ಸುದ್ದಿಮೂಲ ವಾರ್ತೆ ರಾಯಚೂರು, ಜ.21:
12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯ ಅತ್ಯಂತ ನಿಷ್ಠುರವಾದಿ, ಮಾನವತಾವಾದಿ, ಕಾಯಕಯೋಗಿ, ದಾಸೋಹಿ ಎನಿಸಿಕೊಂಡ ಚೌಡಯ್ಯ ದೋಣಿಯನ್ನು ನಡೆಸುವ ಅಂಬಿಗ ವೃತ್ತಿಿಯನ್ನು ಕೈಗೊಂಡು ಕಾಯಕತತ್ವ ಪಾಲಿಸಿಕೊಂಡು ಬಂದವರು, ದಾಸೋಹಕ್ಕೆೆ ಹೆಚ್ಚು ಒತ್ತನ್ನು ಕೊಟ್ಟಂತಹ ಶಿವಶರಣರು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಕುಲಪತಿ ಪ್ರೊೊ.ಶಿವಾನಂದ ಕೆಳಗಿನಮನಿ ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿ ಲಯದ ಸಿಂಡಿಕೇಟ್ ಹಾಲ್ನಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಅವರ ಭಾವಚಿತ್ರಕ್ಕೆೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯ ಇಷ್ಟಲಿಂಗ ಪೂಜೆ ಆರಾಧಕರಾಗಿದ್ದರು. ಬಂಡಾಯದ ಧ್ವನಿ ಅವರಲ್ಲಿತ್ತು ಕನ್ನಡ ಪದಗಳನ್ನು ಅವರು ಅತಿ ಹೆಚ್ಚು ಬಳಸಿದ್ದಾಾರೆ ಹಾಗೂ ನ್ಯಾಾಯನಿಷ್ಠುರಿಯಾಗಿ ಕಾಯಕದ ಸಿದ್ಧಾಾಂತವನ್ನು ಬದುಕಿನಲ್ಲಿ ನೇಮನಿಷ್ಠೆೆಯಿಂದ ಅಳವಡಿಸಿಕೊಂಡಂತವರು. ಕಾಯಕ, ದಾಸೋಹ ಮತ್ತು ಮುಕ್ತಿಿಯ ವಿಷಯವಾಗಿ ಕುರಿತು ಗಂಭೀರವಾಗಿ ಯೋಚನೆ ಮಾಡುತ್ತಿಿದ್ದರು. ಸಾತ್ವಿಿಕ ಶರಣರು ಒಂದು ಕಡೆಯಾದರೆ, ಮತ್ತೊೊಂದೆಡೆ ಇದ್ದುದ್ದನ್ನು ಇದ್ದ ಹಾಗೆ ಹೇಳುವ ನಿಷ್ಠುರವಾದಿ ಶರಣರಲ್ಲಿ ಮಡಿವಾಳ ಮಾಚಿದೇವ, ನೂಲಿ ಚಂದಯ್ಯ, ಅಂಬಿಗರ ಚೌಡಯ್ಯ ಇವರೆಲ್ಲರೂ ಕಾಯಕಕ್ಕೆೆ ಹೆಚ್ಚು ಒತ್ತು ಕೊಟ್ಟಿಿದ್ದಾಾರೆ. ದೇವರನ್ನೇ ಧಿಕ್ಕರಿಸಿದಂತವರು. ಶರಣ ಪರಂಪರೆಯ ಅಂಬಿಗರ ಚೌಡಯ್ಯರ ಕಾಯಕತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋೋಣ ಇಂತಹ ಮಹನೀಯರ ಜಯಂತಿ ಆಚರಣೆ ಶ್ಲಾಾಘನೀಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಡಾ.ಎ.ಚನ್ನಪ್ಪ ಕಾಲೇಜು ಅಭಿವೃದ್ಧಿಿ ಮಂಡಳಿ ನಿರ್ದೇಶಕ ಡಾ.ಸುಯಮೀಂದ್ರ ಕುಲಕರ್ಣಿ, ಡೀನರಾದ ಪ್ರೊೊ.ಪಾರ್ವತಿ.ಸಿ.ಎಸ್., ಗ್ರಂಥಪಾಲಕ ಡಾ.ಜಿ.ಎಸ್.ಬಿರಾದಾರ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾಾರ್ಥಿ ಗಳು ಉಪಸ್ಥಿಿತರಿದ್ದರು. ಉಪಕುಲಸಚಿವ ಡಾ.ಕೆ.ವೆಂಕಟೇಶ ಸ್ವಾಾಗತಿಸಿ ವಂದಿಸಿದರು.
ವಾಲ್ಮೀಕಿ ವಿವಿ : ಅಂಬಿಗರ ಚೌಡಯ್ಯ ಜಯಂತಿ ಆಚರಣೆಯಲ್ಲಿ ಪ್ರೊ.ಶಿವಾನಂದ ಕೆಳಗಿನಮನಿ ಅಂಬಿಗರ ಚೌಡಯ್ಯರ ಕಾಯಕತತ್ವ ಜೀವನದಲ್ಲಿ ಅಳವಡಿಸಿಕೊಳ್ಳೋಣ

