ರಾಯಚೂರು: ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಿದೆ.ಆದರೆ,ಕುಡಿಯಲು ನೀರಿಲ್ಲದೆ ಪರದಾಡುವಂತಾಗಿ ಹೊರಗೆ ಥಳಕು ಒಳಗೆ ಹುಳುಕು ಎನ್ನುವಂತಾಗಿದ್ದು ವಿಪರ್ಯಾಸ.
ರಾಯಚೂರು ತಾಲೂಕಿನ ಗಿಲ್ಲೆಸೂಗೂರಿ ನಲ್ಲಿ ಎಸ್ಟಿ ಇಲಾಖೆಯಿಂದ ಆರಂಭವಾದ ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಓದಲು ಪ್ರತ್ಯೇಕ ಕಟ್ಟಡ, ವಸತಿಗೆ ಪ್ರತ್ಯೇಕವ್ಯವಸ್ಥೆ ಮಾಡಲಾಗಿದೆ. ವಿದ್ಯುತ್, ಫ್ಯಾನ್, ಸಿಸಿ ಕ್ಯಾಮರಾ ಹೀಗೆ ಎಲ್ಲಾ ವ್ಯವಸ್ಥೆಯೂ ಇಲ್ಲಿದೆ. ಆದರೆ, ಇಲ್ಲಿ ಕುಡಿಯುವ ನೀರೇ ಇಲ್ಲ.
ಸುಮಾರು ನೂರಕ್ಕೂ ಹೆಚ್ಚು ಬಾಲಕರು ಮತ್ತು ಬಾಲಕಿಯರು ಕಲಿಯುತ್ತಿದ್ದಾರೆ. ಈ ಪುಟ್ಟ ಮಕ್ಕಳಿಗೆ ನೀರಿನ ಸಮಸ್ಯೆ ಇದೆ.
ಈ ವಸತಿ ಶಾಲೆಗೆ ಶಾಶ್ವತವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇಲ್ಲಿ ಹಾಕಿದ ಬೋರವೆಲ್ ಗಳು ವಿಫಲವಾಗಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಟ್ರಾಕ್ಟರ್ ಟ್ಯಾಂಕರ್ ಮೂಲಕ ಪ್ರತಿದಿನ ನೀರು ಪೂರೈಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಟ್ಯಾಂಕರ್ ಬರುವುದು ತಡವಾದರೆ, ಅಥವಾ ಬರದೇ ಇದ್ದರೆ ಮಕ್ಕಳು ನೀರಿಗಾಗಿ ಪರದಾಡಬೇಕಾಗುತ್ತದೆ.
ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಷಯ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಅವರು ಆಗ್ರಹಿಸಿದ್ದಾರೆ.