ಸುದ್ದಿಮೂಲ ವಾರ್ತೆ ರಾಯಚೂರು, ಡಿ.15
ರದ ಶ್ರೀ ಜೋಡು ವೀರಾಂಜನೇಯ ದೇವಸ್ಥಾಾನ ಸಭಾಂಗಣದಲ್ಲಿ ಡಿ.20ರಂದು ಶ್ರೀ ಬನ್ನಂಜೆ ಗೋವಿಂದಾಚಾರ್ಯ ಸ್ಮರಣೋತ್ಸವದಂಗವಾಗಿ ಬನ್ನಂಜೆ 90 ವಿಶ್ವ ನಮನ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ ಎಂದು ಜನಸೇವಾ ಪ್ರತಿಷ್ಠಾಾನದ ಅಧ್ಯಕ್ಷ ತ್ರಿಿವಿಕ್ರಮ ಜೋಷಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾಾನ, ಜನಸೇವಾ ಪ್ರತಿಷ್ಠಾಾನ ಹಾಗೂ ಶೃತಿ ಸಾಹಿತ್ಯ ಮೇಳಗಳ ಸಂಯುಕ್ತಾಾಶ್ರಯದಲ್ಲಿ ಅಂದು ಸಂಜೆ 4.30ಕ್ಕೆೆ ಆರಂಭವಾಗುವ ಕಾರ್ಯಕ್ರಮವನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಉದ್ಘಾಾಟಿಸಲಿದ್ದಾಾರೆ. ಆಧ್ಯಾಾತ್ಮ ಚಿಂತಕಿ ಡಾ.ವೀಣಾ ಬನ್ನಂಜೆ ಹಾಗೂ ಸಂಸ್ಕೃತ ವಿಶ್ವವಿದ್ಯಾಾಲಯ ವಿಶ್ರಾಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ ಆಗಮಿಸಲಿದ್ದಾಾರೆ.
ನಾನು ಕಂಡಂತೆ ಬನ್ನಂಜೆ ವಿಷಯವಾಗಿ ರೋಹಿತ ಚಕ್ರತೀರ್ಥ, ಭಾರತೀಯ ಸಾಹಿತ್ಯ ಕ್ಕೆೆ ಬನ್ನಂಜೆಯವರ ಕೊಡುಗೆ ಕುರಿತು ಸಿ.ಜಿ. ವಿಜಯಸಿಂಹಾಚಾರ್ಯ, ಬನ್ನಂಜೆ ಕಂಡಂತೆ ಭಾಗವತ ತಾತ್ಪರ್ಯ ವಿಷಯವಾಗಿ ವಾಸುದೇವ ರಮೇಶ ಬೆಂಗಳೂರು ಇವರು ಉಪನ್ಯಾಾಸ ನೀಡಲಿದ್ದುಘಿ, ಉಡುಪಿಯ ಓಂ ಪ್ರಕಾಶಭಟ್ ಸಂಪಾದಿಸಿದ ಬನ್ನಂಜೆ ಬಲ್ಲವರು ಕಂಡಂತೆ ಕೃತಿ ಹಾಗೂ ಡಾ.ಜಯಲಕ್ಷ್ಮಿಿ ಮಂಗಳಮೂರ್ತಿ ಅವರ ಇಂಗ್ಲಿಿಷ್ ಅನುವಾದಿತ ಸಮುನ್ನತ ಪುಸ್ತಕಗಳ ಲೋಕಾರ್ಪಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಚಲನಚಿತ್ರ ನಟ ಮತ್ತು ನಿರ್ದೇಶಕ ಸುಚೇಂದ್ರ ಪ್ರಸಾದ ನಿರ್ದೇಶನದಲ್ಲಿ ವೀಣಾ ಬನ್ನಂಜೆ ರಚಿಸಿದ ನನ್ನ ಪಿತಾಮಹ ಕೃತಿ ನಾಟಕ ಪ್ರದರ್ಶನ ನಡೆಯಲಿದೆ. ಕವಿತಾ ಉಡುಪ, ಸುಮಾ ಶಾಸಿ ಅವರಿಂದ ಬನ್ನಂಜೆ ಹಾಡುಹಬ್ಬ ಸಂಗೀತ ಕಾರ್ಯಕ್ರಮ ನಡೆಯಲಿದೆ.ಬನ್ನಂಜೆಯವರ ಒಡನಾಡಿಗಳಾದ ರಾಯಚೂರಿನ ಶಂಕರ ನಾರಾಯಣ ಕೇಕುಡ, ಬಿ.ನರಸಿಂಗರಾವ್, ನರಸಿಂಗರಾವ ದೇಶಪಾಂಡೆ, ಬಂಡುರಾವ್ ಚಾಗಿ ಅವರ ಸನ್ಮಾಾನಿಸಲಾಗುವುದು ಎಂದರು.
ಡಿ.20ರಂದು ಬನ್ನಂಜೆ 90 ವಿಶ್ವ ನಮನ, ಹಲವು ಕೃತಿಗಳ ಬಿಡುಗಡೆ – ಜೋಶಿ

