ಸುದ್ದಿಮೂಲ ವಾರ್ತೆ,
ರಾಯಚೂರು,ಏ.೫-ಕಾಂಗ್ರೆಸ್ ಪಕ್ಷದಿಂದ ರಾಯಚೂರು ನಗರ ಕ್ಷೇತ್ರಕ್ಕೆ ಸ್ಪರ್ದಿಸಲು ಹಿರಿಯ ರಾಜಕಾರಣಿ ಎನ್.ಎಸ್.ಬೋಸರಾಜುಗೆ ಟಿಕೆಟ್ ನೀಡಬೇಕೆಂದು ನಗರಸಭೆ ಮಾಜಿ ಸದಸ್ಯರಾದ ಪಿ.ನರಸಪ್ಪ ವಕೀಲರು ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪ್ರಸ್ತುತ ಸನ್ನಿವೇಶದಲ್ಲಿ ನಗರ ಕ್ಷೇತ್ರದಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಬೋಸರಾಜು ಸಮರ್ಥರಾಗಿದ್ದು ಅವರು ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ ಅವರಿಗೆ ರಾಜಕೀಯ ಅನುಭವವಿದ್ದು ಸರಳ ಸಜ್ಜನಿಕೆಯ ವ್ಯಕ್ತಿತ್ವ ಉಳ್ಳವರಾಗಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಿದ್ದಾರೆ ಅವರಿಗೆ ಇಲ್ಲಿಯ ಸಮಸ್ಯೆಗಳ ಅರಿವಿದ್ದು ಅವರಿಗೆ ಟಿಕೆಟ್ ನೀಡಬೇಕೆಂದು ಮನವಿಮಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಸಮುದಾಯಗಳನ್ನು ಸಮಾನವಾಗಿ ನೋಡಲಾಗುತ್ತದೆ ಸದ್ಯದ ಸನ್ನಿವೇಶದಲ್ಲಿ ಹಿಂದುತ್ವದ ಗಾಳಿಯಲ್ಲಿ ಬೊಸರಾಜು ಹೊರತಾಗಿ ಬೇರೆಯವರು ಸ್ಪರ್ದಿಸಿದರೆ ಪಕ್ಷಕ್ಕೆ ಜಯ ತರುವುದು ಸುಲಭವಲ್ಲ ಈ ಹಿಂದೆ ಎರೆಡು ಬಾರಿ ಮಾಜಿ ಶಾಸಕ ಸೈಯದ್ ಯಾಸೀನರವರು ಸ್ಪರ್ದಿಸಿ ಪರವಾಭವಗೊಂಡಿದ್ದಾರೆ ಈ ಬಾರಿ ಬೋಸರಾಜುಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
ದೇಶದಲ್ಲಿ ಬಿಜೆಪಿ ದಲಿತರಿಗೆ ಮುಸ್ಲಿಂರಿಗೆ ಅನುದಾನ ನೀಡುವಲ್ಲಿ ತಾರತಮ್ಯವಿದ್ದು ಇತ್ತೀಚೆಗೆ ಮುಸ್ಲಿಂ ಸಮುದಾಯಕ್ಕಿದ್ದ ಮೀಸಲಾತಿ ರದ್ದು ಮಾಡಿ ಅವರನ್ನು ಆರ್ಥಿಕ ಅಶಕ್ತ ವರ್ಗದಲ್ಲಿ ಶೇ.೧೦ರ ಮೀಸಲಾತಿಯಲ್ಲಿ ಸೇರಿಸಲಾಗಿದೆ ಅಲ್ಲಿಯೂ ನಿರ್ದಷ್ಟ ಮಾನದಂಡ ಹೇರಲಾಗಿದೆ ಎಂದರು.
ರಾಹುಲ್ ಗಾಂಧಿ ಮೇಲೆ ಮಾನನಷ್ಟ ಮೊಕ್ಕದ್ದಮೆ ಅಡಿ ಸಂಸದ ಸ್ಥಾನ ಅನರ್ಹಗೊಳಿಸಿದ್ದು ಸರಿಯಲ್ಲ ಯಾರಿಗೆ ಸಜೆಯಾಗುತ್ತದೆ ಅವರಿಗೆ ಅನರ್ಹಗೊಳಿಸಬೇಕು ಎಂದ ಅವರು ತಾವು ಈ ಹಿಂದೆ ಮಹಾದೇವಿ ವಿರುದ್ದ ಎ.ವಸಂತ ಕುಮಾರ್ ಪ್ರಕರಣದಲ್ಲಿ ಅರ್ಜಿ ಸಲ್ಲಿಸಿದಾಗ ನನ್ನ ಅರ್ಜಿ ತಿರಸ್ಕರಿಸಲ್ಪಟ್ಟುತ್ತು ಎಂದು ಹೇಳಿದರು.
ದೇಶದಲ್ಲಿ ಗೋಹತ್ಯೆ ನೆಪದಿಂದ ಅಮಾಯಕರ ಹತ್ಯೆ ಸಲ್ಲದು ಎಂದ ಅವರು ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಹನಮಂತು ನಾಯಕ,ಮನ್ಮಥ ಏಗನೂರು,ಮಾರೂಫ ಖಾನ್ ಇದ್ದರು.