭಟನೆಗಳು ನಡೆಯುತ್ತಿಿವೆ.
ಮೌಂಟ್ ಅಬು ಅತೀ ಎತ್ತರದ ಶಿಖರ
ಅರಾವಳಿ ಪರ್ವತಗಳು ಭಾರತದ ಪಶ್ಚಿಿಮ ಭಾಗದಲ್ಲಿನ ಒಂದು ಪರ್ವತ ಶ್ರೇೇಣಿ. ರಾಜಸ್ಥಾಾನದ ಈಶಾನ್ಯ ಭಾಗದಿಂದ ಆರಂಭವಬಾಗಿ ನೈಋತ್ಯದವರೆಗೆ ಅಂದಾಜು 300 ಮೈಲಿಗಳವರೆಗೆ ಅರಾವಳಿ ಪರ್ವತಗಳು ಹಬ್ಬಿಿವೆ. ಶ್ರೇೇಣಿಯ ಉತ್ತರದ ಅಂಚು ಬಿಡಿಬಿಡಿಯಾದ ಬೆಟ್ಟಗಳು ಮತ್ತು ಶಿಲಾ ಕೊರಕಲುಗಳಂತೆ ಇದೆ. ಹರಿಯಾಣದ ರಾಜ್ಯದ ಮೂಲಕ ಪರ್ವತ ಶ್ರೇೇಣಿ ದೆಹಲಿಯ ಸಮೀಪದವರೆಗೆ ಹರಡಿದೆ. ಅರಾವಳಿ ಶ್ರೇೇಣಿಯ ಅತಿ ಎತ್ತರ ಶಿಖರವೆಂದರೆ ಮೌಂಟ್ ಅಬುವಿನ ಗುರು ಶಿಖರ. ಇದು 5650 ಅಡಿ (1722 ಮೀ.) ಎತ್ತರವಿರುವ ಈ ಶಿಖರ ಅರಾವಳಿ ಶ್ರೇೇಣಿಯ ದಕ್ಷಿಣದ ತುದಿಯಲ್ಲಿದ್ದು ಗುಜರಾತ್ ರಾಜ್ಯದ ಗಡಿಗೆ ಹೊಂದಿಕೊಂಡಿದೆ. ಉದಯಪುರ ನಗರವು ಅರಾವಳಿ ಪರ್ವತಗಳ ದಕ್ಷಿಣದ ಮಗ್ಗುಲಿನಲ್ಲಿದೆ. ಇಲ್ಲಿನ ಅಬುಪರ್ವತ ಒಂದು ಪುಣ್ಯಕ್ಷೇತ್ರ. ಈಶಾನ್ಯದಲ್ಲಿ ದೆಹಲಿಯಿಂದ ನೈರುತ್ಯದಲ್ಲಿ ಗುಜರಾತಿನವರೆಗೆ ಉದ್ದವಾಗಿವೆ. ಸಿಂಧೂ ಮತ್ತು ಗಂಗಾ ನದಿಗಳ ಜಲಾನಯನ ಪ್ರದೇಶಗಳನ್ನು ಪ್ರತ್ಯೇಕಿಸುತ್ತವೆ. ಸರಾಸರಿ ಎತ್ತರ 400 ರಿಂದ 600 ಮೀ. ಈಶಾನ್ಯದಲ್ಲಿ ಅಲ್ಪಾಾರ್ ಮತ್ತು ತೋರಾವಲಿ ಮತ್ತು ನೈರುತ್ಯದಲ್ಲಿ ಮೇವಾರದ ಬೆಟ್ಟಗಳಿವೆ.
ಖೋ (979ಮೀ), ರಘುನಾಥಪುರ (1052 ಮೀ) ಮತ್ತು ತಾತಾಘುಕ್ (870ಮೀ) ಇತರ ಎತ್ತರದ ಶಿಖರಗಳು. ಅರಾವಳಿ ಪರ್ವತ ಶ್ರೇೇಣಿಯಲ್ಲಿ ಲೂನಿ ಮತ್ತು ಬನಾಸ್ ನದಿಗಳು ಉಗಮವಾಗುತ್ತವೆ.

