ಸುದ್ದಿಮೂಲವಾರ್ತೆ
ಕೊಪ್ಪಳ ಜು 15: ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಹಲವು ದಿನಗಳಿಂದ ಕಾಣಿಸಿಕೊಂಡಿರುವ ಗೋಡೆ ಬರಹ ಇಂದು ಮತ್ತೆ ಕಾಣಿಸಿಕೊಂಡಿದೆ. ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಇಲ್ಲಿ ಅವಮಾನಕರ ಘಟನೆ ನಡೆದಿದೆ. ಇಲ್ಲಿ ಒಂದೇ ಕೋಮಿನ ವಿದ್ಯಾರ್ಥಿನಿಯರ ಹೆಸರಗಳನ್ನು ಅಶ್ಲೀಲವಾಗಿ ಬರೆಯುವದರಿಂದ ಇಲ್ಲಿ ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ.
ಇಂದು ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆಯ ಗೋಡೆಯ ಮೇಲೆ ಕೆಲವು ವಿದ್ಯಾರ್ಥಿನಿಯರನ್ನು ಉದ್ದೇಶವಿಟ್ಟುಕೊಂಡು ಗೋಡೆಯ ಮೇಲೆ ಬರೆದಿದ್ದಾರೆ.
ಒಂದೇ ತಿಂಗಳಲ್ಲಿ ಕನಕಗಿರಿ ಪಟ್ಟಣದಲ್ಲಿ ಮೂರನೇ ಬಾರಿ ಬಾಲ ಬಿಚ್ಚಿದ ಕಿಡಿಗೇಡಿಗಳು ಬರಹ ಬರೆದಿದ್ದಾರೆ. ಶಾಲೆಯ ಗೋಡೆಗಳ ಮೇಲೆ ಪುಂಡರಿಂದ ಬರಹ ಬರೆಯಲಾಗಿದೆ.
ಸರಕಾರಿ ಪದವಿ ಪೂರ್ವ ಕಾಲೇಜು ಆವರಣದ ಪ್ರಾಥಮಿಕ ಶಾಲೆ ಹಾಗು ಪಬ್ಲಿಕ್ ಶಾಲೆಯಲ್ಲಿ ಬರಹ ಕಾಣಿಸಿಕೊಂಡಿದೆ.
ಗೋಡೆ ಬರಹದಿಂದ ವಿದ್ಯಾರ್ಥಿನಿಯರು ಮುಜುಗರಕ್ಕೊಳಗಾಗುತ್ತಿದ್ದು ಇದರಿಂದ ಹಲವು ವಿದ್ಯಾರ್ಥಿನಿಯರು ಶಾಲಾ ಕಾಲೇಜಿಗೆ ಬರಲು ಹಿಂಜರಿಯುತ್ತಾ ಶಾಲೆ ಬಿಡುತ್ತಿದ್ದಾರೆ.
ಈ ಘಟನೆಯ ಕುರಿತು ಪೊಲೀಸ್ ಇಲಾಖೆಗೆ ದೂರು ನೀಡಿದರೂ ನಿರ್ಲಕ್ಷ್ಯ ವಹಿಸುತ್ತಿರುವ ಆರೋಪ ಕೇಳಿ ಬರುತ್ತಿದೆ.
ಈ ಮಧ್ಯೆ ಈ ಕುರಿತು ಒಂದು ತಂಡ ರಚಿಸಲಾಗಿದೆ. ಅನುಮಾನ ಬಂದ ವ್ಯಕ್ತಿಯನ್ನು ಕರೆದು ವಿಚಾರಣೆ ಮಾಡಲಾಗಿದೆ. ಇಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುವದಕ್ಕಿಂತ ಇಲ್ಲಿ ಬೇರೆ ಯಾವುದೊ ಉದ್ದೇಶದಿಂದ ಈ ಘಟನೆ ನಡೆಯುತ್ತದೆ. ಈ ಘಟನೆಯಲ್ಲಿ ಪಾಲ್ಗೊಂಡವರ ಪತ್ತೆ ಮಾಡಲಾಗುವುದು ಎಂದು ಎಸ್ಪಿ ಯಶೋದಾ ವಂಟಿಗೋಡ ತಿಳಿಸಿದ್ದಾರೆ.