ಸುದ್ದಿಮೂಲ ವಾರ್ತೆ ಬೆಂಗಳೂರು, ೆ.02:
ಬೆಂಗಳೂರು ನಗರದ ಸ್ವಾಾತಂತ್ರ್ಯ ಉದ್ಯಾಾನವನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಾಮೀಣ ಉದ್ಯೋೋಗ ಖಾತರಿ ಯೋಜನೆ ಉಳಿಸಿ ಆಂದೋಲನದ ಭಾಗವಾಗಿ ಮನರೇಗಾ ರಕ್ಷಣಾ ಒಕ್ಕೂಟ-ಕರ್ನಾಟಕ ವತಿಯಿಂದ ಮಹಾ ಪಂಚಾಯತ್ ನಡೆಸಲಾಯಿತು.
ನರೇಗಾ ಯೋಜನೆಯು ಕಳೆದ ಎರಡು ದಶಕಗಳಿಂದ ದೇಶದ ಗ್ರಾಾಮೀಣ ಕೂಲಿಕಾರರು ಮತ್ತು ಸಣ್ಣ ರೈತರ ಜೀವನೋಪಾಯಕ್ಕೆೆ ಬಲವಾದ ಆಧಾರವಾಗಿತ್ತು. ಅಂತಹ ಕಾನೂನನ್ನು ಕಿತ್ತು ಹಾಕಿರುವ ಕೇಂದ್ರ ಒಕ್ಕೂಟ ಸರ್ಕಾರವು ಹೊರತಂದಿರುವ ವಿಕಸಿತ ಭಾರತ-ಗ್ಯಾಾರಂಟಿ ಾರ್ ರೋಜ್ಗಾಾರ್ ಆಂಡ್ ಆಜೀವಿಕಾ ಮಿಷನ್ ಕಾನೂನನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ರಾಜ್ಯದಾದ್ಯಂತ ಇರುವ ಸಾವಿರಾರು ಕಾರ್ಮಿಕರು ಒಂದೇ ವೇದಿಕೆಯ ಮಹಾಪಂಚಾಯತ್ನಲ್ಲಿ ಪ್ರತಿಭಟಿಸಿದರು.
ರಾಯಚೂರು ಜಿಲ್ಲೆ, ಲಿಂಗಸುಗೂರು ತಾಲ್ಲೂಕು, ಕೋಟಾ ಗ್ರಾಾಮದಿಂದ ಬಂದಿದ್ದ ಅಮರೇಗೌಡ ಎಂಬ ಕಾರ್ಮಿಕ ಮಾತನಾಡಿ, ಬಡ ಕೂಲಿಕಾರ್ಮಿಕರ ಮೇಲೆ ಕೇಂದ್ರ ಸರ್ಕಾರ ದೌರ್ಜನ್ಯ ಮಾಡುತ್ತಿಿದೆ. 2005ರಿಂದ ಉದ್ಯೋೋಗ ಖಾತ್ರಿಿಯಲ್ಲಿ ಕೆಲಸ ಮಾಡುತ್ತಿಿದ್ವಿಿ. ಆದರೆ ಈಗ ಗ್ರಾಾಮಪಂಚಾಯತಿಗೆ ಕೆಲಸ ಕೇಳೋಕೆ ಹೋದ್ರೆೆ, ಕೇಂದ್ರದಿಂದ ಅನುಮತಿ ಬಂದಿಲ್ಲ, ಇನ್ನು ಎರಡು ತಿಂಗಳು ಕೆಲಸ ಇರೋಲ್ಲ ಅಂತಾರೆ. ಹಿಂಗಾದ್ರೆೆ ಹೊಟ್ಟೆೆ ಬಟ್ಟೆೆಗೆ ಏನ್ ಮಾಡೋದು ಎಂದು ಬೇಸರ ವ್ಯಕ್ತಪಡಿಸಿದರು.
ಮನರೇಗಾ ರಕ್ಷಣಾ ಒಕ್ಕೂಟದ ಪ್ರಕಾಶ್ ಕಮ್ಮರಡಿ, ಕರ್ನಾಟಕ ಜನಶಕ್ತಿಿಯ ಮುಖ್ಯಸ್ಥರಾದ ನೂರ್ ಶ್ರೀಧರ್, ಭೂಮಿ ಮತ್ತು ವಸತಿ ಹಕ್ಕು ಸಮಿತಿಯ ಕುರ್ಮಾ ಸಮತಲ, ಜಾಗೃತ ಮಹಿಳಾ ೆಡರೇಷನ್ನ ಶಾರದ ಗೋಪಾಲ್, ರೈತ ಸಂಘದ ರಾಜ್ಯಾಾಧ್ಯಕ್ಷರಾದ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಮಾವಳ್ಳಿಿ ಶಂಕರ್, ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ, ಮಹಾಪಂಚಾಯತ್ ಸಂಘಟಕರಾದ ದೇವಿ, ಪುಟ್ಟಮಾಧು, ಗುರುರಾಜ್, ಅಭಯ್ ಕುಮಾರ್ ಮತ್ತಿಿತರರು ಉಪಸ್ಥಿಿತರಿದ್ದರು.
ಮಹಾ ಪಂಚಾಯತ್ : ಕೇಂದ್ರದ ವಿರುದ್ಧ ಮೊಳಗಿದ ಆಕ್ರೋಶ

