ಸುದ್ದಿಮೂಲ ವಾರ್ತೆ ಸಿಂಧನೂರು,ಡಿ.05:
ತುಂಗಭದ್ರಾಾ ಜಲಾಶಯ ನಾಲ್ಕು ಜಿಲ್ಲೆೆಗಳ ಜೀವನಾಡಿಯಾಗಿದೆ. ನದಿ ನೀರನ್ನೇ ನಂಬಿ ರೈತರು ಬದುಕುತ್ತಿಿದ್ದಾಾರೆ. ಅತೀವೃಷ್ಠಿಿಯಿಂದ ಮೊದಲ ಬೆಳೆ ಸಂಪೂರ್ಣ ಹಾನಿಯಾಗಿದೆ. ಎರಡನೇ ಬೆಳೆಗೆ ನೀರು ಕೊಡದಿದ್ದರೆ ಎಕರೆಗೆ 30 ಸಾವಿರ ರೂ.ಗಳ ಪರಿಹಾರ ಕೊಡಬೇಕು ಎಂದು ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ಸರಕಾರಕ್ಕೆೆ ಆಗ್ರಹಿಸಿದರು.
ಪತ್ರಿಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದರು. ತುಂಗಭದ್ರಾಾ ಜಲಾಶಯವು ರಾಯಚೂರು, ಕೊಪ್ಪಳ, ಬಳ್ಳಾಾರಿ ಹಾಗೂ ವಿಜಯನಗರ ಜಿಲ್ಲೆೆಗಳ ಲಕ್ಷಾಂತರ ರೈತರು ಬದುಕಾಗಿದೆ. ಪ್ರಸ್ತುತ ಡ್ಯಾಾಂ ಸುತ್ತಲಿರುವ 200ಕ್ಕೂ ಅಧಿಕ ಕಾರ್ಖಾನೆಗಳು ವಿಷಪೂರಿತ ನೀರು, ತ್ಯಾಾಜ್ಯ ನದಿ ಬಿಡುತ್ತಿಿರುವುದರಿಂದ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಇದೇ ನೀರನ್ನು ಕುಡಿಯುತ್ತಿಿರುವುದರಿಂದ ವಿವಿಧ ರೋಗಗಳಿಗೆ ತುತ್ತಾಾಗುತ್ತಿಿದ್ದಾಾರೆ ಎಂದು ದೂರಿದರು.
ತುಂಗಭದ್ರಾಾ ಉಳಿಯಬೇಕು ಎನ್ನುವ ಉದ್ದೇಶದಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಜೈ ಜವಾನ್ ಜೈ ಕಿಸಾನ್ ಜನಸೇವಾ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ವಿಶ್ವ ರೈತರ ದಿನಾಚರಣೆ ಅಂಗವಾಗಿ ತುಂಗಭದ್ರಾಾ ಜಲಾಶಯ ರಕ್ಷಣೆ ನಮ್ಮೆೆಲ್ಲರ ಹೊಣೆ ಸಮಾವೇಶ ಡಿ.23 ರಂದು ಸಿಂಧನೂರಿನ ಎಪಿಎಂಸಿ ಮೊದಲ ಗೇಟ್ನಲ್ಲಿರುವ ಟೆಂಡರ್ ಹಾಲ್ನಲ್ಲಿ ಹಮ್ಮಿಿಕೊಳ್ಳಲಾಗಿದೆ ಎಂದು ತಿಳಿಸಿದರು.
ನವಲಿ ಸಮಾನಾಂತರ ಜಲಾಶಯ ನಿರ್ಮಿಸಬೇಕು. ಜೋಳ ಖರೀದಿ ಕೇಂದ್ರ ಜ.1 ರಿಂದ ಆರಂಭಿಸಬೇಕು. ಕಾಲುವೆಯ ಕೆಳಭಾಗದ ರೈತರಿಗೆ ನೀರು ತಲುಪಿಸಬೇಕು. ಕಳಪೆ ಬೀಜ, ಗೊಬ್ಬರ ಮಾರಾಟ ತಡೆಗಟ್ಟಬೇಕು ಹಾಗೂ ತಪ್ಪಿಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಭತ್ತಕ್ಕೆೆ ಬೆಂಬಲ ಬೆಲೆ ಕನಿಷ್ಠ ರೂ.4 ಸಾವಿರ ನಿಗದಿ ಪಡಿಸಬೇಕು. ಬೆಲೆ ಖಾತ್ರಿಿ ಕಾಯ್ದೆೆ ಜಾರಿಗೊಳಿಸಬೇಕು. ಸಿಎಸ್ಎ್ ಕ್ಯಾಾಂಪಿನಲ್ಲಿ 500 ಎಕರೆ ಕುರಿಗಾಯಿಗಳಿಗೆ ಮೀಸಲಿಡಬೇಕು. ತುಂಗಭದ್ರಾಾ ಜಲಾಶಯದ 33 ಗೇಟ್ಗಳನ್ನು ಆದಷ್ಟು ಶೀಘ್ರ ಹೊಸದಾಗಿ ಅಳವಡಿಸಬೇಕು ಎಂಬ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಾಯಿಸಿ ಸಮಾವೇಶ ನಡೆಸಲಾಗುತ್ತಿಿದೆ ಎಂದು ಹೇಳಿದರು.
ಜೈ ಜವಾನ್ ಜೈ ಕಿಸಾನ್ ಜನಸೇವಾ ಸಂಘದ ಸಂಸ್ಥಾಾಪಕ ವೀರಭದ್ರಯ್ಯ ಎಸ್, ಕಲ್ಯಾಾಣ ಕರ್ನಾಟಕ ಗೌರವಾಧ್ಯಕ್ಷ ವೆಂಕಯ್ಯ ಶ್ರೇೇಷ್ಠಿಿ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ್ ಬಿಂಗಿ, ಕಾರ್ಯಾಧ್ಯಕ್ಷ ನಿರುಪಾದಿ ಅಡ್ಡಿಿ, ಮುಖಂಡರಾದ ಮಲ್ಲಿಕಾರ್ಜುನ ರೆಡ್ಡಿಿ, ಯಮನಪ್ಪ ಪಗಡದಿನ್ನಿಿ, ಮಲ್ಲಯ್ಯಸ್ವಾಾಮಿ, ಅಮರೇಗೌಡ ಬಾದರ್ಲಿ, ರವಿಕುಮಾರ ಬಸಾಪುರ ಉಪಸ್ಥಿಿತರಿದ್ದರು.
ಡಿ.23 ರಂದು ತುಂಗಭದ್ರಾ ರಕ್ಷಣೆ ನಮ್ಮೆಲ್ಲರ ಹೊಣೆ ಸಮಾವೇಶ ಎರಡನೇ ಬೆಳೆಗೆ ನೀರು ಕೊಡದಿದ್ದರೆ 30 ಸಾವಿರ ರೂ ಪರಿಹಾರ ಕೊಡಿ

