ಸುದ್ದಿಮೂಲ ವಾರ್ತೆ ರಾಯಚೂರು, ಡಿ.14
ಕಲಾ ತಪಸ್ವಿಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಚಿತ್ರಕಲಾ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿತ್ತು.
ನಗರದ ಹೊರವಲಯದಲ್ಲಿನ ಕನಕದಾಸ ಅನಾಥಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ಚಿತ್ರ ಇರುವ ಕಾಗದಗಳನ್ನು ನೀಡಿ ಬಣ್ಣ ತುಂಬುವ ಸ್ಪರ್ಧೆ ಆಯೋಜಿಸಲಾಗಿತ್ತು. ಮಕ್ಕಳಲ್ಲಿ ಚಿತ್ರಕಲೆ ಹವ್ಯಾಾಸ ಉತ್ತೇಜಿಸಲು ಮತ್ತು ಅವರಲ್ಲಿ ಅಡಗಿದ ಸೃಜನಶೀಲತೆಗೆ ವೇದಿಕೆ ಒದಗಿಸಲು ಸ್ಪರ್ಧೆ ಆಯೋಜಿಸಿದ್ದಾಾಗಿ ಆಯೋಜಕರು ತಿಳಿಸಿದ್ದಾಾರೆ.
ವಿಜೇತ ವಿದ್ಯಾಾರ್ಥಿಗಳಿಗೆ ಸ್ಮರಣಿಕೆ, ಪದಕಗಳು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖಂಡ ಯು.ಗೋವಿಂದ ರೆಡ್ಡಿಿ, ಈಶ್ವರ ಮಡಿವಾಳ, ವ್ಯಂಗ್ಯಚಿತ್ರ ಕಲಾವಿದ ಈರಣ್ಣ ಬೆಂಗಾಲಿ, ರಾಘವೇಂದ್ರ ಇಲ್ಕಲ್, ಅಶೋಕ ಸೇರಿ ವಿದ್ಯಾಾರ್ಥಿಗಳಿದ್ದರು.
ಚಿತ್ರಕಲೆ ಸ್ಪರ್ಧೆ, ಬಹುಮಾನ ವಿತರಣೆ

