ಸುದ್ದಿಮೂಲ ವಾರ್ತೆ ನವದೆಹಲಿ, ಡಿ.11:
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಪ್ರಸ್ತಾಾಪಿಸುವ ’ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆಯ ಸಾಧಕ-ಬಾಧಕಗಳನ್ನು ಚರ್ಚಿಸಲು ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅವಧಿಯನ್ನು ಮುಂದಿನ 2026ರ ಬಜೆಟ್ ಅವಧಿಯವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
129ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಮತ್ತು ಕೇಂದ್ರಾಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆಗಳ ಕುರಿತು ಇನ್ನಷ್ಟು ವಿಸ್ತೃತ ಚರ್ಚೆಗಳು ನಡೆಯಬೇಕಿದೆ. ಜೆಪಿಸಿ ಅವಧಿಯನ್ನು ವಿಸ್ತರಿಸಬೇಕು ಎಂದು ಸಮಿತಿಯ ಅಧ್ಯಕ್ಷ ಪಿ.ಪಿ. ಚೌಧರಿ ಅವರು ಲೋಕಸಭೆಯಲ್ಲಿ ಪ್ರಸ್ತಾಾಪಿಸಿದರು. ಇದನ್ನು ಸ್ಪೀಕರ್ ಓಂ ಬಿರ್ಲಾ ಅವರು ಧ್ವನಿಮತಕ್ಕೆೆ ಹಾಕಿದರು. ಇಡೀ ಸದನವು ಇದನ್ನು ಒಪ್ಪಿಿಕೊಂಡಿತು.
ಇನ್ನಷ್ಟು ವಿಸ್ತೃತ ಚರ್ಚೆ ಬೇಕಿದೆ: ಮಹತ್ವದ ಮಸೂದೆ ಕುರಿತು ಉತ್ತಮ ಮತ್ತು ರಚನಾತ್ಮಕ ಚರ್ಚೆ ನಡೆಯುತ್ತಿಿದೆ. ಸಮಿತಿಯ ಮುಂದಿನ ಸಭೆ ಡಿಸೆಂಬರ್ 17 ರಂದು ನಡೆಯಲಿದೆ. ಈ ಕುರಿತ ವರದಿಯನ್ನು ಇನ್ನೂ ಸಿದ್ಧಪಡಿಸಿಲ್ಲ. ಬಹಳಷ್ಟು ಸದಸ್ಯರ ಅಭಿಪ್ರಾಾಯಗಳನ್ನು ಆಲಿಸಬೇಕಿದೆ. ’ಒಂದು ರಾಷ್ಟ್ರ ಒಂದು ಚುನಾವಣೆ’ ಕಲ್ಪನೆಯು ದೊಡ್ಡ ಚುನಾವಣಾ ಸುಧಾರಣೆಯಾಗಿದೆ. ಜೆಪಿಸಿಯಲ್ಲಿನ ಸದಸ್ಯರು ರಾಷ್ಟ್ರದ ಹಿತಾಸಕ್ತಿಿಗಾಗಿ ಕೆಲಸ ಮಾಡುತ್ತಿಿದ್ದಾರೆ ಎಂದು ಸಮಿತಿಯ ಅಧ್ಯಕ್ಷ, ಬಿಜೆಪಿ ಸಂಸದರೂ ಆಗಿರುವ ಪಿ.ಪಿ. ಚೌಧರಿ ಅವರು ಹೇಳಿದರು.
ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಸುರ್ಜಿತ್ ಭಲ್ಲಾ ಮತ್ತು ಅರವಿಂದ್ ರಾಜ್ಗರಿಯಾ ಸೇರಿದಂತೆ ಉನ್ನತ ಅರ್ಥಶಾಸಜ್ಞರನ್ನು ಸಮಿತಿ ಸದಸ್ಯರು ಭೇಟಿಯಾಗಿ ಚರ್ಚಿಸಿದರು. ಏಕಕಾಲಕ್ಕೆೆ ಚುನಾವಣೆಗಳನ್ನು ನಡೆಸಿದರೆ ಆಗುವ ಖರ್ಚು 7 ಲಕ್ಷ ಕೋಟಿ ತಲುಪಲಿದೆ. ಇದು ದೇಶದ ಜಿಡಿಪಿಯ ಶೇಕಡಾ 1.6 ರಷ್ಟು ಆಗಲಿದೆ ಎಂದು ಅಂದಾಜಿಸಲಾಗಿದೆ. ಜೆಪಿಸಿ ಇಲ್ಲಿಯವರೆಗೆ 14 ಸಭೆಗಳು ಮತ್ತು ವಿವಿಧ ರಾಜ್ಯಗಳಿಗೆ ಭೇಟಿ ನೀಡಿದೆ. 2026ರ ಬಜೆಟ್ ವೇಳೆಗೆ ಅಂತಿಮ ವರದಿ ಸಲ್ಲಿಸುವ ಗಡುವು ಹೊಂದಿದೆ.
ಸಮಿತಿಯಲ್ಲಿ ಯಾರು ಇದ್ದಾರೆ:
ಒಂದು ದೇಶ, ಒಂದು ಚುನಾವಣೆಯ ಕುರಿತು ಚರ್ಚೆ ನಡೆಸಲು ರಚಿಸಲಾಗಿರುವ ಜೆಪಿಸಿಯಲ್ಲಿ 31 ಸದಸ್ಯರಿದ್ದಾರೆ. ಇದರಲ್ಲಿ ಬಿಜೆಪಿಯ ಪಿ.ಪಿ. ಚೌಧರಿ, ಬಾನ್ಸುರಿ ಸ್ವರಾಜ್, ಅನುರಾಗ್ ಠಾಕೂರ್ ಸೇರಿದಂತೆ 16 ಸಂಸದರು, ಕಾಂಗ್ರೆೆಸ್ನ ಸಂಸದರಾದ ಪ್ರಿಿಯಾಂಕಾ ವಾದ್ರಾಾ, ಮನೀಶ್ ತಿವಾರಿ ಸೇರಿದಂತೆ 5 ಸಂಸದರು ಇದ್ದಾರೆ. ಎಸ್ಪಿಿ, ಪಕ್ಷದ ಇಬ್ಬರು ಹಾಗೂ ವಿವಿಧ ಪಕ್ಷಗಳ ಸದಸ್ಯರು ಮತ್ತು ರಾಜ್ಯಸಭೆಯ 10 ಸದಸ್ಯರೂ ಒಳಗೊಂಡಿದ್ದಾರೆ

