ಸುದ್ದಿಮೂಲವಾರ್ತೆ
ಕೊಪ್ಪಳ ಜೂ 07: ಕೊಪ್ಪಳ ಜಿಲ್ಲೆಯಲ್ಲಿ ಕುಡಿವ ನೀರು ಕಲುಷಿತಗೊಂಡು ಇಬ್ಬರು ಸಾವನ್ನಪ್ಪಿದ್ದು ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಬಸರಿಹಾಳಿನಲ್ಲಿ ವೃದ್ದೆ ಸಾವಿಗೆ ಕಲುಷಿತ ನೀರು ಕಾರಣವಲ್ಲ. ಬಾಲಕಿಯ ಸಾವಿನ ಬಗ್ಗೆ ವರದಿ ಬರಬೇಕಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ರತ್ನಂ ಪಾಂಡೆಯಾ ತಿಳಿಸಿದ್ದಾರೆ.
ಇಂದು ಕೊಪ್ಪಳ ಜಿಲ್ಲಾ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು ಬಸರಿಹಾಳದಲ್ಲಿ ವೃದ್ದೆ ಹೊನ್ನಮ್ಮನಿಗೆ ಕಿಡ್ನಿ ಹಾಗು ಹೃದಯ ಸಂಬಂಧಿ ಕಾಯಿಲೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಇನ್ನೂ ಜೂ 06 ರಂದು ಶೃತಿ ಎಂಬ ಬಾಲಕಿಯ ಸಾವಿನ ಬಗ್ಗೆ ನಿಖರವಾದ ವರದಿ ಬರಬೇಕಾಗಿದೆ. ಶೃತಿ ತಾಯಿ ತಾವರಗೇರಾದಲ್ಲಿ ಉರುಸಿಗೆ ಹೋಗಿ ಬಂದ ನಂತರ ವಾಂತಿ ಬೇಧಿ ಕಾಣಿಸಿಕೊಂಡಿದೆ. ಬಸರಿಹಾಳದಲ್ಲಿ ಕುಡಿವ ನೀರಿನ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ಬಂದ ನಂತರ ಸಾವಿಗೆ ಸ್ಪಷ್ಠತೆ ಸಿಗಲಿದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಈ ದಿನಕ್ಕೆ ವಾಂತಿ ಬೇಧಿಗೆ ಕಾರಣ ಜಲಮೂಲಗಳು ಕಡಿಮೆಯಾಗಿರುವುದು. ಕುಡಿವ ನೀರಿಗಾಗಿ ನಲ್ಲಿಗಳಿಗಾಗಿ ಗುಂಡಿ ತೊಡಿರುವುದು. ಗುಂಡಿಗಳಲ್ಲಿ ಕೊಳಚೆ ನೀರು ಸೇರಿಕೊಳ್ಳುವುದು ಕಾರಣವಾಗಿದೆ.
ಎಲ್ಲಿಲ್ಲೆ ಕುಡಿವ ನೀರಿನ ಸಮಸ್ಯೆ ಅಂಥ ಸ್ಥಳದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ನಲ್ಲಿಗಳಿಗಾಗಿ ತೊಡಿರುವ ಗುಂಡಿಗಳನ್ನು ಮುಚ್ಚಿಸಲು ಸೂಚನೆ ನೀಡಲಾಗಿದೆ.
ವಾಂತಿ ಬೇಧಿ ಕಾಣಿಸಿಕೊಂಡ ಶಿವಪುರ, ಬಿಜಕಲ್, ಜಮ್ಮಾಲಾಪುರ ಸೇರಿ ಎಲ್ಲೆಲ್ಲಿ ಸಮಸ್ಯೆ ಯಾಗಿದೆ ಅಲ್ಲಿ ಅಗತ್ಯ ವೈದ್ಯಕೀಯ ಸೇವೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅವರೊಂದಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ ಅಲಕಾನಂದ ಮಳಗಿ. ಸರ್ವೇಕ್ಷಣಾಧಿಕಾರಿ ಡಾ ನಂದಕುಮಾರ ಇದ್ದರು.