ಸುದ್ದಿಮೂಲ ವಾರ್ತೆ ಸಿಂಧನೂರು, ನ.30:
ಪ್ರಸ್ತುತ ದಿನಗಳಲ್ಲಿ ಮಹಿಳೆಯರಲ್ಲಿ ಶಿಕ್ಷಣ ಪ್ರಸಾರವಾಗುತ್ತಿಿದ್ದಂತೆ ಎಲ್ಲಾಾ ರಂಗದಲ್ಲೂ ತನ್ನ ಛಾಪು ಮೂಡಿಸುತ್ತಿಿದ್ದಾಾರೆ. ಮಹಿಳಾ ಸಬಲೀಕರಣಕ್ಕೆೆ ಶಿಕ್ಷಣ ಪ್ರಮುಖ ಅಸವಾಗಿದೆ ಎಂದು ಮಾಡಸಿರವಾರ ಸರ್ಕಾರಿ ಪ್ರೌೌಢ ಶಾಲೆಯ ಶಿಕ್ಷಕರಾದ ಸೋಮಣ್ಣ ವಡಕಣ್ಣವರ್ ಹೇಳಿದರು.
ತಾಲ್ಲೂಕಿನ ಅಲಬನೂರು ಗ್ರಾಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಿಕೊಂಡಿರುವ ಪ್ರಥಮ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಐದನೇ ದಿನದ ಉಪನ್ಯಾಾಸ ಕಾರ್ಯ ಕ್ರಮದಲ್ಲಿ ಮಹಿಳಾ ಸಬಲೀಕರಣದಲ್ಲಿ ಶಿಕ್ಷಣದ ಪಾತ್ರ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಾಸ ನೀಡಿದರು. ಹಿಂದೆ ಮಹಿಳೆಗೆ ಸ್ವಾಾತಂತ್ರವಿರಲಿಲ್ಲ. ಅಡುಗೆ ಮನೆಗೆ ಮಾತ್ರ ಮಹಿಳೆಯನ್ನು ಸೀಮಿತಗೊಳಿಸಲಾಗಿತ್ತು. ಭಾರತದ ಮೊದಲ ಶಿಕ್ಷಕಿ ಸಾವಿತ್ರಿಿ ಬಾಯಿ ಪುಲೆಯವರು ಮನುವಾದ ವ್ಯವಸ್ಥೆೆ ವಿರುದ್ಧ ಸ್ವಾಾಭಿಮಾನದ ಬದುಕನ್ನು ಕಟ್ಟಿಿಕೊಟ್ಟ ಧೀರ ಮಹಿಳೆಯಾಗಿದ್ದಾಾಳೆ. ಜೊತೆಗೆ ಬುಡಕಟ್ಟು ಜನಾಂಗದ ಮಹಿಳೆ ದ್ರೌೌಪದಿ ಮುರ್ಮು ಅವರು ಭಾರತದ ಮಹಿಳಾ ರಾಷ್ಟ್ರಪತಿಯಾಗಿ ನಮ್ಮೆೆಲ್ಲರಿಗೆ ಸ್ಪೂರ್ತಿದಾಯಕ ಮಹಿಳೆ ಇವರಾಗಿದ್ದಾಾರೆ. ಇಂತಹ ಹಲವಾರು ಸಾಧನೆ ಮೆರೆದ ಮಹಿಳೆಯರ ಯಶೋಗಾಥೆ ಬಗ್ಗೆೆ ಎನ್ಎಸ್ಎಸ್ ಶಿಬಿರಾರ್ಥಿಗಳಿಗೆ ತಿಳಿಸಿದರು.
ಇತಿಹಾಸ ಉಪನ್ಯಾಾಸಕ ಪಂಪಾಪತಿ ಕಲ್ಮಂಗಿ ಅಧ್ಯಕ್ಷತೆ ವಹಿಸಿದ್ದರು. ತುರ್ವಿಹಾಳ ಸರಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ ಉಪನ್ಯಾಾಸಕ ವಿಶ್ವನಾಥ, ಬಾದರ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸುರೇಶ, ಚನ್ನಬಸವೇಶ್ವರ ಸರಕಾರಿ ಪ್ರೌೌಢಶಾಲೆ ಅಲಬನೂರಿನ ಸಮಾಜವಿಜ್ಞಾಾನ ಶಿಕ್ಷಕಿ ಲಕ್ಷ್ಮಿಿ, ಕಾಲೇಜಿನ ಪ್ರಾಾಚಾರ್ಯ ಡಾ.ಶಿವರಾಜ್ ಎಸ್, ಉಪನ್ಯಾಾಸಕರಾದ ಶಿವರಾಜ ಅಡಗಲ್, ಶಂಕರಗೌಡ ಭಾಗವಹಿಸಿದ್ದರು.
ಅಕ್ಕಮಹಾದೇವಿ ತಂಡದ ನಾಯಕ ಅಯ್ಯಪ್ಪ ಹರೇಟನೂರು ಕಾರ್ಯಕ್ರಮ ನಿರೂಪಿಸಿದರೆ, ಶ್ರೀದೇವಿ ಸಂಗಡಿಗರು ಎನ್ಎಸ್ಎಸ್ ಸ್ವಾಾಗತ ಗೀತೆ ಹಾಡಿದರು. ನಾಗರಾಜ ಎಮ್ ಸ್ವಾಾಗತಿಸಿದರು. ಹಾಗೂ ದೇವರಾಜ ಬೆಳಗುರ್ಕಿ ವಂದಿಸಿದರು.
ಅಲಬನೂರಿನಲ್ಲಿ ಎನ್ಎಸ್ಎಸ್ ವಾರ್ಷಿಕ ಶಿಬಿರ ಮಹಿಳಾ ಶಿಕ್ಷಣದಿಂದ ಸಮಾಜ ಪರಿವರ್ತನೆ : ವಡಕಣ್ಣನವರ್

