ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ,ನ.5: ಝೀಕಾ ಸೋಂಕನ್ನು ತಡೆಗಟ್ಟಲು ಪ್ರತಿಯೊಬ್ಬರೂ ಹಗಲಿನಲ್ಲಿ ಮತ್ತು ಸಂಜೆಯ ಆರಂಭದಲ್ಲಿ ಸೊಳ್ಳೆ ಕಡಿತದ ವಿರುದ್ಧ ರಕ್ಷಣೆ ಮಾಡಿಕೊಳ್ಳಬೇಕು. ಗರ್ಭಿಣಿಯರು, ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರು ಮತ್ತು ಚಿಕ್ಕ ಮಕ್ಕಳಲ್ಲಿ ಸೊಳ್ಳೆ ಕಡಿತವನ್ನು ತಡೆಗಟ್ಟಲು ಮನೆಯವರು ವಿಶೇಷ ಗಮನ ನೀಡಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿಯವರಾದ ಮುನಿರಾಜ ತಿಳಿಸಿದರು.
ತಾಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ, ಕನಿಷ್ಠ ವಾರಕ್ಕೊಮ್ಮೆಯಾದರೂ ನಿಮ್ಮ ಮನೆಯಲ್ಲಿರುವ ತೊಟ್ಟಿ, ಪಾತ್ರೆ ತೊಳೆಯುವುದು, ಶೇಖರಿಸಿದ ನೀರನ್ನು ಚೆಲ್ಲಿ, ಶುದ್ಧ ನೀರನ್ನು ಸಂಗ್ರಹಣೆ ಮಾಡಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.
ವಾರಕ್ಕೊಮ್ಮೆ ಒಣಗಲು ದಿನವನ್ನಾಗಿ ಅರಿತು, ನಿಮ್ಮ ಮನೆ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡುಕೊಳ್ಳುವಂತೆ ಅರಿವು ಮೂಡಿಸಲಾಯಿತು. ಅದೇ ರೀತಿಯಾಗಿ ಮನೆ-ಶಾಲೆಗಳು ಮತ್ತು ಕೆಲಸದ ಸ್ಥಳಗಳ ಸುತ್ತಲೂ ನೀರಿನ ಸಣ್ಣ ಸಂಗ್ರಹಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ, ಆದ್ದರಿಂದ ಸೊಳ್ಳೆಗಳ ಸಂತಾನೋತ್ಪತ್ತಿಯ ಸ್ಥಳಗಳನ್ನು ಸೂಕ್ತ ವಿಧಾನಗಳ ಮೂಲಕ ನಿರ್ಮೂಲನೆ ಮಾಡುವುದು ಮುಖ್ಯವಾಗಿದೆ ಎಂದರು. ಸಾರ್ವಜನಿಕರು ನೀರಿನ ಶೇಖರಣಾ ಪಾತ್ರೆಗಳನ್ನು ಮುಚ್ಚುವುದು, ಹೂವಿನ ಕುಂಡಗಳಲ್ಲಿ ನಿಂತಿರುವ ನೀರನ್ನು ತೆಗೆಯುವುದು ಮತ್ತು ಕಸ ಮತ್ತು ಬಳಸಿದ ಟೈರ್ಗಳನ್ನು ಸ್ವಚ್ಛಗೊಳಿಸುವುದು. ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ಕಡಿಮೆ ಮಾಡಲು ಸ್ವತಃ ತಾವೇ ಮನೆಯ ಸುತ್ತಲೂ ಸ್ವಚ್ಛತೆಯ ಉಪಕ್ರಮಗಳು ಬಳಸುವ ಸೂಕ್ತ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಾದ ಶ್ರೀನಿವಾಸ, ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಎಂ.ವೆಂಕಟಸ್ವಾಮಿ, ಸದಸ್ಯ ಅಶ್ವತ್ಥ ನಾರಾಯಣರೆಡ್ಡಿ, ಕಾರ್ಯದರ್ಶಿ ಕನಕಮ್ಮ, ಬಿಲ್ ಕಲೆಕ್ಟರ್ ಈಶ್ವರ್, ಆರೋಗ್ಯ ಇಲಾಖೆಯ ಸಿಬ್ಬಂದಿ, ಎನ್ಆರ್ ಎಲ್ ಎಂ ತಂಡ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಸೇರಿದಂತೆ ಇತರರು ಹಾಜರಿದ್ದರು.