ಸುದ್ದಿಮೂಲ ವಾರ್ತೆ ಸಿಂಧನೂರು, ೆ.20:
ತಾಲೂಕಿನ ವಿವಿಧ ಸರಕಾರಿ ಪ್ರೌೌಢಶಾಲೆಗಳಿಗೆ ರಾಯಚೂರು ಜಿಲ್ಲಾಾ ಪಂಚಾಯತ್ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ಭೇಟಿ ನೀಡಿ, ಹತ್ತನೇ ತರಗತಿ ವಿದ್ಯಾಾರ್ಥಿಗಳೊಂದಿಗೆ ಸಂವಾದ ನಡೆಸಿ, ಲಿತಾಂಶ ಸುಧಾರಣೆಗೆ ಶಿಕ್ಷಕರಿಗೆ ಸೂಚನೆ ನೀಡಿದರು.
ತಾಲೂಕಿನ ರೌಡಕುಂದಾ, ಸೋಮಲಾಪುರ ಸರಕಾರಿ ಪ್ರೌೌಢಶಾಲೆಗಳಿಗೆ ಗುರುವಾರ ಭೇಟಿ ನೀಡಿ ಶಿಕ್ಷಣದ ಗುಣಮಟ್ಟ ಪರಿಶೀಲನೆ ನಡೆಸಿದರು. ವಿದ್ಯಾಾರ್ಥಿಗಳ ಸಮಸ್ಯೆೆ ಆಲಿಸಿ, ಪ್ರಸಕ್ತ ವರ್ಷ ಶೇ.100 ರಷ್ಟು ಲಿತಾಂಶ ಪಡೆದುಕೊಳ್ಳಲು ಸಲಹೆ ನೀಡಿದರು.
ತಾಲೂಕಿನ ಗೊರೇಬಾಳ ಗ್ರಾಾಮ ಪಂಚಾಯತಿಯ ಗ್ರಂಥಾಲಯ ಕಟ್ಟಡಕ್ಕೆೆ ಭೇಟಿ ನೀಡಿ ಕಟ್ಟಡ ಕಾಮಗಾರಿ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ರೌಡಕುಂದ ಗ್ರಾಾಮ ಪಂಚಾಯಿತಿಗೆ ಭೇಟಿ ನೀಡಿ ಅಮೃತ ಸರೋವರ ಕೆರೆಯ ಸುತ್ತಲೂ ಉದ್ಯಾಾನವನ ನಿರ್ಮಿಸಲು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಕುಕ್ಕುಟ ಸಂಜೀವಿನಿಗೆ ಭೇಟಿ ನೀಡಿ ಸ್ವಸಹಾಯ ಸಂಘದ ಸದಸ್ಯರೊಂದಿಗೆ ಮಾತನಾಡಿದ ಅವರು, ಮೊಟ್ಟೆೆಯನ್ನು ಅಂಗನವಾಡಿ ಮತ್ತು ಶಾಲೆಗಳಿಗೆ ಸರಬರಾಜು ಮಾಡಲು ತಿಳಿಸಿದರು. ನಂತರ ಸರ್ಕಾರಿ ಪ್ರೌೌಢಶಾಲೆಗೆ ಭೇಟಿ ನೀಡಿ ಕಟ್ಟಡ ಕಾಮಗಾರಿ ಪರಿಶೀಲಿಸಿ ಬೇಗ ಪೂರ್ಣಗೊಳಿಸಲು ತಿಳಿಸಿದ ಅವರು, ಬಿಸಿ ಊಟದ ಬಗ್ಗೆೆ ಪರಿಶೀಲನೆ ಮಾಡಿದರು. ಅಡುಗೆ ಕೋಣೆ ಪರಿಶೀಲಿಸಿ ಬಿಸಿ ಊಟ ಸೇವಿಸಿ ಗಮನ ಸೆಳೆದರು.
ನಂತರ ಅಂಬಾಮಠ ಕುಡಿಯುವ ನೀರಿನ ಕೆರೆಗೆ ಭೇಟಿ ನೀಡಿ, ನೀರಿನ ಗುಣಮಟ್ಟ ಮತ್ತು ಕೆರೆಯ ಸುರಕ್ಷತೆ ಬಗ್ಗೆೆ ಮಾಹಿತಿ ಪಡೆದರು. ವಸತಿ ನಿಲಯಕ್ಕೆೆ ಭೇಟಿ ನೀಡಿ ಕೊಠಡಿಯಲ್ಲಿ ಮಕ್ಕಳ ಸಂಖ್ಯೆೆ ಆಲಿಸಿ ಮಕ್ಕಳಿಗೆ ಯಾವ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಲು ಉಪನ್ಯಾಾಸಕರಿಗೆ ತಿಳಿಸಿದರು. ಅಲ್ಲಿಂದ ಮುಕ್ಕುಂದ ಗ್ರಾಾಮ ಪಂಚಾಯಿತಿಗೆ ಭೇಟಿ ನೀಡಿ,ಹುಡಾ ಗ್ರಾಾಮದಲ್ಲಿ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಆಗಿರುವ ಕಾಮಗಾರಿಗಳ ನಳಗಳನ್ನು ಪರಿಶೀಲನೆ ಮಾಡಿದರು. ಪ್ರಾಾಥಮಿಕ ಶಾಲೆಯ ತಡೆಗೋಡೆ ಕಾಮಗಾರಿ ಕಡಿತಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ಚಂದ್ರಶೇಖರ್, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಯಂಕಪ್ಪ, ಗ್ರಾಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ವಿಜಯಲಕ್ಷ್ಮೀ, ಪಿಆರ್ಇಡಿ ಎಇಇ ಪ್ರಕಾಶ, ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಸಾಬಣ್ಣ ವಗ್ಗರ್, ಬಿಇಓ ಬಸಲಿಂಗಪ್ಪ ಜವಳಗೇರಾ ಸೇರಿದಂತೆ ಅನೇಕರು ಇದ್ದರು.
ತಾಲೂಕಿನಲ್ಲಿ ವಿವಿಧ ಕಾಮಗಾರಿಗಳ ವೀಕ್ಷಣೆ ಹತ್ತನೇ ತರಗತಿ ಲಿತಾಂಶ ಸುಧಾರಣೆಗೆ ಸಿಇಓ ಕಾಂದೂ ಸೂಚನೆ

