ಶಿಡ್ಲಘಟ್ಟ: ತಾಲ್ಲೂಕಿನ ಬಶೆಟ್ಟಿಹಳ್ಳಿ ಗೇಟ್ ನಲ್ಲಿರುವ ಶ್ರೀ ಸಾಯಿ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆಯ ಮಕ್ಕಳಿಗೆ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಶನಿವಾರ ಉಚಿತ ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಡಿಎಚ್ಒ ಡಾ.ವೆಂಕಟೇಶ್ಮೂರ್ತಿ ಮಾತನಾಡಿ, ವೈದ್ಯರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಪ್ರತಿ ವರ್ಷ ಜುಲೈ.೧ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಹಾಗೂ ಶ್ರೇಷ್ಠ ವೈದ್ಯ ಬಿಧನ್ ಚಂದ್ರ ರಾಯ್ ನೀಡಿರುವ ಕೊಡುಗೆ ಪರಿಗಣಿಸಿ, ಅವರ ಜ್ಞಾಪಕಾರ್ಥವಾಗಿ ರಾಷ್ಟ್ರೀಯ ವೈದ್ಯ ದಿನಾಚರಣೆ ಆಚರಿಸಲಾಗುತ್ತದೆ ಎಂದು ಹೇಳಿದರು.
ಇಂದಿನ ಮಕ್ಕಳೆ ಮುಂದಿನ ಪ್ರಜೆಗಳಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳ ಆರೋಗ್ಯವನ್ನು ಕಡೆಗಣಿಸದೆ ಅವರಿಗೆ ಕಾಲಕಾಲಕ್ಕೆ ಪೋಷ್ಠಿಕ ಆಹಾರ ನೀಡುವುದು ಆರೋಗ್ಯ ತಪಾಸಣೆ ನಡೆಸುವ ಮೂಲಕ ಆರೋಗ್ಯವಂತರಾಗಿ ಬೆಳೆಯಲು ಪೋಷಕರು ಎಚ್ಚರವಹಿಸಬೇಕು. ಇದರಿಂದ ಅವರು ಆರೋಗ್ಯಯುತ ಬೆಳೆದಲ್ಲಿ ಸದೃಢ ಭಾರತ ನಿರ್ಮಾಣ ಮಾಡಲು ಸಹಕಾರಿಯಾಗುವುದು ಎಂದು ನುಡಿದರು.
ತಮ್ಮ ವೈಯಕ್ತಿಕ ಸ್ವಚ್ಛತೆಯೊಂದಿಗೆ ಸುತ್ತಲಿನ ಪರಸರ ಸ್ವಚ್ಛತೆ ಕಾಪಾಡಬೇಕೆಂದು ವಿದ್ಯಾರ್ಥಿಗಲಿಗೆ ಸಲಹೆ ನೀಡಿದ ಅವರು, ವೈದ್ಯ ದಿನಾಚರಣೆಯಂದು ಶಾಲಾ ಆಡಳಿತ ಮಂಡಳಿಯು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರುವುದು ಶ್ಲಾಘನೀಯವಾಗಿದ್ದು, ಇತರೆ ಶಾಲೆಗಳಲ್ಲಿಯೂ ಇಂತಹ ಶಿಬಿರಗಳು ನಡೆಯಬೇಕಿದೆ ಎಂದು ಹೇಳಿದರು.
ಶಿಬಿರದಲ್ಲಿ ಡಾ.ದೇವರಾಜ್, ಡಾ.ರಾಘವೇಂದ್ರ ಶರ್ಮ, ಡಾ.ಸೋನಾಲಿ, ನೇತ್ರ ತಜ್ಞರಾದ ಡಾ.ಅಂಬರೀಶ್ ಡಾ.ಹಿದಯತುಲ್ಲಾ ಅವರ ನೇತೃತ್ವದಲ್ಲಿ ಶಾಲೆಯ ಎಲ್ಲ ಮಕ್ಕಳಿಗೆ ಕಣ್ಣಿನ ತಪಾಸಣೆ ಸೇರಿದಂತೆ ಇತರೆ ತಪಾಸಣೆಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಜೆ.ದೀಪ,ಕಾರ್ಯದರ್ಶಿ ಎಂ. ಮಂಜುನಾಥ್ ,ಮುಖ್ಯ ಶಿಕ್ಷಕಿ ಅನುಷ,ಶಿಕ್ಷಕರಾದ ಶ್ರೀಕಾಂತ್, ಚಿಕ್ಕಣ್ಣ, ಶಶಿಕಲಾ,ಸತೀಶ್,ಕಿರಿಜಾ,ವೆನ್ನಲಾ,ಸೌಮ್ಯ,ಅಕೊನೊ ನಾಗಿ,ಅಮರಾವತಿ,ಪ್ರೀತಿ,ರುತ ಕಿಯೋ,
ಮಂಜುವಾಣಿ, ಸಿಬ್ಬಂದಿಯಾದ ಸೌಮ್ಯ, ನಾಗಮಣಿ ಇದ್ದರು.