ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.5: ದೇಶದ ಪ್ರತಿಷ್ಠಿತ ಮತ್ತು ನೂತನ ವಿನ್ಯಾಸಗಳನ್ನು ಸದಾ ಮಾರುಕಟ್ಟೆಗೆ ಪರಿಚಯಿಸುವ ಆಸ್ಟ್ರಲ್ ಬಾತ್ವೇರ್ ಬೆಂಗಳೂರಿನಲ್ಲಿ ತನ್ನ ಮೊದಲ ಶೋರೂಂ ಪ್ರಾರಂಭಿಸಿದೆ.
ಬಿಲ್ಡ್ಟೆಕ್ ಪಾಲಿಮರ್ಸ್ ಪ್ರೈ.ಲಿ. ಬೆಂಗಳೂರಿನ ಫ್ರ್ಯಾಂಚೈಸಿ ಪಡೆದಿದ್ದು, ವಿವಿಪುರಂ ವೃತ್ತದ ಸಮೀಪ ಲಾಲ್ಬಾಗ್ ಕೋಟೆ ರಸ್ತೆಯಲ್ಲಿ ನೂತನ ಶೋರೂಂ ಆರಂಭವಾಗಿದೆ. ಆಸ್ಟ್ರಲ್ ಬಾತ್ವೇರ್ ಬೆಂಗಳೂರು ಶೋರೂಂ ಉದ್ಘಾಟನಾ ಕಾರ್ಯಕ್ರಮ ಬುಧವಾರ ನಡೆಯಿತು. ಆಸ್ಟ್ರಲ್ ಲಿಮಿಟೆಡ್ ನಿರ್ದೇಶಕ ಕೈರವ್ ಎಂಜಿನಿಯರ್ ಅವರು ಶೋರೂಂ ಉದ್ಘಾಟಿಸಿದರು.
ಬಿಲ್ಡ್ಟೆಕ್ ಪಾಲಿಮರ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಕೆ. ಶ್ರೀನಿವಾಸ್ ಮಾನತಾಡಿ, ದೇಶದ ಪ್ರಮುಖ ನಗರಗಳಲ್ಲಿ ಆಸ್ಟ್ರಲ್ ಬಾತ್ವೇರ್ ಮಳಿಗೆಗಳು ಈಗಾಲೇ . ಕರ್ನಾಟಕದಲ್ಲಿ ಮೊದಲ ಬಾರಿಗೆ ಈಗ ಬೆಂಗಳೂರಿನಲ್ಲಿಯೂ ಸಹ ಆರಂಭವಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಶೋರಂ ಕರ್ನಾಟಕದಲ್ಲಿಯೇ ಮೊದಲನೆಯದಾಗಿದ್ದು, ಅತ್ಯಂತ ಸ್ಟೈಲಿಷ್ ಆದಂತಹ ಮತ್ತು ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ಪನ್ನಗಳು ದೊರೆಯುತ್ತವೆ ಎಂದು ಹೇಳಿದರು.
ಬೆಂಗಳೂರು ನಗರ ಮತ್ತು ಇತರೆ ಜಿಲ್ಲೆಗಳ ಈ ಕ್ಷೇತ್ರದ ಉದ್ಯಮಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.