ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.11:
ಸರ್ಕಾರ ರಾಜ್ಯದಲ್ಲಿ 2022ರಲ್ಲಿ ಒಟ್ಟು 3,30,000 ಹೆಕ್ಟೇರ್ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶ ಇರುವುದಾಗಿ ಸರ್ವೋಚ್ಛ ನ್ಯಾಾಯಾಲಯಕ್ಕೆೆ ಮಾಹಿತಿ ನೀಡಿತ್ತು. ಇದರ ಪುನರ್ ಪರಿಶೀಲನೆ ನಡೆಸಿ ವಾಸ್ತವದಲ್ಲಿರುವ ಪರಿಭಾವಿತ ಅರಣ್ಯ ಪ್ರದೇಶ ಗುರುತಿಸಲು ಸಮಿತಿ ರಚನೆ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆೆ ಹೇಳಿದರು.
ವಿಧಾನಸಭೆಯಲ್ಲಿ ಗುರುವಾರ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಾಮಿ ಪ್ರಶ್ನೆೆಗೆ ಉತ್ತರಿಸಿದ ಸಚಿವರು, ಪರಿಭಾವಿತ ಅರಣ್ಯದ ಬಗ್ಗೆೆ 2022ರಲ್ಲಿ ಅಂದಿನ ಬಿಜೆಪಿ ಸರ್ಕಾರ ಸರಿಯಾಗಿ ಸರ್ವೆ, ಪರಿಶೀಲನೆ ಮಾಡದೆ ಸುಪ್ರೀೀಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದ ಪರಿಣಾಮ ಇಂದು ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಸುಮಾರು 10 ಲಕ್ಷ ಹೆಕ್ಟೇರ್ ಪರಿಭಾವಿತ ಅರಣ್ಯ ಪಟ್ಟಿಿ ಮಾಡಿ ಸುಪ್ರೀೀಂಕೋರ್ಟ್ಗೆ ಸಲ್ಲಿಸಲಾಗಿತ್ತು, ಇದರಲ್ಲಿನ ಲೋಪ ಪರಿಹರಿಸಲು ನಂತರ ಮರು ಸರ್ವೆ ಮಾಡಿ 3.3ಲಕ್ಷ ಹೆಕ್ಟೇರ್ ಎಂದು 2022ರಲ್ಲಿ ಪ್ರಮಾಣಪತ್ರ ಸಲ್ಲಿಸಿದೆ. ಇದರಲ್ಲೂ ಲೋಪದೋಷ ಇದೆ. ಆಗ ನೀವೆ ಸರ್ಕಾರದಲ್ಲಿದ್ದಿರಿ ಏಕೆ ತಪ್ಪುು ಪ್ರಮಾಣ ಪತ್ರ ಹಾಕಿದಿರಿ. ಅದಕ್ಕೆೆ ನೀವೇ ಹೊಣೆ ಎಂದು ಬಿಜೆಪಿಯವರಿಗೆ ಆರೋಪಿಸಿದರು.
ಜಿಲ್ಲಾಮಟ್ಟದಲ್ಲಿ, ವಿಭಾಗೀಯ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದ ಸಮಿತಿಗಳಲ್ಲಿ ಚರ್ಚಿಸಿ ನಂತರ ಸುಪ್ರೀೀಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಅದರಲ್ಲೂ ಗ್ರಾಾಮಗಳು, ಪಟ್ಟಾಾ ಜಮೀನು ಸೇರಿದೆ. ಹೀಗಾಗಿ ಈಗ ಮತ್ತೊೊಂದು ಅವಕಾಶವಿದ್ದು, ಸಮಿತಿ ರಚಿಸಲಾಗಿದೆ. ಅರಣ್ಯ ಇಲಾಖೆ ಜಾಗ ಗುರುತಿಸಲು ಅನುಕೂಲವಾಗುವಂತೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಲು ಆದೇಶ ಮಾಡಲಾಗಿದೆ. ಪರಿಭಾವಿತ ಅರಣ್ಯ ಪ್ರದೇಶದ ವಿಸ್ತೀರ್ಣ ಪುನರ್ ಪರಿಶೀಲಿಸಲು ನೇಮಿಸಿರುವ ಸಮಿತಿ 6 ತಿಂಗಳಿನಲ್ಲಿ ತನ್ನ ವರದಿ ನೀಡಲಿದೆ. ಇದಕ್ಕೂ ಮುನ್ನ ಪ್ರತಿ ಜಿಲ್ಲೆಗೆ ಸಂಬಂಧಿಸಿದಂತೆ ಪರಿಭಾವಿತ ಅರಣ್ಯ ವಿಸ್ತೀರ್ಣ ಕುರಿತು ಜಿಲ್ಲಾ ಕೆ.ಡಿ.ಪಿ ಸಭೆಯಲ್ಲಿ ವರದಿ ಮಂಡಿಸಿ, ಎಲ್ಲಾ ಶಾಸಕರಿಗೂ ಮಾಹಿತಿ ನೀಡುವಂತೆ ಇಲಾಖೆಯಿಂದ ಆದೇಶ ನೀಡಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆೆ ತಿಳಿಸಿದರು.
ಮಾಜಿ ಅರಣ್ಯ ಸಚಿವ ಸಿ.ಸಿ. ಪಾಟೀಲ್ ಮಾತನಾಡಿ ಹಿಂದೆ ಪ್ರಮಾಣ ಪತ್ರ ಸಲ್ಲಿಸುವಾಗ ಬೇಕಾಬಿಟ್ಟಿಿ ಮಾಡಿದ್ದು ನಿಜ. ತಪ್ಪುುಗಳಾಗಿವೆ. ಇದರಲ್ಲಿ ರಾಜಕಾರಣ ಮಾಡುವುದು ಬೇಡ. ಈಗ ಅದನ್ನು ಸರಿಪಡಿಸಿ ಎಂದು ತಿಳಿಸಿದರು. ಸಭಾಧ್ಯಕ್ಷರು ಅರಣ್ಯ ಪ್ರದೇಶದ ಜನಪ್ರತಿನಿಧಿಗಳ ಸಭೆ ಕರೆದು ಅಹವಾಲು ಆಲಿಸಲು ಸಲಹೆ ನೀಡಿದರು.
ಇದಕ್ಕೂ ಮುನ್ನ ಶಾಸಕ ಎಸ್.ಎನ್. ನಾರಾಯಣ ಸ್ವಾಾಮಿ ಅವರ ಪ್ರಶ್ನೆೆಗೆ ಉತ್ತರಿಸಿದ ಅರಣ್ಯ ಸಚಿವರು, ಪಟ್ಟಾಾ ಮತ್ತು ಖಾಸಗಿ ಜಮೀನನ್ನು ಅರಣ್ಯ ಇಲಾಖೆ ತೆರವು ಮಾಡುವುದಿಲ್ಲ, ನಿರ್ದಿಷ್ಟವಾಗಿ ಖಾಸಗಿ, ಪಟ್ಟಾಾ ಜಮೀನು ತೆರವು ಮಾಡಿಸಿದ ಬಗ್ಗೆೆ ದಾಖಲೆ ಒದಗಿಸಿದರೆ ಪರಿಶೀಲಿಸಲಾಗುವುದು.ಒಂದು ಬಾರಿ ಅರಣ್ಯ ಎಂದು ನಮೂದಾದರೆ ಅದು ಸದಾ ಅರಣ್ಯವಾಗಿರುತ್ತದೆ ಎಂದು ಸುಪ್ರೀೀಂಕೋರ್ಟ್ ತೀರ್ಪು ನೀಡಿದೆ ಎಂದ ಅವರು, ಕೋಲಾರದಲ್ಲಿ ಕರ್ನಾಟಕ ಅರಣ್ಯ ಸಂರಕ್ಷಣಾ ಅಧಿನಿಯಮ ಸೆಕ್ಷನ್ 64ಎ ಅಡಿಯಲ್ಲಿ ಪ್ರಕ್ರಿಿಯೆ ನಡೆಸಿ ತೆರವು ಮಾಡಿಸಲಾಗಿದೆ ಎಂದೂ ಸ್ಪಷ್ಟಪಡಿಸಿದರು.
ರಾಜ್ಯದ ಎಲ್ಲೆಡೆ ಪರಿಭಾವಿತ ಅರಣ್ಯ ವಿಸ್ತೀರ್ಣದ ಗೊಂದಲ ನಿವಾರಣೆ ಸರ್ಕಾರ ಸಮಿತಿ ರಚಿಸಿರುವುದು ಸ್ವಾಾಗತಾರ್ಹ ಕಾರ್ಯವಾಗಿದೆ. ಸಮಿತಿ ರಚಿಸುವ ವರದಿಯನ್ನು ಸ್ಥಳೀಯ ಶಾಸಕರ ಗಮನಕ್ಕೆೆ ತರಬೇಕು. ಜಂಟಿ ಸರ್ವೇಕಾರ್ಯ ಮುಗಿಯುವವರೆಗೆ ಜನರನ್ನು ಒಕ್ಕಲೆಬ್ಬಿಿಸಬಾರದು ಎಂದು ಶಾಸಕರುಗಳಾದ ಸಿ.ಸಿ.ಪಾಟೀಲ್, ಸುನಿಲ್ಕುಮಾರ್, ಅರಗಜ್ಞಾನೇಂದ್ರ, ಭಾಗೀರತಿ ಮರುಳ್ಯ ಸೇರಿದಂತೆ ಶಾಸಕರು ಸಚಿವರಲ್ಲಿ ಕೋರಿದರು.
ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸರ್ವೇಗೆ ಆದೇಶ ಡೀಮ್ಡ್ ಅರಣ್ಯ ವಿಸ್ತೀರ್ಣ ಪುನರ್ಪರಿಶೀಲನೆಗೆ ಸಮಿತಿ: ಈಶ್ವರ ಖಂಡ್ರೆ

