ಸುದ್ದಿಮೂಲ ವಾರ್ತೆ ಮಾನ್ವಿ, ಡಿ.15:
ಅನುಭವದ ಹಾದಿಯಲ್ಲಿ ಬರೆದ ವಚನಗಳು ಮನಸ್ಸಿಿಗೆ ತಟ್ಟುತ್ತವೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ಮಹಾಂತೇಶ ಮಸ್ಕಿಿ ಹೇಳಿದರು.
ರವಿವಾರ ಮಾನ್ವಿಿ ಪಟ್ಟಣದ ಗ್ಯಾಾಲಾಕ್ಸಿಿ ಮೀಟಿಂಗ್ ಹಾಲ್ ನಲ್ಲಿ ಹಮ್ಮಿಿಕೊಂಡಿದ್ದ ಸುವರ್ಣಗಿರಿ ಪ್ರಕಾಶನದಿಂದ ಹೊರತಂದ ಡಾ.ಚಂದ್ರಶೇಖರ ಸುವರ್ಣಗಿರಿಮಠ ಇವರ ಆಧುನಿಕ ವಚನಗಳ ಸಂಕಲನ ನುಡಿ ನೈವೇದ್ಯ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿಿದ್ದರು.
12 ನೇ ಶತಮಾನದಲ್ಲಿ ಬದುಕಿನಲ್ಲಿ ನುಡಿಯುವುದನ್ನೇ ನಡೆಯಾಗಿಸಿಕೊಂಡು ಬರೆದ ಸಾಹಿತ್ಯ ಪ್ರಕಾರವನ್ನು ವಚನಗಳೆಂದು ಕರೆಯಲಾಯಿತು. ಅಂದಿನ ದಿನಗಳಲ್ಲಿ ಅನೇಕರು ತಮ್ಮ ಬದುಕಿನಲ್ಲಿ ಕಂಡ, ಅನುಭವಿಸಿದ ನೋವುಗಳು, ಪ್ರಸಂಗಗಳು ಪಲ್ಲಟಗೊಂಡು ವಚನಗಳ ರೂಪದಲ್ಲಿ ಬರುವುದಕ್ಕೆೆ ಸಾಂಸ್ಕೃತಿಕ ನಾಯಕರೆಂದು ಕರೆಸಿಕೊಳ್ಳುವ ವಿಶ್ವಗುರು ಬಸವಣ್ಣನವರು ಕಾರಣರಾದರು.
ಶರಣರ ವಚನಗಳನ್ನು ಸ್ಪೂರ್ತಿಯಾಗಿ ಮಾಡಿಕೊಂಡು ಅಧುನಿಕ ವಚನಗಳನ್ನು ರಚನೆ ಮಾಡುವುದಕ್ಕೆೆ ಸಾಹಿತಿ ಸಿದ್ದಲಿಂಗಯ್ಯನವರು ನಾಂದಿ ಹಾಡಿದ ನಂತರ ಅನೇಕ ಸಾಹಿತಿಗಳು ಅಧುನಿಕ ದೃಷ್ಟಿಿ ಕೋನದಿಂದ ವಚನಗಳನ್ನು ರಚಿಸಿದ್ದಾರೆ. ಸಾಹಿತಿಗಳು ವಚನಗಳನ್ನು ಕಟ್ಟುವಾಗ ಯಾವ ಸಾಹಿತ್ಯದ ಪ್ರಭಾವಕ್ಕೆೆ ಒಳಗಾಗದೆ ತಮ್ಮ ಅನುಭವಗಳಿಂದ ಬರೆದಾಗ ಮಾತ್ರ ಜನರಿಗೆ ತಲುಪುವುದಕ್ಕೆೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಾಮಿಗಳು ಹಾಗೂ ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಮಹಾಸ್ವಾಾಮಿಗಳು ಆಶೀರ್ವಚನ ನೀಡಿದರು.
ಆಧುನಿಕ ವಚನಗಳ ಸಂಕಲನ ನುಡಿ ನೈವೇದ್ಯ ಕೃತಿಯ ಕುರಿತು ಹಿರಿಯ ಸಾಹ್ಚಿಿತಿ ರಮೇಶಬಾಬು ಯಾಳಗಿ ಪರಿಚಯಿಸಿದರು.
ಕೃತಿಯ ಲೇಖಕ ಡಾ.ಚಂದ್ರಶೇಖರ ಸುವರ್ಣಗಿರಿಮಠ ಕೃತಿಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಸ್ಕಿಿಯ ವೈದ್ಯ ಡಾ.ಶಿವಶರಣಪ್ಪ ಇತ್ಲಿಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ತಾಯಪ್ಪ ಬಿ.ಹೊಸೂರು, ಕಸಾಪ ತಾಲೂಕಾಧ್ಯಕ್ಷ ಶರಣಬಸವ ನೀರಮಾನ್ವಿಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಸಿಂಧನೂರು ಕಸಾಪ ಮಾಜಿ ಅಧ್ಯಕ್ಷ ಪಂಪಯ್ಯಸ್ವಾಾಮಿ ಸಾಲಿಮಠ, ನಿವೃತ್ತ ಜಿಲ್ಲಾ ನ್ಯಾಾಯಾಧೀಶ ಗಿರೆಯ್ಯ ಪಾಟೀಲ್, ಬೆಂಗಳೂರಿನ ನ್ಯೂರೋಸರ್ಜನ್ ಡಾ.ಚೈತನ್ಯ ಪ್ರಭು, ಶಂಕ್ರಪ್ಪ ಚಿಕ್ಕಗೌಡರ ಮಟಮಾರಿ, ಪ್ರಕಾಶಕಿ ರಾಚಮ್ಮ ಸಾಂಬಯ್ಯಸ್ವಾಾಮಿ, ತ್ರಯಂಬಕೇಶ ಮೇದಾ ಭಾಗವಹಿಸಿದ್ದರು.
ನುಡಿ ನೈವೇದ್ಯ ಕೃತಿ ಲೋಕಾರ್ಪಣೆ ಅನುಭವದ ಹಾದಿಯಲ್ಲಿ ಬರೆದ ವಚನಗಳು ಮನಸ್ಸಿಗೆ ತಟ್ಟುತ್ತವೆ – ಮಹಾಂತೇಶ ಮಸ್ಕಿ

