ಸುದ್ದಿಮೂಲ ವಾರ್ತೆ ರಾಯಚೂರು, ಜ.20:
ತ್ರಿಿವಿಧ ದಾಸೋಹಿ ಶ್ರೀ ಶಿವುಕುಮಾರ ಮಹಾಶಿವಯೋಗಿಗಳವರ 7ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಜ.21 ಹಾಗೂ 22ರಂದು ದಾರಿದೀಪ ಸಂಸ್ಥೆೆ ಅನ್ನದಾಸೋಹ ಹಮ್ಮಿಿಕೊಳ್ಳಲಾಗಿದೆ ಎಂದು ಸಂಸ್ಥೆೆಯ ಸದಸ್ಯೆೆ ಅಶ್ವಿಿನಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಜ.21ರಂದು ರಾಯಚೂರಿನ ಕೇಂದ್ರ ಬಸ್ ನಿಲ್ದಾಾಣದಲ್ಲಿ ಅನ್ನದಾಸೋಹ ಹಮ್ಮಿಿಕೊಳ್ಳಲಾಗಿದೆ.
22ರಂದು ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದು ಶ್ರೀ ಶಾಂತಮಲ್ಲ ಶಿವಾಚಾರ್ಯರು, ಶ್ರೀ ಅಭಿನವರಾಚೋಟಿ ಶಿವಾಚಾರ್ಯರು, ಶಂಭುಲಿಂಗ ಸ್ವಾಾಮೀಜಿ, ಪದ್ಮಶ್ರೀ ಬಿ.ಮಂಜಮ್ಮ ಜೋಗತಿ , ಸಾಯಿಕಿರಣ ಆದೋನಿ ಸೇರಿ ಹಲವರು ಭಾಗವಹಿಸಲಿದ್ದಾಾರೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ಸಂಘದ ಅಧ್ಯಕ್ಷ ಮಂಜುನಾಥ, ಚನ್ನಬಸವ ಅರೋಲಿ, ರಘುಮಡಿವಾಳ, ಮುನಿಸ್ವಾಾಮಿ, ರಮೇಶ ಇತರರಿದ್ದರು.

