ಸುದ್ದಿಮೂಲ ವಾರ್ತೆ ಬಳ್ಳಾಾರಿ/ಹೊಸಪೇಟೆ, ಅ.16:
ಅದಿರು ನಾಪತ್ತೆೆ ಪ್ರಕರಣಕ್ಕೆೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಗುರುವಾರ ಬೆಳಗ್ಗೆೆಯಿಂದಲೇ ಹೊಸಪೇಟೆ ಮತ್ತು ಬಳ್ಳಾಾರಿಯಲ್ಲಿ ಶಾಸಕ ಬಿ. ನಾಗೇಂದ್ರ ಅವರ ಬಳ್ಳಾಾರಿಯ ಆಪ್ತ ಮತ್ತು ಹೊಸಪೇಟೆಯ ಹೋಟಲ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯ ಮನೆಯನ್ನು ಶೋಧ ಮಾಡಿದ್ಧಾಾರೆ.
ಬಳ್ಳಾಾರಿಯಲ್ಲಿ ತಾಳೂರು ರಸ್ತೆೆಯ ರೇವಣಸಿದ್ದೇಶ್ವರ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿರುವ ಬಿ. ನಾಗೇಂದ್ರ ಅವರ ಆಪ್ತ ಕುರುಬರ ನಾಗರಾಜ್ ಅವರ ಮನೆಗೆ ಬಂದ ಇಡಿ ಅಧಿಕಾರಿಗಳು ಅವರ ಮನೆಯನ್ನು ಮತ್ತು ಮನೆಯಲ್ಲಿ ಸಿಕ್ಕ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾಾರೆ. ಈ ಸಂದರ್ಭದಲ್ಲಿ ಕುರುಬರ ನಾಗರಾಜ ಅವರು ಬೆಂಗಳೂರಿಗೆ ಪ್ರಕರಣದ ವಿಚಾರಣೆಗೆ ಹೋಗಿದ್ದು, ಬಳ್ಳಾಾರಿಯಲ್ಲಿ ಕುಟುಂಬದ ಸದಸ್ಯರ ಜೊತೆಯಲ್ಲಿ ವಿಚಾರಣೆ ನಡೆಯಿತು.
ಹೊಸಪೇಟೆಯಲ್ಲಿ ಪ್ರಿಿಯದರ್ಶಿನಿ ಹೊಟೇಲ್ ಮಾಲೀಕರು, ರಿಯಲ್ ಎಸ್ಟೇಟ್ ಉದ್ಯಮಿಗಳು ಆಗಿರುವ ಶ್ರೀನಿವಾಸರೆಡ್ಡಿಿ ಅವರ ಪ್ರಿಿಯದರ್ಶನಿ ಹೋಟೆಲ್, ವಿನಾಯಕ ನಗರದ ಮನೆ ಮತ್ತು ಬಸವೇಶ್ವರ ಬಡಾವಣೆಯ ಮನೆಯ ಮೇಲೆ ಇಡಿ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿಿದ್ದಾಾರೆ.