ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.10:
ಪದವಿಪೂರ್ವ ಇಲಾಖೆಯ ಸ್ವಾಯತ್ತತೆಗೆ ಭಂಗ ಉಂಟು ಮಾಡದಂತೆ ವಿಧಾನಪರಿಷತ್ನಲ್ಲಿ ಪಕ್ಷಾತೀತವಾಗಿ ಸದಸ್ಯರು ಸರ್ಕಾರವನ್ನು ಆಗ್ರಹಿಸಿದರು.
ವಿಧಾನಪರಿಷತ್ ಕಲಾಪದಲ್ಲಿ ಈ ವಿಷಯದ ಕುರಿತು ಗಮನ ಸೆಳೆಯುವ ಸೂಚನೆ ಮಂಡಿಸಿದ್ದ ಸದಸ್ಯರಾದ ಎಸ್.ವಿ.ಸಂಕನೂರ, ಎಸ್.ಎಲ್.ಭೋಜೇಗೌಡ, ಪುಟ್ಟಣ್ಣ, ಶಶೀಲ್ ಜಿ.ನಮೋಶಿ, ಡಿ.ಟಿ.ಶ್ರೀನಿವಾಸ್ ಹಾಗೂ ರಾಮೋಜಿ ಗೌಡ ರಾಜ್ಯ ಸರ್ಕಾರ ಪದವಿ ಪೂರ್ವ ಹಂತಕ್ಕೆೆ ಧಕ್ಕೆೆ ಬರುವ ರೀತಿಯಲ್ಲಿ ಸುತ್ತೋೋಲೆಗಳನ್ನು ಹೊರಡಿಸುತ್ತಿಿದ್ದು ಈ ಹಿನ್ನೆೆಲೆಯಲ್ಲಿ ಪಿಯುಸಿ ಉಪನ್ಯಾಾಸಕರು ತೀವ್ರ ಆತಂಕಕ್ಕೊೊಳಗಾಗಿದ್ದಾರೆ. ಪಿಯು ಉಪನ್ಯಾಾಸಕರು ಹೈಸ್ಕೂಲು ವಿದ್ಯಾಾರ್ಥಿಗಳಿಗೆ ಪಾಠ ಮಾಡಬೇಕು ಎಂಬುದು ತೀವ್ರ ವಿರೋಧ ವ್ಯಕ್ತವಾಗಿದೆ. ಈ ಮೂಲಕ ಪಿಯು ಉಪನ್ಯಾಾಸಕರಿಗೆ ಹಿಂಭಡ್ತಿಿ ನೀಡಿದಂತಾಗಿದೆ. ಇದರಿಂದ ಅವರ ಹಕ್ಕುಗಳಿಗೆ ಧಕ್ಕೆೆ ಬರುತ್ತದೆ ಎಂದರು.
ಈ ಹಂತದಲ್ಲಿ ಪಿಯು ಉಪನ್ಯಾಾಸಕರು ಬಿಎಡ್ ಮಾಡದೇ ಇದ್ದಲ್ಲಿ ಹೊಸ ವ್ಯವಸ್ಥೆೆಗೆ ಒಳಪಡಿಸಬೇಡಿ. ಹೊಸ ವೃಂದ ಮತ್ತು ನೇಮಕಾತಿ ಮಾಡಿ ಅವರಿಗೆ ಮಾತ್ರ ಈ ನಿಬಂಧನೆಗಳನ್ನು ಅಳವಡಿಸಿ ಎಂದು ಆಗ್ರಹಿಸಿದರು. ಜೊತೆಗೆ ಪಿಯು ಕುರಿತು ಮಾಹಿತಿ ಸಂಗ್ರಹಕ್ಕೆೆ ಡಯಟ್ ಅಧಿಕಾರಿಗಳನ್ನು ನಿಯೋಜಿಸುವುದನ್ನೂ ಸದಸ್ಯರು ವಿರೋಧಿಸಿದರು. ಸರ್ಕಾರದ ಈಗಿನ ಸುತ್ತೋೋಲೆಗಳು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವಿರುದ್ಧವಾಗಿವೆ. ಈಗ ಹೊರಡಿಸಿರುವ ಸುತ್ತೋೋಲೆಗಳನ್ನು ಹಿಂಪಡೆಯಿರಿ ಎಂದು ಆಗ್ರಹಿಸಿದರು. ಇಂತಹ ಯಾವುದೇ ಸುತ್ತೋೋಲೆ ಹೊರಡಿಸಿಲ್ಲ ಎಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷಣ ವ್ಯವಸ್ಥೆೆ ಸುಧಾರಣೆ ಮತ್ತು ಮಕ್ಕಳು ಪಿಯು ಹಂತದಲ್ಲಿ ಶಾಲೆ ಬಿಡುವುದನ್ನು ತಪ್ಪಿಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಅಪ್ಪ ಮಾಡಿದ್ದನ್ನು ಮಗ ಮುಳುಗಿಸುವುದು ಸಾಧ್ಯವೇ?
ಪಿಯು ಪ್ರತ್ಯೇಕ ಮಂಡಳಿ ಅಸ್ತಿಿತ್ವಕ್ಕೆೆ ಬಂದದ್ದು ಎಂ. ವೀರಪ್ಪ ಮೊಯ್ಲಿಿ ಸಚಿವರಾಗಿದ್ದಾಗ ಎಂದು ಸದಸ್ಯರು ಹೇಳಿದ್ದನ್ನು ಪ್ರಸ್ತಾಾಪಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಮ್ಮ ತಂದೆಯವರು ಮುಖ್ಯಮಂತ್ರಿಿ ಆಗಿದ್ದರು. ಆಗ ಮಾಡಿದ್ದನ್ನು ಮಗನಾಗಿ ಈಗ ಮುಳುಗಿಸಲು ಸಾಧ್ಯವೇ ಎಂದು ಮಾರ್ಮಿಕವಾಗಿ ಪ್ರಶ್ನಿಿಸಿದ ಅವರು ಯಾವುದೇ ಸುತ್ತೋೋಲೆಗಳನ್ನು ಹೊರಡಿಸಲಾಗಿಲ್ಲ. 14 ವರ್ಷಗಳವರೆಗೆ ಮಕ್ಕಳು ಒಂದೇ ವ್ಯವಸ್ಥೆೆ ಅಡಿಯಲ್ಲಿ ಗುಣಾತ್ಮಕ ಶಿಕ್ಷಣ ಪಡೆಯುವ ಉದ್ದೇಶದೊಂದಿಗೆ ಮತ್ತು ಪಿಯು ಹಂತದಲ್ಲಿ ಕಾಲೇಜುಗಳ ಪ್ರವೇಶಾತಿ ಹೆಚ್ಚಳಕ್ಕೆೆ ಹೀಗೆ ಮಾಡಲಾಗಿದೆ.ಡಯಟ್ನಲ್ಲಿ ತುಂಬಾ ಅಧಿಕಾರಿಗಳಿದ್ದು ಇವರು ಕೇವಲ ಮಾಹಿತಿ ಸಂಗ್ರಹಿಸಲಿದ್ದಾರೆಯೇ ವಿನ: ಪಿಯು ಉಪನ್ಯಾಾಸಕರ ಮೇಲೆ ಯಾವುದೇ ಪರಿಶೀಲನೆ ಮಾಡುವುದು ನಿಗಾ ಇಡುವುದು ಮಾಡುವುದಿಲ್ಲ. ಮಕ್ಕಳ ಹಿತ ದೃಷ್ಟಿಿಯಿಂದ ಈ ಕ್ರಮ ವಹಿಸಲಾಗಿದೆ. ಈ ಕುರಿತು ತಪ್ಪುು ಅಭಿಪ್ರಾಾಯವಾಗಿದ್ದು ಸಂಘದ ಸದಸ್ಯರ ಹಾಗೂ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಮನವರಿಕೆ ಮಾಡಿಕೊಡುವುದಾಗಿ ಹೇಳಿದರು.

