ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.20: ಮಹಿಳೆಯರು ಮತ್ತು ಪುರುಷರ ದೈನಂದಿನ ಉಡುಪುಗಳ ಬ್ರಾಂಡ್ ಸೌಂಧ್ ಇಂದಿರಾನಗರದಲ್ಲಿ ತನ್ನ ನಾಲ್ಕನೇ ಮಳಿಗೆ ಆರಂಭ ಮಾಡಿದೆ.
ಬೆಂಗಳೂರಿನಲ್ಲಿ ಅತಿದೊಡ್ಡ ಮಳಿಗೆಯ ಪ್ರಾರಂಭೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು. ಹೊಸ ಆರಂಭದ ಕುರಿತು ಅಭಿಪ್ರಾಯ ಹಂಚಿಕೊಂಡ ಸೌಂದ್ ಸ್ಥಾಪಕ ಮತ್ತು ಸಿಇಓ ಸರಬ್ಜೀತ್ ಸಲುಜ, ಬೆಂಗಳೂರಿನಲ್ಲಿ ಮೊದಲ ಮಳಿಗೆಯಿಂದ ಈಗ ನಾಲ್ಕನೇ ಮಳಿಗೆವರೆಗೆ ನಮ್ಮ ಪ್ರಯಾಣವು ಅದ್ಭುತವಾಗಿದೆ ಹಾಗೂ ಸಮೃದ್ಧಿ, ಒಳನೋಟದಿಂದ ಕೂಡಿದೆ. ಬ್ರಾಂಡ್ನ ನಿರಂತರ ಬೆಳವಣಿಗೆ ಮತ್ತು ಕಲಾತ್ಮಕ ಪರಂಪರೆಯನ್ನು ಸಮಕಾಲೀನ ಆಕರ್ಷಣೆಯೊಂದಿಗೆ ಬೆಸೆಯುವ ನಮ್ಮ ವಿನ್ಯಾಸದ ನೀತಿಗೆ ಬೆಂಗಳೂರು ನಿರಂತರವಾದ ಪ್ರೀತಿಯನ್ನು ನೀಡಿದೆ. ಈ ಸೃಜನಶೀಲ ನಗರದಲ್ಲಿನ ಗ್ರಾಹಕರಿಗೆ ನಾವು ಪಾಲಿಸಬೇಕಾದ ಬದ್ಧತೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.
ಫ್ರಾಂಚೈಸಿ ಪಾಲುದಾರ ಖುಷ್ಬು ಗುಪ್ತಾ ಮತ್ತು ಶುಭಂ ಲಾಧಾ ಜತೆಗೂಡಿ ಆರಂಭಿಸಲಾಗಿರುವ ಮಳಿಗೆಯು 1200 ಚದರ ಅಡಿ ವಿಸ್ತೀರ್ಣ ಹೊಂದಿದ್ದು ಮತ್ತು ಬ್ರಾಂಡ್ನ ವಿವಿಧ ಸಂಗ್ರಹಗಳ ಮೂಲಕ ರೋಮಾಂಚನ ಹೆಚ್ಚಿಸುವ ಸೊಗಸಾದ ಒಳಾಂಗಣವನ್ನು ಹೊಂದಿದೆ. ಈ ಮಳಿಗೆಯು ಸೌಂಧ್ನ ಧರಿಸಲು ಸಿದ್ಧವಾದ ದಿರಸುಗಳ ಪರಿಪೂರ್ಣ ಸಂಗ್ರಹದೊಂದಿಗೆ ಮಹಿಳೆಯರು ಮತ್ತು ಪುರುಷರ ಸಂಪೂರ್ಣ ಶ್ರೇಣಿಯ ಉಡುಪುಗಳನ್ನು ಪ್ರದರ್ಶಿಸುತ್ತದೆ. ಈ ಸಂಗ್ರಹವು ಕುರ್ತಾ ಸೆಟ್ಗಳು ಮತ್ತು ಕಫ್ತಾನ್ಗಳು, ಟಾಪ್ಗಳು ಮತ್ತು ಟ್ಯೂನಿಕ್ಗಳು, ಜಾಕೆಟ್ಗಳು, ಫೆಸ್ಟೀವ್ ಬಂಡೀಸ್ ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿದೆ.
ಇತ್ತೀಚೆಗೆ ಸೌಂಧ್ ಪುರುಷರಿಗಾಗಿನ ತನ್ನ ಮೊದಲ ಸಂಗ್ರಹ `ದಿ ಸೌಂಧ್ ಮ್ಯಾನ್’ ಅನ್ನು ಅನಾವರಣಗೊಳಿಸಿದೆ. ಇದರಲ್ಲಿನ ಸೂಕ್ಷ್ಮ ಕುಸುರಿ ಕೆಲಸವು ಸೌಂಧ್ನ ಪ್ರಿಂಟ್ ಟೇಲ್ಗಳಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಕರಕುಶಲ ವಿನ್ಯಾಸಗಳನ್ನು ರೂಪಿಸುವಲ್ಲಿ ಹೆಸರುವಾಸಿಯಾಗಿರುವ ಸೌಂಧ್ನ ಮೊದಲ ಪುರುಷರ ಉಡುಪಿನ ಸಂಗ್ರಹವು ಮಹತ್ವದ ಹೆಜ್ಜೆಯಾಗಿದೆ. ಏಕೆಂದರೆ, ಬ್ರಾಂಡ್ ಮರುಶೋಧನೆಗೆ ಇದು ಅವಕಾಶ ಮಾಡಿಕೊಡಲಿದೆ.
ಈ ವರ್ಷದ ಆರಂಭದಲ್ಲಿ ಸೌಂಧ್ನ ಪುರುಷರ ಉಡುಪು ಸಂಗ್ರಹವು ಹೆಚ್ಚು ಮೆಚ್ಚುಗೆ ಪಡೆದ ಬಳಿಕ, ಬ್ರಾಂಡ್ ಈಗ ಮತ್ತಷ್ಟು ಕ್ಷೇತ್ರಗಳನ್ನು ಪ್ರವೇಶಿಸಲು ಸಜ್ಜಾಗಿದ್ದು, ಮಕ್ಕಳ ಉಡುಪು ವಲಯಕ್ಕೂ ಕಾಲಿಡಲು ಸನ್ನದ್ಧವಾಗಿದೆ. ಜತೆಗೆ, ಗ್ರಾಹಕರ ಪ್ರೀತಿ ಮತ್ತು ಬೆಂಬಲದೊಂದಿಗೆ ಶೂನಿಂದ ಜ್ಯುವೆಲ್ಲರಿವರೆಗೆ ಅತ್ಯಾಕರ್ಷಕ ಶ್ರೇಣಿಯ ಅಕ್ಸೆಸರಿಗಳ ಸಂಗ್ರಹವನ್ನೂ ಪರಿಚಯಿಸಲಿದೆ.