ಸುದ್ದಿಮೂಲ ವಾರ್ತೆ
ತುಮಕೂರು, ಏ.2: ತಾಲ್ಲೂಕಿನ ಕಸಬಾ ಹೋಬಳಿ ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿ ಬ್ರಹ್ಮ ರಥೋತ್ಸವವು
ಏಪ್ರಿಲ್ 6ರಂದು ಮಧ್ಯಾಹ್ನ 12 ರಿಂದ 1.30 ಗಂಟೆಯೊಳಗೆ ಜರುಗಲಿದ್ದು, ರಥೋತ್ಸವದ ದಿನದಂದು ರಾತ್ರಿ ಧೂಪದ ಸೇವೆ, ಧೂಳು ಮೆರವಣಿಗೆ, ಹೆಜ್ಜೆ ಮಂಗಳಾರತಿ, ಪಲ್ಲಕ್ಕಿ ಉತ್ಸವಗಳು ನಡೆಯಲಿವೆ.
ಶ್ರೀ ಸ್ವಾಮಿಯ ಜಾತ್ರಾ ಮಹೋತ್ಸವವು ಏ. 3 ರಿಂದ 9ರವರೆಗೆ ಜರುಗಲಿದ್ದು, ಪ್ರತಿ ದಿನ ಬೆಳಗ್ಗೆ ಅಭಿಷೇಕ
ನಡೆಯಲಿದೆ. ಏ.3ರ ರಾತ್ರಿ ಅಂಕುರಾರ್ಪಣ; ಏ.4ರಂದು ಧ್ವಜಾರೋಹಣ, ರಾತ್ರಿ ಇಂದ್ರಜಿತು ಉತ್ಸವ; ಏ.5ರ ಸಂತರ್ಪಣೆ, ಕಲ್ಯಾಣೋತ್ಸವ ಹಾಗೂ ರಾತ್ರಿ ಗಜೇಂದ್ರಮೋಕ್ಷ, ಕಲ್ಯಾಣೋತ್ಸವ; ಏ.6ರಂದು ಬೆಳಿಗ್ಗೆ ಯಾತ್ರಾದಾನ, ಮಂಟಪ ಪಡಿ; ಏ.7ರಂದು ಗೊಂಬೆ ತೇರು, ಸಂತರ್ಪಣೆ ಹಾಗೂ ರಾತ್ರಿ ಅಶ್ವಾರೋಹಣ; ಏ.8ರಂದು ಬೆಳಿಗ್ಗೆ ಸಂಧಾನ ಸೇವೆ, ವಸಂತೋತ್ಸವ, ತೀರ್ಥಸ್ನಾನ, ಸಂತರ್ಪಣೆ, ರಾತ್ರಿ ಧ್ವಜ ಅವರೋಹಣ, ದೇವತಾ ವಿಸರ್ಜನೆ, ದವನೋತ್ಸವ, ಪುಪ್ಪರಥ; ಏ.9ರಂದು ಬೆಳಿಗ್ಗೆ ಮಹಾಕುಂಭಾಭಿಷೇಕ, ಸಂಜೆ ಉಯ್ಯಾಲೋತ್ಸವ, ರಾತ್ರಿ ಹಂಸ ವಾಹನೋತ್ಸವ, ಹೆಜ್ಜೆಮಂಗಳಾರತಿ, ಶಯನೋತ್ಸವ,
ಮತ್ತಿತರ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ತಹಶೀಲ್ದಾರ್ ಸಿದ್ದೇಶ್ ಮನವಿ ಮಾಡಿದ್ದಾರೆ.