ಬೆಂಗಳೂರು,ಜು.22; ನಂದಿನಿ ಬಡಾವಣೆಯ ಕೃಷ್ಣನಂದ ನಗರದಲ್ಲಿ ಶ್ರೀದೇವಿಮುತ್ತು ಮಾರಿಯಮ್ಮ ದೇವಾಲಯದ 42ನೇಹೂವಿನ ಕರಗ ಮತ್ತು ಅಗ್ನಿಕೊಂಡ ಮಹೋತ್ಸವ ವೈಭವದಿಂದ ನೆರವೇರಿತು.
ಇಲ್ಲಿ ಮಹಿಳೆ ಹೂವಿನಕರಗ ಹೂರುವುದು ವಿಶೇಷವಾಗಿದೆ. ದೇವಿ ಆರಾಧಕರದ ಶ್ರೀ ಪದ್ಮಾವತಿ ಅಮ್ಮನವರು ಸತತ 42 ವರ್ಷಗಳಿಂದ ಹೂವಿನ ಕರಗ ಹೊರುತ್ತಿರುವುದು ವಿಶೇಷವಾಗಿದೆ. ಈ ಬಾರಿಯೂ ಕರಗ ಹೊತ್ತು ಸಂಭ್ರಮಿಸಿದರು. ಮಹಿಳೆಯೊಬ್ಬರು ಕರಗ ಹೊರುವುದು ತೀರಾ ಅಪರೂಪ. ಆದರೆ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕರ ಹೊತ್ತಿರುವುದು ದಾಖಲೆಯಾಗಿ ಪರಿಣಮಿಸಿದೆ.
ಕೃಷ್ಣನಂದ ನಗರದ ದೇವಾಲಯದಿಂದ ಹೂವಿನ ಕರಗ ಮೆರವಣಿಗೆ ಹೊರಟು ಯಶವಂತಪುರದ ಎಪಿಎಂಸಿ ಯಾರ್ಡ್. ಗೌತಮ್ ನಗರ, ಮಾರಪ್ಪನ ಪಾಳ್ಯ. ಸೋಮೇಶ್ವರ ನಗರ ದ ಮುಖ್ಯಬೀದಿಗಳಲ್ಲಿ ಸಂಚರಿಸಿ ರಾತ್ರಿ 10 ಗಂಟೆಗೆ ಅಗ್ನಿಕುಂಡವನ್ನು ತುಳಿಯುವುದರ ಮೂಲಕ ಸಂಪನ್ನವಾಯಿತು. ಭಕ್ತಾದಿಗಳು ಭಕ್ತಭಾವದಿಂದ ಅಗ್ನಿ ಕುಂಡ ತುಳಿದು ಹರಕೆ ತೀರಿಸಿದರು.