ಹೊಸಪೇಟೆ(ವಿಜಯನಗರ) : ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಜ.21ರಂದು ಪುರಂದರ ಉತ್ಸವ ಮತ್ತು ಜನವರಿ 27 ರಿಂದ 29 ರವರೆಗೆ ನಡೆ ಯುವ ಹಂಪಿ ಉತ್ಸವ ಕಾರ್ಯಕ್ರಮ ಪೂರ್ವ ತಯಾರಿ ಕೈಗೊಳ್ಳುವುದು ಅಗ ತ್ಯವಿರುವುದರಿಂದ ಜನವರಿಯಲ್ಲಿ ನಡೆಯಬೇಕಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಯ ಕಡೆ ಹೊಸಪೇಟೆ ಕಾರ್ಯಕ್ರಮವನ್ನು ಫೆಬ್ರವರಿ ತಿಂಗಳಿನಿಂದ ಕೈಗೊಳ್ಳಲಾ ಗುವುದು ಎಂದು ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ತಿಳಿಸಿ ದ್ದಾರೆ.
ಉಳಿದಂತೆ ಜ.21ರಂದು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಜರುಗಲಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಆಯಾ ತಾಲೂಕು ತಹಶೀಲ್ದಾರರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ವಿವಿಧೆಡೆ ವಾಸ್ತವ್ಯದ ವಿವರ: ಜ.21 ರಂದು ಹರಪನಹಳ್ಳಿ ತಾಲೂಕಿನ ಚಿಗಟೇರಿ ಹೋಬಳಿಯ ನಂದಿಬೇವೂರು ಗ್ರಾಮದಲ್ಲಿ , ಹೂವಿನಹಡಗಲಿ ತಾಲೂಕಿನ ಹೂ ವಿನಹಡಗಲಿ ಹೋಬಳಿಯ ನವಲಿ ಗ್ರಾಮದಲ್ಲಿ, ಹಗರಿಬೊಮ್ಮನಹಳ್ಳಿ ತಾಲೂ ಕಿನ ಹಗರಿಬೊಮ್ಮನಹಳ್ಳಿ ಹೋಬಳಿಯ ಗುಳೇದಾಳು ಗ್ರಾಮದಲ್ಲಿ , ಕೊಟ್ಟೂರು ತಾಲೂಕಿನ ಕೊಟ್ಟೂರು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ತಾಲೂಕಿನ ತಹಶೀಲ್ದಾರರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಹೋಬಳಿಯ ಶಿವಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯದಲ್ಲಿ ಸಾರ್ವಜನಿ ಕರು ತಮ್ಮ ಆಹವಾಲುಗಳಿದ್ದಲ್ಲಿ ಸಲ್ಲಿಸಿ ಪರಿಹಾರ ಕಂಡುಕೊಳ್ಳ ಬಹುದಾಗಿದೆ.