ವಾಷಿಂಗ್ಟನ್, ಡಿ.13
ಅಮೆರಿಕಾದ ಅಂತ್ಯತ ತೂಕದ (6.5 ಟನ್ ) ಬೃಹತ್ ಉಪಗ್ರಹ ಬ್ಲೂಬರ್ಡ್ ಅನ್ನು ಭಾರತದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲು ಸಿದ್ಧತೆ ಆರಂಭವಾಗಿವೆ.
ಡಿಸೆಂಬರ್ 15ರಂದು ಎಲ್ವಿಿಎಂ-3 ರಾಕೆಟ್ ಬ್ಲೂಬರ್ಡ್-6 ಹೆಸರಿನ ಅಮೆರಿಕನ್ ಉಪಗ್ರಹ ಉಡಾವಣೆಗೊಳ್ಳಲಿದೆ. ಬಹುತೇಕ ಪೂರ್ಣವಾಗಿ ಬೆಳದ ಒಂದು ಆನೆಯ ತೂಕದಷ್ಟು ಉಪಗ್ರಹದ ತೂಕ ಇದೆ ಎನ್ನಲಾಗುತ್ತಿಿದೆ.
ಭಾರತದಿಂದ ಉಡಾಯಿಸಿರುವ ಅಮೆರಿಕಾದ ಉಪಗ್ರಹಗಳಲ್ಲಿ ಭಾರೀ ತೂಕದ ಉಪಗ್ರಹವಾಗಲಿದೆ. ಭಾರತ ಮತ್ತು ಅಮೆರಿಕಾ ದೇಶಗಳು ಪರಸ್ವರ ಸಹಕಾರ ನೀಡುವುದರಲ್ಲಿ ಇದೊಂದು ಹೆಮ್ಮೆೆಯ ಕ್ಷಣವಾಗಲಿದೆ.
ಮೊಬೈಲ್ ನೆಟ್ವರ್ಕ್ ಸಿಗದ ಸ್ಥಳಗಳಿಗೆ ನೆಟ್ವರ್ಕ್ ದೊರಕಿಸುವುದು ಉದ್ದೇಶ:
ಬ್ಲೂಬರ್ಡ್-6 ಉಪಗ್ರಹ ಎಎಸ್ಟಿಿ ಸ್ಪೇಸ್ ಮೊಬೈಲ್ ಎಂಬ ಟೆಕ್ಸಾಾಸ್ ಮೂಲದ ಕಂಪನಿಯ ಅದ್ಬುತ ಆಲೋಚನೆಯ ಸಹಕಾರವಾಗಿದೆ. ಈ ಸಂಸ್ಥೆೆ ಬಾಹ್ಯಾಾಕಾಶದಲ್ಲಿ ಉಪಗ್ರಹಗಳ ಜಾಲವೊಂದನ್ನು ನಿರ್ಮಿಸಿ ಆ ಮೂಲಕ ಭೂಮಿಯ ಎಲ್ಲ ಮೂಲೆಗಳಿಗೆ ಅದರಲ್ಲೂ ಮೊಬೈಲ್ ಟವರ್ಗಳನ್ನು ನಿರ್ಮಿಸುವುದು ಅಸಾಧ್ಯವಾದ ಅಥವಾ ಅತ್ಯಂತ ದುಬಾರಿ ಎನಿಸುವ ದುರ್ಗಮ ಪ್ರದೇಶಗಳಿಗೆ ಅತ್ಯಂತ ವೇಗದ ಅಂತರ್ಜಾಲ ಸೇವೆ ಒದಗಿಸುವ ಗುರಿ ಹೊಂದಿದೆ.
ದಟ್ಟ ಕಾಡುಗಳು, ದುರ್ಗಮ ಪರ್ವತಗಳು, ಮರುಭೂಮಿಗಳು ಅಥವಾ ದೂರದ ದ್ವೀಪಗಳ ಕೊನೆಗೂ ನಿರಂತರ ಸಂಪರ್ಕ ಸೇವೆ ಹೊಂದಲು ಇದರಿಂದ ಸಾಧ್ಯವಿದೆ.
ಬ್ಲೂಬರ್ಡ್-6 ಉಪಗ್ರಹದಲ್ಲಿ ವಿಶೇಷವಾಗಿರುವುದು ಎಂದರೆ ಅದರ ಆಂಟೆನಾ. ಇದು ಭೂಮಿಯ ಕೆಳಕಕ್ಷೆಗೆ ತೆರಳಿರುವ ಅತಿದೊಡ್ಡ ವಾಣಿಜ್ಯಿಿಕ ಆಂಟೆನಾ ಆಗಿದೆ. ಇದು ಬಾಹ್ಯಾಾಕಾಶದಲ್ಲಿ ತೆರೆಯಲ್ಪಟ್ಟಾಾಗ 2400 ಚದರ ಅಡಿಗಳಷ್ಟು ಪ್ರದೇಶವನ್ನು ವ್ಯಾಾಪಿಸಲಿದೆ. ಅಂದರೆ ಸಮಾನ್ಯವಾಗಿ ಒಂದು ಬಾಸ್ಕೆೆಟ್ ಬಾಲ್ ಮೈದಾನದಷ್ಟು ದೊಡ್ಡದಾಗಿರಲಿದೆ. ಇದು ಒಂದು ಬೃಹತ್ ಕೊಡೆಯ ರೀತಿಯಲ್ಲಿ ತೆರೆಯಲಿದ್ದು ಬಾಹ್ಯಾಾಕಾಶ ಮತ್ತು ನಿಮ್ಮ ಮೊಬೈಲ್ಗಳ ನಡುವೆ ಸಂಕೇತವನ್ನು ಸೆರೆಹಿಡಿದು ರವಾನಿಸಲು ಸಿದ್ಧವಾಗಲಿದೆ.
ಬ್ಲೂಬರ್ಡ್ ಉಪಗ್ರಹ 10,000 ಮೆಗಾ ಹರ್ಟ್ಜ್ ತನಕ ಬ್ಯಾಾಂಡ್ ವಿಸ್ತರಣೆ ಹೊಂದಿದೆ. ಅಂದರೆ ಇದು ಸಾವಿರಾರು ದೂರವಾಣಿ ಕರೆಗಳು, ವಿಡಿಯೋ ವೀಕ್ಷಣೆ ಮತ್ತು ನಿರಂತರ ಡೌನ್ಲೌೌಡ್ಛ್ಗಳನ್ನು ಬೆಂಬಲಿಸುವ ಅತ್ಯಂತ ವೇಗದ ಅಂತರ್ಜಾಲ ಸೇವೆ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ಬ್ಲೂಬರ್ಡ್ ಸೇವೆ ಈಗಾಗಲೇ ಇರುವ ಮೊಬೈಲ್ ಜಾಲದೊಡನೆ ಕಾರ್ಯಚರಣೆ ಸುಲಭವಾಗಿಸುತ್ತದೆ. ವೊಡೊನ್, ಎಟಿಮತ್ತು ಟಿ ಅಥವಾ ಏರ್ಟೆಲ್ ನಂತ ಸಂಸ್ಥೆೆಗಳು ಎಎಸ್ಟಿಿ ಸ್ಪೇಸ್ ಮೊಬೈಲ್ ಜೊತೆ ಸಹಯೋಗ ಹೊಂದಿ ಪರವಾನಗಿ ಹೊಂದಿರುವ ರೇಡಿಯೋ ಸಂಕೇತಗಳನ್ನು ಹಂಚಿಕೊಳ್ಳುತ್ತವೆ. ಇದರ ಪರಿಣಾಮವಾಗಿ ನೀವು ಯಾವುದೇ ಮೊಬೈಲ್ ಸಂಕೇತಗಳಿಲ್ಲದ ಜಾಗದಲ್ಲಿದ್ದರೂ ಬ್ಲೂಬರ್ಡ್ ಉಪಗ್ರಹಗಳು ಅಕಾರದಲ್ಲಿರುವ ಕಣ್ಣಿಿಗೆ ಕಾಣಿಸದ ಟವರ್ಗಳಂತೆ ಕಾರ್ಯಾಚರಣೆ ನಡೆಸಿ ನೆಟ್ವರ್ಕ್ ಇಲ್ಲದ ಅಂತರವನ್ನು ತುಂಬುತ್ತವೆ.
ನಿರಂತರ ಸೇವೆ ಸಾಧ್ಯವಿಲ್ಲ: ಸದ್ಯದ ಮಟ್ಟಿಿಗೆ ಈ ಸೇವೆ ಎಲ್ಲಡೆಯೂ ನಿರಂತರವಾಗಿ ಲಭಿಸಲು ಸಾಧ್ಯವಿಲ್ಲ. ಈಗ ಒಂದು ಬಸ್ ತನ್ನ ಮಾರ್ಗದಲ್ಲಿ ಸಾಗುವ ರೀತಿಯಲ್ಲಿ ಉಪಗ್ರಹ ತಮ್ಮ ಮಾರ್ಗದಲ್ಲಿ ಸಾಗುವ ರೀತಿಯಲ್ಲಿ ನಿಮ್ಮ ಪ್ರದೇಶದ ಮೇಲಿನಿಂದ ಹಾದುಹೋಗುವಾಗ ಮಾತ್ರ ನಿಮಗೆ ಸಂಕೇತಗಳು ಸಿಗಲು ಸಾಧ್ಯ. ಆದರೆ ಎಎಸ್ಟಿಿ ಸ್ಪೇಸ್ ಮೊಬೈಲ್ ದೊಡ್ಡ ಯೋಜನೆಗಳನ್ನು ಹಾಕಿಕೊಂಡಿದೆ. 2026ರ ಆರಂಭದಲ್ಲಿ ಇಂತಹ ಆರು ಬೃಹತ್ ಉಪಗ್ರಹಗಳನ್ನು ಉಡಾಯಿಸಲು ಯೋಜನೆ ಹಾಕಿಕೊಂಡಿದೆ.
ಡಿ. 15ರಂದು ಶ್ರೀಹರಿಕೋಟಾದಿಂದ ಅಮೆರಿಕಾದ ಬೃಹತ್ ತೂಕದ ಉಪಗ್ರಹ ಉಡಾವಣೆ

