ಸುದ್ದಿಮೂಲ ವಾರ್ತೆ ಬಳ್ಳಾಾರಿ, ನ.10:
ತುಂಗಭದ್ರ ಜಲಾಶಯದ ಹಿಂಗಾರು ಹಂಗಾಮಿಗೆ ಲಭ್ಯವಿರುವ ನೀರನ್ನು ಕಾಲುವೆಗಳಲ್ಲಿ ಪೂರೈಸಿ ಕೃಷಿಗೆ ನೆರವಾಗುವ ನಿಟ್ಟಿಿನಲ್ಲಿ ನವೆಂಬರ್ 14 ರ ಶುಕ್ರವಾರ ಬೆಳಿಗ್ಗೆೆ 10 ಗಂಟೆಗೆ ಬೆಂಗಳೂರಿನ ವಿಧಾನಸೌಧದ 3 ನೇ ಮಹಡಿಯ ಕೊಠಡಿ ಸಂಖ್ಯೆೆ 334 ರ ಸಮ್ಮೇಳನ ಸಭಾಂಗಣದಲ್ಲಿ 125 ನೇ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದೆ.
ಉಪಮುಖ್ಯಮಂತ್ರಿಿ, ಜಲಸಂಪನ್ಮೂಲ ಇಲಾಖೆ ಹಾಗೂ ಬೆಂಗಳೂರು ನಗರಭಿವೃದ್ಧಿಿ ಸಚಿವರಾದ ಡಿ.ಕೆ. ಶಿವಕುಮಾರ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರು, ಕೊಪ್ಪಳ ಜಿಲ್ಲಾಾ ಉಸ್ತುವಾರಿ ಸಚಿವ ಮತ್ತು ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರೂ ಆದ ಶಿವರಾಜ ಎಸ್.ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ತುಂಗಭದ್ರ ಅಚ್ಚುಕಟ್ಟು ವ್ಯಾಾಪ್ತಿಿಯ ಜನಪ್ರತಿನಿಧಿಗಳು, ಸಚಿವರು ಮತ್ತು ರೈತ ಮುಖಂಡು ಹಾಗೂ ಅಧಿಕಾರಿಗಳು ಪಾಲ್ಗೊೊಳ್ಳಲಿದ್ದಾಾರೆ.

