ಸುದ್ದಿಮೂಲ ವಾರ್ತೆ
ಕಲಬುರಗಿ, ನ.8: ರೈತ ನಾಯಕ ಕೇದಾರಲಿಂಗಯ್ಯ ಹಿರೇಮಠ ಅವರ ಅಭಿನಂದನಾ ಗ್ರಂಥ “ಸತ್ಯಾಗ್ರಹಿ” ಲೋಕಾರ್ಪಣೆ ಸಮಾರಂಭವನ್ನು ಇದೆ ನ.10 ರಂದು ಬೆಳಗ್ಗೆ 11 ಗಂಟೆಗೆ ಜೇವರ್ಗಿಯ ಧರ್ಮಸಿಂಗ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯ್ ಸಿಂಗ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇದಾರಲಿಂಗಯ್ಯ ಹಿರೇಮಠ ಅವರು ಕಳೆದ ನಾಲ್ಕು ದಶಕಗಳಿಂದ ಈ ಭಾಗದ ರೈತರ ಪರವಾಗಿ ಹೋರಾಟ ಮಾಡಿದ್ದಾರೆ. ಜನರ ಅನುಕೂಲಕಾಗಿ ಧರಣಿ ಸತ್ಯಾಗ್ರಹಗಳನ್ನು ಮಾಡಿದ್ದಾರೆ. ಮಲ್ಲಬಾದ ಏತ ನೀರಾವರಿ ಯೋಜನೆಗಾಗಿ ಪ್ರತಿಭಟನೆ ನಡೆಸಿದು ಅವರ
ಪ್ರಮುಖ ಹೋರಾಟಗಳಲ್ಲಿ ಒಂದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಗಳ ಮಠಾಧೀಶರು ದಿವ್ಯ ಸಾನಿಧ್ಯ ವಹಿಸಲಿದ್ದು, ಗ್ರಾಮೀಣಾಭಿರುದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ ಸಚಿವ ಶರಣಬಸಪ್ಪ ದರ್ಶನಾಪೂರ ಗ್ರಂಥ ಲೋಕಾರ್ಪಣೆಗೊಳ್ಳಿಸಲಿದ್ದಾರೆ. ಕೆಕೆಆರ್ ಡಿಬಿ ಅಧ್ಯಕ್ಷ ಡಾ. ಅಜಯ ಸಿಂಗ್ ಅಧ್ಯಕ್ಷತೆವಹಿಸಲಿದ್ದಾರೆ. ಕೇದಾರಲಿಂಗಯ್ಯ ಹಿರೇಮಠ ಅಭಿನಂದನಾ ಉಪಸ್ಥಿತಿವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಮಾಜಿ ಸಚಿವ ಎಸ್ ಕೆ ಕಾಂತಾ, ಶಾಸಕರಾದ ಬಿ ಆರ್ ಪಾಟೀಲ್, ಎಂ ವೈ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಖನಿಜಾ ಫಾತಿಮಾ, ತಿಪ್ಪಣ್ಣಪ್ಪ ಕಮಕನೂರ, ಅಶೋಕ್ ಮನಗೋಳಿ ಮಾಜಿ ಶಾಸಕ ದೊಡ್ಡಪ್ಪಗೌಡ ನರಿಬೋಳ, ಶಿವರಾಜ ಪಾಟೀಲ್ ರದ್ದೇವಾಡಗಿ, ಮಲ್ಲಿನಾಥಗೌಡ ಯಲಗೋಡ, ಸೋಮಶೇಖರ್ ಗೋನಾಯಕ, ಡಾ. ಎಚ್ ಟಿ ಪೋತೆ, ಡಾ. ಶ್ರೀಶೈಲ ನಾಗರಾಳ್, ಸತ್ಯಾಗ್ರಹಿ ಅಭಿನಂದನಾ ಗ್ರಂಥ ಸಂಪಾದಕ ಸದಾನಂದ ಪಾಟೀಲ್ ಆಗಮಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸಿದ್ದಲಿಂಗ ರೆಡ್ಡಿ ಇಟಗಿ, ರುಕುಂ ಪಟೇಲ್ ಇಜೇರಿ, ಬಸವರಾಜ ಬಿರಾದಾರ ಸೊನ್ನ, ಶಾಂತಪ್ಪ ಕೂಡಲಗಿ, ವಿಜಯಕುಮಾರ್ ಹಿರೇಮಠ, ಭೀಮಾಶಂಕರ್ ವಿಭೂತಿ, ಭಗವಂತರಾಯ್ ಪಾಟೀಲ್, ಸದಾನಂದ ಪಾಟೀಲ್ ಸೇರಿದಂತೆ ಮತ್ತಿತ್ತರು ಇದ್ದರು.