21ರಂದು ಭೋವಿ ಸಮಾಜದ ಸಭೆ: ಶರಣಪ್ಪ ಗುತ್ತೇದಾರ
ಜೇವರ್ಗಿ:ತಾಲ್ಲೂಕಿನ ನೂತನ ಅಧ್ಯಕ್ಷರ ಮತ್ತು ವಿವಿಧ ಪದಾಧಿಕಾರಿಗಳ ಆಯ್ಕೆ ಮತ್ತು ಶ್ರೀ ಸಿದ್ದರಾಮೇಶ್ವರ 851 ನೇ ಜಯಂತೋತ್ಸವ ಸಮಿತಿ ಅಧ್ಯಕ್ಷರ ಮತ್ತು ವಿವಿಧ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆ ಬೆಳಗ್ಗೆ 11:00ಗೆ ಬೋವಿ ಭವನದಲ್ಲಿ ಕೆರೆಯಲಾಗಿದೆ ಎಂದು ಹೇಳಿದರು.
ಮಂಗಳವಾರ ದಿನಾಂಕ 21-02-2023 ರಂದು ಭೋವಿ ವಡ್ಡರ ಸಮಾಜ ಜೇವರ್ಗಿ ವತಿಯಿಂದ ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನ ಗೌರವಾನ್ವಿತ ಭೋವಿ ವಡ್ಡರ ಸಮಾಜದ ಸಮಸ್ತ ಕುಲ ಬಾಂಧವರೆ ಜೇವರ್ಗಿ ತಾಲ್ಲೂಕಿನ ನೂತನ ಅಧ್ಯಕ್ಷರ ಮತ್ತು ವಿವಿಧ ಪದಾಧಿಕಾರಿಗಳ ಆಯ್ಕೆ ಮತ್ತು ಶ್ರೀ ಸಿದ್ದರಾಮೇಶ್ವರ 851 ನೇ ಜಯಂತೋತ್ಸವ ಸಮಿತಿ ಅಧ್ಯಕ್ಷರ ಮತ್ತು ವಿವಿಧ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಾಡಬೇಕೆಂದು ಮತ್ತು ಸಮಾಜದ ಸಮಸ್ಯೆಗಳ ಮತ್ತು ಸರ್ವಾಂಗೀಣ ಅಭಿವೃದ್ದಿಗಾಗಿ ಚರ್ಚಿಸಲು ಗುರು-ಹಿರಿಯರು ತೀರ್ಮಾನಿಸಿ ಮಹತ್ವದ ಸಭೆ ಕರೆಯಲಾಗಿದೆ. ಆದಕಾರಣ ಎಲ್ಲಾ ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನ ಭೋವಿ ವಡ್ಡರ ಸಮಾಜದ ಎಲ್ಲಾ ಕುಲಬಾಂಧವರು ಮತ್ತು ಗುರು ಹಿರಿಯರು, ಮಾಜಿ ಅಧ್ಯಕ್ಷರಗಳು ಮತ್ತು ಎಲ್ಲಾ ಪದಾಧಿಕಾರಿಗಳು, ಸಮಾಜದ ಜನಪ್ರತಿನಿಧಿಗಳು, & ಗಣ್ಯ ವ್ಯಕ್ತಿಗಳು , ಮಹಿಳಾ ಪದಾಧಿಕಾರಿಗಳು, ಪಟ್ಟಣ-ಗ್ರಾಮಗಳ ಗೌರವಾನ್ವಿತ ಮುಖಂಡರು, ಯುವಕ ಮಿತ್ರರು, ಹೆಚ್ಚಿನ ಸಂಖ್ಯೆಯಿಂದ ಬಂದು ಸಲಹೆ ಸೂಚನೆ ನೀಡಿ ಸಭೆಗೆ ಶಕ್ತಿ ತುಂಬಬೇಕಾಗಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇವೆ.
ಮಂಗಳವಾರ , ದಿನಾಂಕ 21-02-2023. ಸಮಯ ಬೆಳಗ್ಗೆ 11-00 ಕ್ಕೆ ಸ್ಥಳ ಭೋವಿ ಭವನ ( ಭೋವಿ ವಡ್ಡರ ಸಮಾಜದ ಜಾಗ (ಸ್ಥಳ) ಶಾಸ್ತ್ರಿ ಚೌಕ ಜೇವರ್ಗಿ, ತಾ. ಜೇವರ್ಗಿ, ಜಿ. ಕಲಬುರಗಿ.
ಈ ಸಂದರ್ಭದಲ್ಲಿ ಶರಣಪ್ಪ ಗುತ್ತೇದಾರ
ಅಧ್ಯಕ್ಷರು, ಭೋವಿ ವಡ್ಡರ ಸಮಾಜ ಜೇವರ್ಗಿ,ಶ್ರೀ ಸೋಮಯ್ಯ ನೆದಲಗಿ,ಗೌರವಾಧ್ಯಕ್ಷರು, ಭೋವಿ ವಡ್ಡರ ಸಮಾಜ ಜೇವರ್ಗಿ.ಚಂದ್ರಕಾಂತ ಕುಸ್ತಿ ಯಡ್ರಾಮಿ
ಹಿರಿಯ ಮುಖಂಡರು.ಗೀಡಪ್ಪಾ ನೆದಲಗಿಹಿರಿಯ ಮುಖಂಡರು.ಭೀಮಾಶಂಕರ ಕುರುಡೇಕರ್, ಮಾಜಿ ಅಧ್ಯಕ್ಷರು, ಭೋವಿ ವಡ್ಡರ ಸಮಾಜ ಜೇವರ್ಗಿ.ಡಾ. ಮಾದೇವಪ್ಪ ಯಡ್ರಾಮಿ ಉಪಾಧ್ಯಕ್ಷರು, ಭೋವಿ ವಡ್ಡರ ಸಮಾಜ ಜೇವರ್ಗಿ.ಹಣಮಂತ ಬಿಳವಾರ
ಪ್ರಧಾನ ಕಾರ್ಯದರ್ಶಿ, ಭೋವಿ ವಡ್ಡರ ಸಮಾಜ ಜೇವರ್ಗಿ.ಮತ್ತು ಎಲ್ಲಾ ಪದಾಧಿಕಾರಿಗಳು ಭಾಗವಹಿಸಲು ಪತ್ರಿಕಾ ಪ್ರಕಟಣೆ ಮೂಲಕ ಕುಲಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.