ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ: ಎಸ್ ಪಿ ರಾಜೇಶ್ವರಿ
ಪಿಂಚಣಿದಾರರಿಗೆ ಆದೇಶ ಪತ್ರ : ಎಸ್ ಪಿ ರಾಜೇಶ್ವರಿ
ಜೇವರ್ಗಿ: ತಾಲೂಕಿನ ನೆಲೋಗಿ ಹೋಬಳಿಯ ಮೋನಟಗ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಡಿಯಲ್ಲಿ ದಂಡಾಧಿಕಾರಿ ಶ್ರೀಮತಿ ಎಸ್ ಪಿ ರಾಜೇಶ್ವರ್ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಜರುಗಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ದಂಡಾಧಿಕಾರಿ ಎಸ್ಪಿ ರಾಜೇಶ್ವರಿ ಉದ್ಘಾಟಿಸಿದರು.
ನಂತರ ಸಾರ್ವಜನಿಕ ಹವಾಲುಗಳು ಸ್ವೀಕರಿಸಿ ದಂಡಾಧಿಕಾರಿಗಳು ಮಾತನಾಡಿದರು. ಸಾರ್ವಜನಿಕರಿಗೆ ದಂಡಾಧಿಕಾರಿಗಳ ಕಚೇರಿಗೆ ಬರುವುದನ್ನು ತಪ್ಪಿಸುವ ಸಲುವಾಗಿ ಮನೆ ಬಾಗಿಲಿಗೆ ಸೌಲಭ್ಯಗಳು ನೀಡುವ ಉದ್ದೇಶದಿಂದ ಸರ್ಕಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಯೋಜನೆ ಅಡಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದಕಾರಣ ಸಾರ್ವಜನಿಕರು ಈ ಒಂದು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಹಾಗೂ ವೃದ್ಧರಿಗೆ ಮಹಿಳೆಯರಿಗೆ ವೇತನ ಆದೇಶ ಪತ್ರ ನೀಡಲಾಯಿತು ಮತ್ತು ಶಾಲೆಗಳಲ್ಲಿ ಕುಡಿಯುವ ನೀರು ಸೌಲಭ್ಯ ಹಾಗೂ ನೂತನ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳಾದ ಶ್ರೀಮತಿ ಶಕುಂತಲಾ, ಅಬಕಾರಿ ಇಲಾಖೆ ಅಧಿಕಾರಿಗಳಾದ ಶ್ರೀಮತಿ ವನಿತಾ ಸೀತಾಳೆ, ಕುಮಾರಿ ದೀಪಿಕಾ ವಿಶ್ ಯು ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ರಾಜೇಶ್ ಕುಲಕರ್ಣಿ, ಶರಣು ನಾಟಿಕರ್, ಶಶಿಶೇಖರ, ಪ್ರಶಾಂತ್, ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.