ಸುದ್ದಿಮೂಲ ವಾರ್ತೆ ರಾಯಚೂರು, ಡಿ.04:
ಒಂದು ದೇಶ ಒಂದೇ ಚುನಾವಣೆಯಿಂದ ಪ್ರಾಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷ ಪ್ರಾಾದೇಶಿಕ ಹಿತೈಷಿಯಾಗಿ ಚಿಂತಿಸುವಂತೆ ಆಗಲಿದೆ ಎಂದು ವಿಧಾನ ಪರಿಷತ್ ಶಾಸಕಿ ಹೇಮಲತಾ ನಾಯಕ್ ತಿಳಿಸಿದರು.
ನಗರದ ವೇದಾಂತ ಪದವಿ ಕಾಲೇಜಿನಲ್ಲಿ ಒಂದು ದೇಶ ಒಂದು ಚುನಾವಣೆ ಕುರಿತಂತೆ ಏರ್ಪಡಿಸಿದ್ದ ಚಿಂತನಾ ಗೋಷ್ಠಿಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆದರೆ, ಪ್ರಾಾದೇಶಿಕ ಪಕ್ಷಗಳು ಸಂಕುಚಿತ ರಾಜಕೀಯ ಕಾರ್ಯಸೂಚಿಗಳನ್ನು ಮೀರಿ ಯೋಚಿಸಲು ಮತ್ತು ರಾಷ್ಟ್ರೀಯ ಪ್ರಗತಿಯ ಮೇಲೆ ಗಮನಹರಿಸಲು ಸಾಧ್ಯವಾಗುತ್ತದೆ ಎಂದು ಒತ್ತಿಿ ಹೇಳಿದರು.
1951-52ರಲ್ಲಿ ಮೊದಲ ಚುನಾವಣೆ ನಡೆದಿತ್ತು. 7 ಹಂತಗಳಲ್ಲಿ ಅದು ನಡೆಯಿತು. 57ರಲ್ಲಿ 2ನೇ ಚುನಾವಣೆ ನಡೆಸಲಾಯಿತು. 1952, 57, 62, 67ರಲ್ಲಿ ರಾಜ್ಯ ವಿಧಾನಸಭೆಗಳು- ಸಂಸತ್ತಿಿಗೆ ಏಕಕಾಲದಲ್ಲಿ ಚುನಾವಣೆ ನಡೆದಿತ್ತು ನೆನಪಿಸಿದರು.
28 ರಾಜ್ಯಗಳು ಇರುವ ಭಾರತದಲ್ಲಿ ಚುನಾವಣೆ ಎಂಬುದು ಈಗ ನಿರಂತರ ಪ್ರಕ್ರಿಿಯೆ ಆಗಿದೆ. 45 ದಿನಗಳ ನೀತಿಸಂಹಿತೆ ಪ್ರಕ್ರಿಿಯೆ ಅಭಿವೃದ್ಧಿಿ ಪ್ರಕ್ರಿಿಯೆಗೆ ಅಡ್ಡಿಿಯಾಗುತ್ತದೆ. 6 ತಿಂಗಳ ಕಾಲ ಮತದಾರರ ಪಟ್ಟಿಿ ಸಿದ್ಧಪಡಿಸುವಿಕೆ ನಡೆಯುತ್ತದೆ. ಒಂದು ಚುನಾವಣೆ ಸಂಬಂಧ ಒಂದು ರಾಜ್ಯ ಕನಿಷ್ಠ ಏಳೂವರೆ ತಿಂಗಳ ಕಳೆದುಕೊಳ್ಳುತ್ತದೆ. ಒಂದೇ ಮತದಾರರ ಪಟ್ಟಿಿ ಇದ್ದು, ಸಂಸದ, ಶಾಸಕರ ಆಯ್ಕೆೆಗೆ ತಲಾ ಒಂದೊಂದು ಬಟನ್ ಒತ್ತುವ ಪ್ರಕ್ರಿಿಯೆಯೇ ಒಂದು ದೇಶ ಒಂದು ಮತದಾನದ ಹಿಂದಿದೆ ಎಂದು ತಿಳಿಸಿದರು. ನೀತಿ ಆಯೋಗ, ಕಾನೂನು ಆಯೋಗವೂ ಒಂದೇ ಚುನಾವಣೆಯ ಪರವಾಗಿದ್ದು ಇದಕ್ಕೆೆ ಈಗ ಸಕಾಲ ಎಂದೇ ತಿಳಿಸಿದೆ ಎಂದು ಹೇಳಿದರು.
ಯುವಕರು ತಮ್ಮ ಚುನಾಯಿತ ಪ್ರತಿನಿಧಿಗಳನ್ನು ನೋಡುವುದಿಲ್ಲ. ಅವರು ಸಂವಹನ ನಡೆಸುವುದು ಐದು ವರ್ಷಗಳಿಗೊಮ್ಮೆೆ ಮಾತ್ರ. ಈ ಕೆಲಸದಿಂದ ಹೊರಗುಳಿಯುವುದು ನಮ್ಮ ವ್ಯವಸ್ಥೆೆ ದುರ್ಬಲಗೊಳಿಸುತ್ತದೆ ದೇಶದ ಭವಿಷ್ಯ ರೂಪಿಸುವಲ್ಲಿ ವಿದ್ಯಾಾರ್ಥಿಗಳು ಹೆಚ್ಚು ಸಕ್ರಿಿಯ ಪಾತ್ರ ವಹಿಸಬೇಕೆಂದು ಒತ್ತಾಾಯಿಸಿದರು.
ಒಂದೇ ಚುನಾವಣೆ ಎಂಬುದು ಸಾರ್ವಜನಿಕ ಹಿತಾಸಕ್ತಿಿಯ ಕ್ರಮವೇ ಹೊರತು ಇದನ್ನು ಹೇರುತ್ತಿಿಲ್ಲ ಇದೊಂದು ಪ್ರಜಾಸತ್ತಾಾತ್ಮಕ ಕ್ರಮ ಎಂದು ಅವರು ಸ್ಪಷ್ಟಪಡಿಸಿದರು. ಎಲ್ಲವೂ ನಿರೀಕ್ಷೆಯಂತೆ ನಡೆದರೆ 2034ರಲ್ಲಿ ಒಂದೇ ಚುನಾವಣೆಯು ಜಾರಿ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ನಗರ ಶಾಸಕ ಡಾ. ಶಿವರಾಜ್ ಪಾಟೀಲ, ಜಿಲ್ಲಾ ಅಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಿಹಾಳ, ತ್ರಿಿವಿಕ್ರಮ ಜೋಶಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಂಕರ ರೆಡ್ಡಿಿ, ಈ. ಶಶಿರಾಜ್, ರಾಕೇಶ್ ರಾಜಲಬಂಡಿ ಉಪಸ್ಥಿಿತರಿದ್ದರು.
ಒಂದು ರಾಷ್ಟ್ರ, ಒಂದು ಚುನಾವಣೆಯಿಂದ ದೇಶದ ಅಭಿವೃದ್ಧಿಿ ಹೆಚ್ಚು – ಹೇಮಲತಾ ನಾಯಕ್

