ಸುದ್ದಿಮೂಲ ವಾರ್ತೆ ಕವಿತಾಳ, ೆ.13:
ಹಳ್ಳಿಿಗಳಲ್ಲಿ ನಡೆಯುವ ಸಾಂಪ್ರದಾಯಿಕ ಕ್ರೀೆಡಾ ಚಟುವಟಿಕೆಗಳು ಗಮನ ಸೆಳೆಯುತ್ತವೆ ಎಂದು ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಾಮಿಗಳು ಹೇಳಿದರು.
ಸಮೀಪದ ಬುದ್ಧಿಿನ್ನಿಿ ಚಿನ್ನದ ಗಣಿ ಗ್ರಾಾಮದಲ್ಲಿ ಯುವ ರೈತರ ಬಳಗದ ವತಿಯಿಂದ ಶುಕ್ರವಾರ ಹಮ್ಮಿಿಕೊಂಡಿದ್ದ ಗಿರ್ಕಿ ಬಂಡಿ ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಎತ್ತುಗಳು, ದನಕರಗಳನ್ನು ಸಾಕಿ ಕಾಳಜಿ ವಹಿಸುವುದರಿಂದ ರೈತರಲ್ಲಿ ನೆಮ್ಮದಿ ಹೆಚ್ಚುತ್ತದೆ. ಹಿರಿಯರ ಮಾರ್ಗದರ್ಶನದಂತೆ ಯುವಕರು ಹಳ್ಳಿಿಗಳಲ್ಲಿ ಇಂಥ ಚಟುವಟಿಕೆಗಳು ಮಾಡುತ್ತಿಿರುವುದು ಶ್ಲಾಾಘನೀಯ ಕಾರ್ಯ. ಯಾವ ಗ್ರಾಾಮದಲ್ಲಿ ಸಂಸ್ಕಾಾರ ಇರುತ್ತದೆ ಅಂತ ಗ್ರಾಾಮದಲ್ಲಿ ಇಂತ ಹ ಚಟುವಟಿಕೆಗಳು ಹೆಚ್ಚುತ್ತದೆ ಎಂದರು
ಹೀರಾ ಸಿದ್ದರಾಮೇಶ್ವರ ಮಠದ ಅಯ್ಯಪ್ಪ ತಾತ ಹೀರಾ ಅವರು ಸಾನಿಧ್ಯ ವಹಿಸಿದ್ದರು.
14 ಜೋಡೆತ್ತುಗಳು ಭಾಗವಹಿಸಿದ್ದವು. ಎರಡು ನಿಮಿಷದಲ್ಲಿ ಅತಿವೇಗವಾಗಿ 626 ಮೀಟರ್ ಕ್ರಮಿಸಿದ ಮುಕ್ಕಣ್ಣ ಕುರುಬರ ಅವರ ಜೋಡೆತ್ತುಗಳು ಗಿರ್ಕಿ ಬಂಡಿ ಎಳೆದು ಪ್ರಥಮ ಸ್ಥಾಾನ ಗಳಿಸಿ 5 ತೊಲೆ ಬೆಳ್ಳಿಿ ಕಡಗ, ಶಿವಣ್ಣ ಜಿನ್ನಾಾಪುರ್ ದ್ವಿಿತೀಯ ಬಹುಮಾನ, ಮೂರು ತೊಲೆ ಬೆಳ್ಳಿಿ ಕಡಗ, ಹನುಮಂತ್ರಾಾಯ ದೇವದುರ್ಗ ಅವರ ಜೋಡೆತ್ತುಗಳು ತೃತಿಯ ಸ್ಥಾಾನ ಪಡೆದು 3 ಸಾವಿರ ನಗದು ಬಹುಮಾನ ಗಳಿಸಿದರು ಎಂದು ಯುವ ಮುಖಂಡ ಬಸನಗೌಡ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಾಮ ಆಡಳಿತ ಅಧಿಕಾರಿ ಸಾದಕ್ ಅಲಿ, ರೈತರಾದ ಬಸವರಾಜ, ಹನುಮನಗೌಡ, ಹಜರತ್ ಸಾಬ್, ಬಸವರಡ್ದೆೆಪ್ಪ, ಗುಂಡಪ್ಪ, ಈರನಗೌಡ ಮುದೋಳ, ತಿಮಣ್ಣ ನಾಯಕ, ಗಂಗಣ್ಣ, ರಾಮಣ್ಣ, ನರಸಣ್ಣ, ಸಣ್ಣ ಹನುಮಂತ್ರಾಾಯ, ಖಾನ್ ಸಾಬ್, ಲಕ್ಷ್ಮಣ ಇನ್ನಿಿತರ ಗ್ರಾಾಮದ ರೈತರು, ಹಿರಿಯ ಮುಖಂಡರು, ಯುವಕರು ಇದ್ದರು.
ಗ್ರಾಮೀಣ ಕ್ರೀಡೆಗಳ ಆಯೋಜನೆ ಶ್ಲಾಘನೀಯ – ನವಲಕಲ್ ಶ್ರೀ

