ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.04: ಪಶುಪಾಲನಾ ಮತ್ತು ಪಶುವದ್ಯಕೀಯ ಸೇವಾ ಇಲಾಖೆಯಿಂದ ಹಾಗೂ ಸಂಜಿವಿನಿ (ಎನ್.ಆರ್.ಎಲ್.ಎಂ) ಯೋಜನೆಯ ಅಡಿಯಲ್ಲಿ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿರುವ ಪಶು ಸಖಿಯರಿಗೆ ಪಶುಸಂಗೋಪನಾ ಚಟುವಟಿಕೆಗಳ ಕುರಿತು ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಸೆಪ್ಟಂಬರ್ 02ರಂದು ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.
ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ಕಾರ್ಯಗಾರ ಉದ್ಘಾಟಿಸಿದರು.
ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರಾದ ಪಿ.ಎಂ.ಮಲ್ಲಯ್ಯ ಅವರು ಕಾರ್ಯಗಾರದಲ್ಲಿ ಮಾತನಾಡಿ, ಮೂಖ ಪ್ರಾಣಿಗಳ ಸೇವೆ ಮಾಡುವ ಅವಕಾಶವನ್ನು ಪಶು ಸಖಿಯರು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಸಣ್ಣ, ಅತೀ ಸಣ್ಣ ರೈತರಿಗೆ ಪಶು ಸಂಗೋಪನಾ ಬಗ್ಗೆ ಮಾಹಿತಿ ನೀಡಲು ಪಶು ಸಖಿಗಳು ಪಶು ವೈದ್ಯಾಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಸಂಜಿವಿನಿ ಎನ್.ಅರ್.ಎಲ್.ಎಂ ಘಟಕದ ಅಂಬಣ್ಣ ಅವರು ಮಾತನಾಡಿ, ಪಶು ಸಖಿಗಳು ಪಶುಸಂಗೋಪನಾ ಇಲಾಖೆಯ ಸಹಯೋಗದೊಂದಿಗೆ ಕೆಲಸ ಕಾರ್ಯಗಳನ್ನು ನಿರ್ವಹಿಸಿ, ಗ್ರಾಮೀಣ ಭಾಗದ ರೈತರಿಗೆ ಸರ್ಕಾರದ ವಿವಿಧ ಸೌಲಭ್ಯಗಳು ತಲುಪುವ ನಿಟ್ಟಿನಲ್ಲಿ ಕಾಳಜಿ ವಹಿಸಬೇಕು ಎಂದರು.
ಕಾರ್ಯಗಾರದಲ್ಲಿ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ಭಾರತ ಮೂಲತಃ ಹಳ್ಳಿಗಳ ದೇಶವಾಗಿದೆ. ಪಶುಪಲನಾ ಚಟುವಟಿಕೆಗಳು ದಿನೇದಿನೆ ಕಡಿಮೆ ಆಗುತ್ತಿರುವ ಈ ದಿನಗಳಲ್ಲಿ ಪಶುಪಾಲನೆಯಿಂದಾಗುವ ಅನುಕೂಲತೆಗಳ ಬಗ್ಗೆ ಜನತೆಗೆ ಅರಿವು ಮೂಡಿಸುವಲ್ಲಿ ಪಶು ಸಖಿಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ
ತಾಲೂಕು ವ್ಯಾಪ್ತಿಯ ಪಶು ವೈದ್ಯಾಧಿಕಾರಿಗಳು, ಸಂಜೀವಿನಿ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ವಲಯ ಮೇಲ್ವಿಚಾಕರು, ಸಂಜೀವಿನಿ ಒಕ್ಕೂಟಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪಶು ಸಖಿಗಳು ಉಪಸ್ಥಿತರಿದ್ದರು.