ಸುದ್ದಿಮೂಲ ವಾರ್ತೆ ರಾಯಚೂರು, ಅ.15:
ಕೇಂದ್ರ ಸರ್ಕಾರ ಆಂಧ್ರದ ಮುಖ್ಯಮಂತ್ರಿಿ ಚಂದ್ರಬಾಬು ನಾಯ್ಡು ಅವರ ಅಣತಿಯಂತೆ ನಡೆದುಕೊಂಡು ಒತ್ತಡದಿಂದಾಗಿ ಕೃತಕ ಬುದ್ದಿಮತ್ತೆೆ ಆಧಾರಿತ ಕೇಂದ್ರ ಮಂಜೂರು ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ವಾಗ್ದಾಾಳಿ ನಡೆಸಿದರು.
ನಗರದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಸಬ್ ಕಾ ಸಾತ್ ಸಬ್ ಕಾ ವಿಕಾಸ ಎಂಬುದು ಪ್ರಧಾನಿ ಬಾಯಿ ಮಾತಿನಲ್ಲಿಯೇ ಎಂಬುದಕ್ಕೆೆ ಚಂದ್ರಬಾಬು ನಾಯ್ಡು ಅವರ ಪ್ಲೀಸಿಂಗ್ ಆಡಳಿತಕ್ಕೆೆ ಮಣಿದು ಗೂಗಲ್ ಸಂಸ್ಥೆೆ ಮೇಲೆ ಒತ್ತಡ ಹಾಕಿ ಅಲ್ಲಿಗೆ ತೆಗೆದುಕೊಂಡು ಹೋಗಿದ್ದಾಾರೆ ಅಲ್ಲದೆ, 5 ಸಾವಿರ ಕೋಟಿ ವೌಲ್ಯದ 4 ಉದ್ದಿಮೆಗಳನ್ನು ಗುಜರಾತಿಗೆ ಕೊಂಡೊಯ್ದಿಿದ್ದಾಾರೆ ಎಂದು ದೂರಿದರು.
ಮೇಕ್ ಇನ್ ಇಂಡಿಯಾ ಬಾಯಿ ಮಾತಿಗೆ ಸೀಮಿತವಾಗಿದೆ ಪಟಾಕಿ ಈಗಲೂ ಚೀನಾದ್ದೆೆ ಘೋಷಣೆ ಮಾಡಿದ ಮೇಲೆ ಮೋದಿಯವರು ಬಹಿರಂಗವಾಗಿ ರ್ತುಘಿ, ಆಮದು ಎಲ್ಲಿಂದ ಎಷ್ಟಾಾಗಿದೆ ಎಂಬುದರ ಬಗ್ಗೆೆ ಹೇಳುತ್ತಿಿಲ್ಲ ಎಂದ ಮೇಲೆ ಎಡವಿದಂತಲ್ಲವೆ ಎಂದ ಅವರು, ಬಿಹಾರ ರಾಜ್ಯದ ವಿಧಾನ ಸಭೆ ಚುನಾವಣೆಗೂ ಮುನ್ನವೇ ಅಲ್ಲಿನ ಮಹಿಳೆಯರಿಗೆ 10 ಸಾವಿರ ಗ್ಯಾಾರಂಟಿ ಘೋಷಣೆ ಮಾಡಿದ್ದಾಾರಲ್ಲವೆ ಪ್ರತಿ ರಾಜ್ಯದ ಚುನಾವಣೆಗೂ 30-40 ಬಾರಿ ಹೋಗಿ ಪ್ರಚಾರ ಮಾಡುತ್ತಿಿದ್ದಾಾರೆ. ಮೋದಿ ಬಗ್ಗೆೆ ಗಾಯಕರಿಂದ ಹಾಡು ಹಾಡಿಸುತ್ತಿಿದ್ದಾಾರೆ. 11 ವರ್ಷಗಳ ಆಡಳಿತ ಉತ್ತಮವಾಗಿ ನಡೆಸಿದ್ದರೆ ಇಷ್ಟೆೆಲ್ಲ ಯಾಕೆ ಮಾಡಬೇಕಿತ್ತುಘಿ. ಜನ ಮೋದಿ ಅವರ ಆಡಳಿತಕ್ಕೆೆ ಮತ ಹಾಕುತ್ತಿಿದ್ದರಲ್ಲ ಇದೆಲ್ಲ ಅವರ ಜನ ವಿರೋಧಿ ಆಡಳಿತ ತೋರಿಸುತ್ತಿಿದೆ ಎಂದರು.
ಹಿಂದೆ ಇದೆ ಬಿಜೆಪಿಯವರು ತಾಲಿಬಾನಿಗಳಿಗೆ ಕಾಂಗ್ರೆೆಸ್ನವರು ಬೆಂಬಲ ಎಂದೆಲ್ಲ ಬೊಬ್ಬೆೆ ಹಾಕುತ್ತಿಿದ್ದರಲ್ಲ ಈಗ ಅದೇ ಅ್ಘಾನಿಸ್ತಾಾನದ ತಾಲಿಬಾನ್ ಸರ್ಕಾರದ ಮಂತ್ರಿಿಗೆ ರಾಜಮರ್ಯಾದೆ ಕೊಟ್ಟು ದೇಶಕ್ಕೆೆ ಆಹ್ವಾಾನಿಸಿಕೊಂಡಿದ್ದಾಾರಲ್ಲ ಈಗೇನು ಹೇಳುತ್ತಾಾರೆ ಎಂದು ತಿರುಗೇಟು ನೀಡಿದ ಅವರು ಪಾಕಿಸ್ತಾಾನಕ್ಕೆೆ ಪಾಠ ಕಲಿಸಲು ಅಘಾನಿಸ್ತಾಾನಕ್ಕೆೆ ಮಣೆ ಎಂದಾದರೂ ಹೇಳಲಿ ನೋಡೋಣ ಎಂದರು.ಪಹಲ್ಗಾಾಮ್ ದಾಳಿಯಲ್ಲಿ ನಮ್ಮವರು 26 ಜನ ಸತ್ತರು ಆದರೆ, ಮೂವರ ಹೊಡೆದುರುಳಿಸಿದ್ದವರ ಜೇಬಲ್ಲಿ ಪಾಕಿಸ್ತಾಾನದ ಚಾಕಲೇಟ ಬಿಟ್ಟರೆ ಸಿಕ್ಕಿಿದ್ದೇನು ಅಲ್ಲಿಗೆ ಅದನ್ನು ಬಿಟ್ಟು ಜಾತಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತಿಿದ್ದಾಾರೆ. ಈ ದೇಶ ಬಿಜೆಪಿ-ಕಾಂಗ್ರೆೆಸ್ನವರದ್ದಷ್ಟೆೆ ಅಲ್ಲ ಪ್ರತಿಯೊಬ್ಬರದ್ದು ಎಂಬ ಪ್ರಜ್ಞೆ ಜನರಲ್ಲೂ ಬರಬೇಕು ಎಂದರು.
ಆರ್ಎಸ್ಎಸ್ ಬಗ್ಗೆೆ ಸಚಿವ ಪ್ರಿಿಯಾಂಕ ಖರ್ಗೆ ಅವರ ಪ್ರಶ್ನೆೆ ಎತ್ತಿಿದ್ದಾಾರೆ ಅದನ್ನು ಸೈದ್ಧಾಾಂತಿಕವಾಗಿ ಎದುರಿಸುವ ಬದಲಿಗೆ ಬೆದರಿಕೆ ಹಾಕುವುದು ಎಷ್ಟರ ಮಟ್ಟಿಿಗೆ ಸರಿ ಆ ಬೆದರಿಕೆಗೆ ನಾವು ಹೆದರುವುದಿಲ್ಲ ಎಂದ ಅವರು ಖರ್ಗೆ ಅವರ ಬೆನ್ನಿಿಗೆ ಕಾಂಗ್ರೆೆಸ್ ನಿಲ್ಲುತ್ತದೆ. ಸಂಪುಟ ಪುನಾರಚನೆ ಬಗ್ಗೆೆ ನನಗೆ ಗೊತ್ತಿಿಲ್ಲ ಆದರೂ ತಪ್ಪೇನಿಲ್ಲಘಿ.ಸಿಎಂ ಕರೆದ ಔತಣಕೂಟದಲ್ಲಿ ಮುಂಬರುವ ಜಿಲ್ಲಾಾ ತಾಲೂಕು ಪಂಚಾಯತ ಚುನಾವಣೆ ಗೆಲುವಿನ ಬಗ್ಗೆೆ ಚರ್ಚೆ ನಡೆದಿದೆ ವಿನಃ ಅಲ್ಲಿ ಮತ್ತೇನು ಚರ್ಚೆ ಆಗಿಲ್ಲ ಎಂದು ಸಮರ್ಥಿಸಿಕೊಂಡರು.
ಆರ್ಟಿಪಿಎಸ್, ವೈಟಿಪಿಎಸ್ ಹೊರ ಗುತ್ತಿಿಗೆ ಕಾರ್ಮಿಕರಿಗೆ ಸೌಲಭ್ಯ ಇಲ್ಲದ ಬಗ್ಗೆೆ ಕೇಳಿ ಬಂದ ದೂರು, ಅವರ ಸಮಸ್ಯೆೆಗಳ ಪರಿಹಾರಕ್ಕೆೆ ನಾಲ್ಕು ಬಾರಿ ಸಭೆ ಮಾಡಿರುವೆ ಇತ್ಯಾಾರ್ಥ ಪಡಿಸುವ ಕೆಲಸ ಪ್ರಗತಿಯಲ್ಲಿದೆ ಎಂದ ಅವರು ಹೊರ ಗುತ್ತಿಿಗೆ ಕಾರ್ಮಿಕರಿಗೆ ಸೌಲಭ್ಯ ಕೊಡಲು ಪ್ರಯತ್ನ ನಡೆಯುತ್ತಿಿದೆ. ಗುಳೆ ತಡೆಯಲು ನಮ್ಮ ಇಲಾಖೆಯಲ್ಲಿ ಆ ಮಟ್ಟಿಿಗೆ ಸಹಕಾರ ನೀಡಲು ಅನುದಾನ, ಯೋಜನೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಸನಗೌಡ ದದ್ದಲ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ ತಲಮಾರಿ ಇತರರಿದ್ದರು.