ಸುದ್ದಿಮೂಲ ವಾರ್ತೆ ರಾಯಚೂರು, ಜ.27:
ನಗರದ ನವರತ್ನ ಯುವಕ ಸಂಘದಿಂದ ಮಾದಿಗ ಸಮಾಜದಿಂದ 2024-25ನೇ ಸಾಲಿನಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾಾವಂತ ಯುವಕರಿಗೆ ಪ್ರತಿಭಾ ಪುರಸ್ಕಾಾರ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಕೆ.ಪಿ. ಅನಿಲ್ ಕುಮಾರ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಕಳೆದ 24 ವರ್ಷಗಳಿಂದಲೂ ಸಮಾಜಮುಖಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಮಾಡುತ್ತಿಿದ್ದು. ಈ ವರ್ಷವೂ ನಗರದ ಮಾದಿಗ ಸಮಾಜದಲ್ಲಿ ಎಸ್ಎಸ್ಎಲ್ಸಿ ಯಿಂದ ಸ್ನಾಾತಕೋತ್ತರ ಪದವಿವರೆಗೆ ವಿವಿಧ ಕೋರ್ಸ್ಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ೆ.14 ಸಂಜೆ 6 ಗಂಟೆಗೆ ಹರಿಜನವಾಡದ ಸಮುದಾಯ ಭವನದಲ್ಲಿ ಪ್ರತಿಭಾ ಪುರಸ್ಕಾಾರ ಹಮ್ಮಿಿಕೊಳ್ಳಲಾಗಿದೆ. ೆ.8ರೊಳಗೆ ಅರ್ಹರು ನೋಂದಣಿ ಮಾಡಲು ಮನವಿ ಮಾಡಿದರು.
ಕಾರ್ಯಕ್ರಮ ಶಾಸಕ ಡಾ.ಶಿವರಾಜ ಪಾಟೀಲ ಉದ್ಘಾಾಟಿಸಲಿದ್ದುಘಿ, ವಿಧಾನ ಪರಿಷತ್ ಶಾಸಕ ಎ. ವಸಂತಕುಮಾರ ಅಧ್ಯಕ್ಷತೆ ವಹಿಸಲಿದ್ದಾಾರೆ. ಪಾಲಿಕೆ ಮಾಜಿ ಮೇಯರ್ ನರಸಮ್ಮ ಮಾಡಗಿರಿ, ಮಾಜಿ ಸದ್ಯಸರಾದ ಹೇಮಲತಾ ಬೂದೆಪ್ಪ, ಎನ್.ಕೆ. ನಾಗರಾಜ ಸೇರಿ ಹಲವರು ಭಾಗವಹಿಸುವರು ಎಂದರು.
ಸುದ್ದಿಗೋಷ್ಠಿಿಯಲ್ಲಿ ಅಧ್ಯಕ್ಷ ಶರಣಪ್ಪ, ವೀರೇಶ್, ಜನಾರ್ಧನ್ ಅರಳಿಬೆಂಚಿ, ಎಸ್.ನಾಗರಾಜ್, ಎಸ್.ವೆಂಕಟೇಶ್, ಆರ್.ಆಂಜನೇಯ, ಎಸ್.ಹುಲಿಗೆಪ್ಪ ಇತರರಿದ್ದರು.

