ಸುದ್ದಿಮೂಲ ವಾರ್ತೆ ಸಿಂಧನೂರು, ೆ.13:
ಸದೃಢ ಸಮಾಜ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳ ಪಾತ್ರ ಪ್ರಮುಖವಾಗಬೇಕಿದೆ ಎಂದು ಕೋಳಬಾಳದ ಸರಕಾರಿ ಪ್ರೌೌಢ ಶಾಲೆಯ ಮುಖ್ಯೋೋಪಾಧ್ಯಾಾಯ ಭಾರತೀಶ ಕೆ.ಆರ್. ಸಲಹೆ ನೀಡಿದರು.
ಸಿಂಧನೂರಿನ ಎಕ್ಸಲೆಂಟ್ ಪದವಿ ಮಹಾವಿದ್ಯಾಾಲಯದಿಂದ ಕೋಳಬಾಳ ಗ್ರಾಾಮದಲ್ಲಿ ಹಮ್ಮಿಿಕೊಂಡಿರುವ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶ ಪ್ರಗತಿ ಸಾಗಬೇಕಾದರೆ ಯುವ ಸಮುದಾಯದ ಪಾತ್ರ ಪ್ರಮುಖವಾಗಿದೆ. ಸದೃಢ ಯುವಕರನ್ನು ಸೃಷ್ಟಿಿ ಮಾಡುವ ಕೆಲಸ ಎನ್ಎಸ್ಎಸ್ ಮಾಡುತ್ತದೆ ಎಂದರು.
ಶಿಬಿರ ಉದ್ಘಾಾಟಿಸಿದ ಗ್ರಾಾ.ಪಂ.ಮಾಜಿ ಸದಸ್ಯ ಮಹಾಂತೇಶ್ ಅಂಗಡಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಕನಸು ನನಸಾಗಬೇಕಾದರೆ ಹಳ್ಳಿಿಗಳು ಸ್ವಚ್ಛತೆಯಿಂದ ಕೂಡಬೇಕು. ಈ ಬಗ್ಗೆೆ ಹಳ್ಳಿಿಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯವಾಗಿದೆ. ಈ ಕೆಲಸವನ್ನು ಎನ್ಎಸ್ಎಸ್ ಬಹಳ ವರ್ಷಗಳಿಂದ ಮಾಡಿಕೊಂಡು ಬರುತ್ತಿಿದೆ ಎಂದು ಹೇಳಿದರು.
ಎಕ್ಸಲೆಂಟ್ ಪದವಿ ಮಹಾವಿದ್ಯಾಾಲಯ ಕಾರ್ಯದರ್ಶಿ, ಕಾಲೇಜಿನ ಪ್ರಾಾಂಶುಪಾಲ ವೆಂಕಟರಾವ್ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್ಎಸ್ಎಸ್ ಶಿಬಿರಾಧಿಕಾರಿ ಖಾಸಿಂ ಖುರೇಷಿ ಪ್ರಾಾಸ್ತಾಾವಿಕವಾಗಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಆಂಜನೇಯ, ಗ್ರಾಾ.ಪಂ.ಮಾಜಿ ಸದಸ್ಯ ನಿರುಪಾದೆಪ್ಪ ಬೋವಿ, ವಿರುಪನಗೌಡ ಗುಂಜಳ್ಳಿಿ, ಶಿವರಾಜ್, ಸಂಜೀವಪ್ಪ, ಸಾವಿತ್ರಿಿ, ಹುಲಿಗೆಮ್ಮ, ಶರತ್ ಕುಮಾರ್, ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಾಚಾರ್ಯ ಮಂಜುನಾಥ ಸೋಮಲಾಪುರ, ಕನಕದಾಸ ಪದವಿ ಪೂರ್ವ ಕಾಲೇಜಿನ ಪ್ರಾಾಚಾರ್ಯ ಸಿದ್ದಪ್ಪ ಖೈರವಾಡಗಿ, ಉಪನ್ಯಾಾಸಕರಾದ ಎಚ್.ಡಿ. ಹಳ್ಳೂರ್, ಬಸವಲಿಂಗಪ್ಪ, ಅನಿಲ್ಕುಮಾರ್, ವಿನಯ್ಕುಮಾರ, ಅಮರೇಗೌಡ, ಎನ್ಎಸ್ಎಸ್ ಸಹ ಅಧಿಕಾರಿ ಮೆಹಬೂಬ್ ಕೋಳಬಾಳ, ಶ್ವೇತಾ ಆದಿಮನಿ ಹಾಗೂ ಇತರರು ಇದ್ದರು. ಅಶ್ವಿಿನಿ ಕಾರ್ಯಕ್ರಮ ನಿರೂಪಿಸಿದರು.
ಕೋಳಬಾಳ ಗ್ರಾಾಮದಲ್ಲಿ ಎಕ್ಸಲೆಂಟ್ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಸದೃಢ ಸಮಾಜದ ನಿರ್ಮಾಣಕ್ಕೆ ಎನ್ಎಸ್ಎಸ್ ಪಾತ್ರ ಪ್ರಮುಖ

