ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.23:
ಕರ್ನಾಟಕದಲ್ಲಿ ಉಂಟಾಗಿರುವ ಅಧಿಕಾರ ಹಂಚಿಕೆಯ ಬಿಕ್ಕಟ್ಟಿಿಗೆ ಹೈಕಮಾಂಡ್ ಮಧ್ಯ ಪ್ರವೇಶಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಿಯಾಗಿದ್ದು, ಇದೇ 27ರಂದು ಶನಿವಾರ ನಡೆಯುವ ಕಾಂಗ್ರೆೆಸ್ ಕಾರ್ಯಕಾರಿಣಿಯತ್ತ ಎಲ್ಲರ ಚಿತ್ತ ನೆಟ್ಟಿಿದೆ.
ಉಪಾಹಾರ ಸಭೆಗಳನ್ನು ನಡೆಸುತ್ತಲೇ ಒಗ್ಗಟ್ಟು ತೋರಿಸುತ್ತಿಿದ್ದ ಮುಖ್ಯಮಂತ್ರಿಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಅವರು ಒಳಗೊಳಗೇ ತಂತ್ರ ಪ್ರತಿತಂತ್ರಗಳನ್ನು ಎಣೆಯುತ್ತಿಿರುವುದು ಗುಟ್ಟಾಾಗಿ ಉಳಿದಿಲ್ಲ. ಇದರಿಂದ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆೆ ಜಟಿಲವಾಗುತ್ತಾಾ ಸಾಗುತ್ತಿಿದೆ.
‘ನಾಯಕತ್ವದ ಗೊಂದಲವನ್ನು ಪಕ್ಷವಾಗಲಿ, ಹೈಕಮಾಂಡ್ ಆಗಲಿ ಸೃಷ್ಟಿಿಸಿದ್ದಲ್ಲ. ಅವೆಲ್ಲಾ ಸ್ಥಳೀಯವಾಗಿಯೇ ಸೃಷ್ಟಿಿಯಾಗಿರುವುದು. ಈಗಿರುವ ಗೊಂದಲಗಳನ್ನು ಸ್ಥಳೀಯ ಮಟ್ಟದಲ್ಲೇ ಪರಿಹರಿಸಿಕೊಳ್ಳಬೇಕು’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ ಬೆನ್ನಲ್ಲಿಯೇ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ರಾಹುಲ್ಗಾಂಧಿಯವರ ಮಧ್ಯ ಪ್ರವೇಶಕ್ಕೆೆ ಆಗ್ರಹಿಸಿದ್ದಾರೆ. ಆದರೆ, ರಾಹುಲ್ಗಾಂಧಿ ಇದುವರೆಗೂ ಕರ್ನಾಟಕದ ರಾಜಕಾರಣದಲ್ಲಿ ನಡೆಯುತ್ತಿಿರುವ ಗೊಂದಲಗಳ ಬಗ್ಗೆೆ ಯಾವುದೇ ಪ್ರತಿಕ್ರಿಿಯೆ ನೀಡಿಲ್ಲ.
ಈ ಮಧ್ಯೆೆ ಇದೇ ಶನಿವಾರ ಕಾಂಗ್ರೆೆಸ್ ಕಾರ್ಯಕಾರಿಣಿ ಸಭೆಯನ್ನು ನವದೆಹಲಿಯಲ್ಲಿ ಕರೆಯಲಾಗಿದೆ. ಮಹಾತ್ಮಾಾಗಾಂಧಿ ಗ್ರಾಾಮೀಣ ಉದ್ಯೋೋಗ ಖಾತ್ರಿಿ ಯೋಜನೆಗೆ ವಿಬಿ-ಜಿ ರಾಮ್ಜಿ ಎಂದು ಹೆಸರು ಬದಲಾವಣೆ ಮಾಡಿದ ಸಂಬಂಧ ಇನ್ನೂ ದೊಡ್ಡಮಟ್ಟದಲ್ಲಿ ಹೋರಾಟ ರೂಪಿಸುವುದು ಸಿಡಬ್ಲ್ಯೂಸಿ ಪ್ರಮುಖ ಅಜೆಂಡಾ ಎಂದು ಹೇಳಲಾಗಿದೆ. ಆದರೆ, ಇದೇ ವೇಳೆ ದೇಶದಲ್ಲಿಯೇ ಕಾಂಗ್ರೆೆಸ್ ಅಧಿಕಾರದಲ್ಲಿರುವ ಮುಖ್ಯ ರಾಜ್ಯ ಕರ್ನಾಟಕದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಮತ್ತು ಅದರಲ್ಲೂ ಇಬ್ಬರು ಪ್ರಮುಖ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮಧ್ಯೆೆ ನಡೆಯುತ್ತಿಿರ ಸಿಎಂ ಕುರ್ಚಿಯ ಮುಸುಕಿನ ಗುದ್ದಾಟದ ಬಗ್ಗೆೆ ಚರ್ಚೆಯಾಗದೇ ಇರದು. ಈ ವೇಳೆ ಹೈಕಮಾಂಡ್ ಯಾವ ನಿರ್ಧಾರ ತಳೆಯುತ್ತದೆ ಎಂಬುದು ಎಲ್ಲರ ಕುತೂಹಲಕ್ಕೆೆ ಕಾರಣವಾಗಿದೆ.
ದೆಹಲಿಯಲ್ಲಿ ಡಿಕೆಶಿ:
ಈ ಮಧ್ಯೆೆ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಕೇಂದ್ರ ಜಲಶಕ್ತಿಿ ಸಚಿವಾಲಯವು ಅಂತಾರಾಜ್ಯ ನದಿ ಜೋಡಣೆ ಕುರಿತು ದೆಹಲಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಅಧಿಕೃತವಾಗಿ ಡಿಸಿಎಂ ಪಾಲ್ಗೊೊಂಡಿದ್ದರು. ಕೇಂದ್ರ ವಿದ್ಯುತ್ಛಕ್ತಿಿ, ವಸತಿ ಮತ್ತು ನಗರಾಭಿವೃದ್ಧಿಿ ವ್ಯವಹಾರಗಳ ಸಚಿವ ಮನೋಹರಲಾಲ್ ಖಟ್ಟರ್ ಅವರನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ನವದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ನವದೆಹಲಿಯಲ್ಲಿಯೇ ವಾಸ್ತವ್ಯ ಹೂಡಿರುವ ಡಿ.ಕೆ. ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಈ ವೇಳೆ ಅಧಿಕಾರ ಹಸ್ತಾಾಂತರಕ್ಕೆೆ ಒತ್ತಡ ಹಾಕಲಿದ್ದಾರೆ ಎಂದು ಹೇಳಲಾಗುತ್ತಿಿದೆ. ಇದು ಸಿಡಬ್ಲ್ಯೂಸಿ ಸಭೆ ಮೇಲೆ ಯಾವ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿಿದೆ.

